ಲಾಕ್ ಡೌನ್: ಟಾಪ್ ಎನ್ಎಸ್ಇ ಕಂಪನಿಗಳಿಗೆ ವೇತನ ನೀಡುವುದಕ್ಕೂ ಹಣವಿರುವುದಿಲ್ಲ! 

ಲಾಕ್ ಡೌನ್ ಪರಿಣಾಮ ಉದ್ಯಮಗಳಿಗೆ ತೀವ್ರ ಹೊಡೆತಬಿದ್ದಿದ್ದು, ರಾಷ್ಟ್ರೀಯ ಷೇರು ವಿನಿಮಯ (ಎನ್ಎಸ್ಇ) ಅಡಿ ಬರುವ ಟಾಪ್ 100 ಸಂಸ್ಥೆಗಳ ಪೈಕಿ ಶೇ.27 ರಷ್ಟು ಸಂಸ್ಥೆಗಳಿಗೆ ವೇತನ ನೀಡುವುದೂ ಕಷ್ಟಸಾಧ್ಯವಾಗಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. 
ಲಾಕ್ ಡೌನ್: ಟಾಪ್ ಎನ್ಎಸ್ಇ ಕಂಪನಿಗಳಿಗೆ ವೇತನ ನೀಡುವುದಕ್ಕೂ ಹಣವಿರುವುದಿಲ್ಲ!
ಲಾಕ್ ಡೌನ್: ಟಾಪ್ ಎನ್ಎಸ್ಇ ಕಂಪನಿಗಳಿಗೆ ವೇತನ ನೀಡುವುದಕ್ಕೂ ಹಣವಿರುವುದಿಲ್ಲ!

ಮುಂಬೈ: ಲಾಕ್ ಡೌನ್ ಪರಿಣಾಮ ಉದ್ಯಮಗಳಿಗೆ ತೀವ್ರ ಹೊಡೆತಬಿದ್ದಿದ್ದು, ರಾಷ್ಟ್ರೀಯ ಷೇರು ವಿನಿಮಯ (ಎನ್ಎಸ್ಇ) ಅಡಿ ಬರುವ ಟಾಪ್ 100 ಸಂಸ್ಥೆಗಳ ಪೈಕಿ ಶೇ.27 ರಷ್ಟು ಸಂಸ್ಥೆಗಳಿಗೆ ವೇತನ ನೀಡುವುದೂ ಕಷ್ಟಸಾಧ್ಯವಾಗಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. 
 
ಡಿಯೋಲಾಯ್ಟ್ ಅಧ್ಯಯನ ವರದಿಯ ಪ್ರಕಾರ ಲಾಕ್ ಡೌನ್ ನಿಂದಾಗಿ ಸಂಸ್ಥೆಗಳ ಲಾಭ ಒಂದು ವೇಳೆ ಶೇ.30 ರಷ್ಟು ಕುಸಿದರೆ, 100 ಕಂಪನಿಗಳ ಪೈಕಿ 27 ಕಂಪನಿಗಳ ಬಳಿ ಸಂಬಳವನ್ನು ಭರಿಸುವ ಶಕ್ತಿಯೂ ಇರುವುದಿಲ್ಲ. 

ಎಲ್ಲಾ ವರ್ಗಗಳಲ್ಲಿಯೂ ನಿಧಾನಗತಿ ಎದುರಾಗುವುದರಿಂದ ಸಂಸ್ಥೆಗಳು ವೇತನ ನೀಡುವ ತಮ್ಮ ಸಾಮರ್ಥ್ಯದ ಮೌಲ್ಯಮಾಪನ ಮಾಡಿಕೊಳ್ಳಲೇಬೇಕಾಗಿದೆ ಎಂದು ಎನ್ಎಸ್ ಸಿ ಅಡಿಯಲ್ಲಿ ಬರುವ 100 ಸಂಸ್ಥೆಗಳ ಅಧ್ಯಯನ ನಡೆಸಿರುವ ಡಿಯೋಲಾಯ್ಟ್ ಸಲಹೆ ನೀಡಿದೆ.  

ಈ 27 ಸಂಸ್ಥೆಗಳ ಹೆಸರನ್ನು ಡಿಯೋಲಾಯ್ಟ್ ಬಹಿರಂಗಪಡಿಸಿಲ್ಲ. ಆದರೆ ಈ ಸಂಸ್ಥೆಗಳು ಸಾಲ ಮಾಡುವ ಪರಿಸ್ಥಿತಿ ಎದುರಾಗುತ್ತದೆ. ಉಳಿದ ಸಂಸ್ಥೆಗಳಿಗೆ ಕಾರ್ಯನಿರ್ವಹಣಾ ವೆಚ್ಚಗಳನ್ನು 5.5 ತಿಂಗಳವರೆಗೆ ಸರಿದೂಗಿಸುವುದು ಕಷ್ಟವಾಗುವುದಿಲ್ಲ. ಆದರೆ ದುರ್ಬಲವಾಗಿರುವ 20 ಸಂಸ್ಥೆಗಳಿಗೆ ಕಾರ್ಯನಿರ್ವಹಣಾ ವೆಚ್ಚಗಳನ್ನು ಒಂದು ತ್ರೈಮಾಸಿಕದ ವರೆಗು ನಿಭಾಯಿಸುವುದು ಕಷ್ಟಸಾಧ್ಯ ಎಂದು ಡಿಯೋಲಾಯ್ಟ್ ಅಧ್ಯಯನ ವರದಿ ಹೇಳಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com