ಆಗಸ್ಟ್ 31 ನಂತರ ಆರ್‌ಬಿಐ ಇಎಂಐ ಪಾವತಿ ಅವಧಿ ಮತ್ತೆ ವಿಸ್ತರಿಸುವ ಸಾಧ್ಯತೆ ಕಡಿಮೆ

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಆಗಸ್ಟ್ 31ರ ನಂತರ ಇಎಂಐ ಪಾವತಿ ಅವಧಿಯನ್ನು ಮತ್ತೆ ವಿಸ್ತರಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್
ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಆಗಸ್ಟ್ 31ರ ನಂತರ ಇಎಂಐ ಪಾವತಿ ಅವಧಿಯನ್ನು ಮತ್ತೆ ವಿಸ್ತರಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್‌ಬಿಐ ನೀಡಿದ್ದ ಸಾಲ ಮರುಪಾವತಿ ರಿಲೀಫ್‌ (ಮೊರಟೋರಿಯಂ) ಆಗಸ್ಟ್‌ 31ಕ್ಕೆ ಅಂತ್ಯಗೊಳ್ಳಲಿದ್ದು, ಮುಂದಿನ ತಿಂಗಳಿಂದ ಎಂದಿನಂತೆ ಇಎಂಐ ಪಾವತಿ ಶುರುವಾಗುವ ಸಾಧ್ಯತೆ ಇದೆ.

ಕೊವಿಡ್-19 ನಿಂದ ಏಕಾಏಕಿ ಸಂಭವಿಸಿದ ಸಮಸ್ಯೆಗಳನ್ನು ಪರಿಹರಿಸದೆ ಸಾಲಗಾರರ ಇಎಂಐ ಅವಧಿಯನ್ನು ವಿಸ್ತರಣೆ ಮಾಡುವುದರಿಂದ ಆರ್ಥಿಕ ವಹಿವಾಟಿನ ಮೇಲೆ ಪರಿಣಾಮ ಬೀರಬಹುದು ಎಂದು ರಿಸರ್ವ್ ಬ್ಯಾಂಕ್ ಆಗಸ್ಟ್ 31 ರ ನಂತರ ಬ್ಯಾಂಕ್ ಸಾಲಗಳ ಮರುಪಾವತಿಸುವ ಅವಧಿಯನ್ನು ಮತ್ತೆ ವಿಸ್ತರಿಸುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ಲಾಕ್‌ಡೌನ್‌ ಪರಿಣಾಮ ಸಾಮಾನ್ಯ ವ್ಯವಹಾರ ಚಟುವಟಿಕೆಗಳಲ್ಲಿನ ಅಡೆತಡೆಯಿಂದಾಗಿ ವ್ಯವಹಾರಗಳು ಮತ್ತು ವ್ಯಕ್ತಿಗಳು ಹಣಕಾಸಿನ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡಲು ಆರ್ ಬಿಐ 2020 ರ ಮಾರ್ಚ್ 1 ರಿಂದ ಆರು ತಿಂಗಳವರೆಗೆ ಸಾಲ ಮರುಪಾವತಿಸುವ ಅವಧಿ ವಿಸ್ತರಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com