ಕೋವಿಡ್-19: ಐಟಿ ರಿಟರ್ನ್ಸ್ ಫಾರ್ಮ್ ಪರಿಷ್ಕರಣೆ ಮಾಡಿದ ಆದಾಯ ತೆರಿಗೆ ಇಲಾಖೆ! 

ಲಾಕ್ ಡೌನ್ ಹಿನ್ನೆಲೆಯಲ್ಲಿ ಹಲವು ಯೋಜನಗಳ ಅವಧಿಯನ್ನು ವಿಸ್ತರಿಸಲಾಗಿದ್ದು ಇದರ ಲಾಭ ತೆರಿಗೆ ಪಾವತಿ ಮಾಡುವವರಿಗೆ ಲಭ್ಯವಾಗುವಂತೆ ಮಾಡಲು ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಂಡಿದೆ. 
ಕೋವಿಡ್-19: ಐಟಿ ರಿಟರ್ನ್ಸ್ ಫಾರ್ಮ್ ಪರಿಷ್ಕರಣೆ ಮಾಡಿದ ಆದಾಯ ತೆರಿಗೆ ಇಲಾಖೆ!
ಕೋವಿಡ್-19: ಐಟಿ ರಿಟರ್ನ್ಸ್ ಫಾರ್ಮ್ ಪರಿಷ್ಕರಣೆ ಮಾಡಿದ ಆದಾಯ ತೆರಿಗೆ ಇಲಾಖೆ!

ನವದೆಹಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಹಲವು ಯೋಜನಗಳ ಅವಧಿಯನ್ನು ವಿಸ್ತರಿಸಲಾಗಿದ್ದು ಇದರ ಲಾಭ ತೆರಿಗೆ ಪಾವತಿ ಮಾಡುವವರಿಗೆ ಲಭ್ಯವಾಗುವಂತೆ ಮಾಡಲು ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಂಡಿದೆ. 

ಲಾಕ್ ಡೌನ್ ವಿಸ್ತರಣೆಯ ಲಾಭವನ್ನು ತೆರಿಗೆ ಪಾವತಿದಾರರಿಗೆ ನೀಡಲು ಐ-ಟಿ ರಿಟರ್ನ್ ಫಾರ್ಮ್ ಗಳನ್ನು ಪರಿಷ್ಕರಣೆ ಮಾಡಿದೆ. 

ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ತೆರಿಗೆ ಪಾವತಿದಾರರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರಕಾರ 1961ರ ಆದಾಯ ತೆರಿಗೆ ಕಾಯ್ದೆಯಡಿ, ಹಲವು ಯೋಜನೆಗಳ ಅವಧಿಯನ್ನು 2020ರ ಜೂನ್‌ 30ರವರೆಗೆ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ತೆರಿಗೆ ಪಾವತಿದಾರರು 2020ರ ಎಪ್ರಿಲ್‌ 1 ರಿಂದ ಜೂನ್‌ 30ರವರೆಗೆ ನಡೆಸಿದ ವ್ಯವಹಾರಗಳ ಮೇಲಿನ ರಿಟರ್ನ್ಸ್ ಪಡೆಯಲು ಅನುಕೂಲವಾಗುವಂತೆ 2019-20ರ ಆರ್ಥಿಕ ಸಾಲಿನ ‘ರಿಟರ್ನ್ ಫಾರ್ಮ್ಸ್’ನಲ್ಲಿ ಸೂಕ್ತ ಪರಿಷ್ಕರಣೆ ಮಾಡಲಾಗುತ್ತಿದೆ.

ಅಗತ್ಯ ಬದಲಾವಣೆಗಳನ್ನು ಸೇರಿಸಿದ ನಂತರ ಮೇ 30ರೊಳಗೆ ರಿಟರ್ನ್ ಫೈಲಿಂಗ್‌ ಸೌಲಭ್ಯ ಸಿಗುವಂತೆ ಮಾಡಲಾಗುವುದು ಎಂದು ಸಿಬಿಡಿಟಿ (ಸೆಂಟ್ರಲ್‌ ಬೋರ್ಡ್‌ ಆಫ್ ಡೈರೆಕ್ಟ್ ಟ್ಯಾಕ್ಸಸ್‌) ತಿಳಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com