ಕೊರೋನಾ ಎಫೆಕ್ಟ್: ನೆಟ್‌ಫ್ಲಿಕ್ಸ್ ಗೆ 15 ದಶಲಕ್ಷ  ಹೊಸ ಚಂದಾದಾರರು!

ಕೊರೋನಾವೈರಸ್  ಹರಡುವಿಕೆಯಿಂದ ಉಂಟಾದ ಲಾಕ್‌ಡೌನ್ ಆನ್‌ಲೈನ್  ಬಳಕೆದಾರರ ಸಂಖ್ಯೆ ಹೆಚ್ಚುವಂತೆ ಮಾಡಿದೆ. ಈ ವೇಳೆ ನೆಟ್‌ಫ್ಲಿಕ್ಸ್ ತನ್ನ ಮೊದಲ ತ್ರೈಮಾಸಿಕದಲ್ಲಿದಾಖಲೆಯ  15.8 ಮಿಲಿಯನ್ ಹೊಸ ಚಂದಾದಾರರನ್ನು ಪಡೆದುಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊರೋನಾವೈರಸ್  ಹರಡುವಿಕೆಯಿಂದ ಉಂಟಾದ ಲಾಕ್‌ಡೌನ್ ಆನ್‌ಲೈನ್  ಬಳಕೆದಾರರ ಸಂಖ್ಯೆ ಹೆಚ್ಚುವಂತೆ ಮಾಡಿದೆ. ಈ ವೇಳೆ ನೆಟ್‌ಫ್ಲಿಕ್ಸ್ ತನ್ನ ಮೊದಲ ತ್ರೈಮಾಸಿಕದಲ್ಲಿದಾಖಲೆಯ  15.8 ಮಿಲಿಯನ್ ಹೊಸ ಚಂದಾದಾರರನ್ನು ಪಡೆದುಕೊಂಡಿದೆ.

ದಿ ವರ್ಜ್ವರದಿಯಂತೆ ನೆಟ್‌ಫ್ಲಿಕ್ಸ್ ಪ್ಲಾಟ್‌ಫಾರ್ಮ್‌ನ ಚಂದಾದಾರರ ಸಂಖ್ಯೆಯು ಸಂಸ್ಥೆಯ ನಿರೀಕ್ಷೆಗಿಂತಲೂ ಅರ್ಧಪಟ್ಟು ಹೆಚ್ಚಳವಾಗಿದೆ. ಸಂಸ್ಥೆಯು, 7.2 ಮಿಲಿಯನ್ ಹೊಸ ಚಂದಾದಾರರ ನಿರೀಕ್ಷೆಯಲ್ಲಿತ್ತು.

ಜನಪ್ರಿಯ ಆನ್‌ಲೈನ್ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿರುವ ನೆಟ್‌ಫ್ಲಿಕ್ಸ್ ಈಗ ಜಗತ್ತಿನಾದ್ಯಂತ 182 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಕಂಪನಿಯ ತ್ರೈಮಾಸಿಕ ಆದಾಯವು 5.77 ಬಿಲಿಯನ್ ಯುಎಸ್ ಡಾಲರ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com