ಸೆಬಿ ಆರೋಪಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಹಾರಾ ಪರಿವಾರ್
ಲಖನೌ: ಸಹರಾ ಇಂಡಿಯಾ ಪರಿವಾರ್ ಕಂಪನಿ ಭಾರತೀಯ ಭದ್ರತೆ ಮತ್ತು ವಿನಿಮಯ ಮಂಡಳಿ (ಸೆಬಿ) ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ.
ಅರ್ಜಿದಾರರ ಪ್ರಕಾರ, ಸಹಾರಾ ಕಂಪನಿಯಿಂದ 62 ಸಾವಿರದ 602 ಕೋಟಿ ರೂಪಾಯಿ ಠೇವಣಿ ಕೇಳುತ್ತಿರುವ ಸೆಬಿ ಕ್ರಮ ಸರಿಯಿಲ್ಲ ಮತ್ತು ಇದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ. ಸಹಾರಾ ತನ್ನ ಅರ್ಜಿಯಲ್ಲಿ , ಸೆಬಿ ಸುಪ್ರೀಂಕೋರ್ಟ್ ನ ದಾರಿ ತಪ್ಪಿಸಿದೆ ಮತ್ತು ಸಹಾರಾ ವಿರುದ್ಧ ಸಾರ್ವಜನಿಕರಲ್ಲಿ ಆಕ್ರೋಶ ಮೂಡುವಂತೆ ಮಾಡಿದೆ ಎಂದು ಆಕ್ಷೇಪಿಸಿದೆ.
2017ರ ಫೆಬ್ರವರಿ 6 ರ ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಕಂಪನಿಯ ಬಡ್ಡಿಯನ್ನು ಹೊರತುಪಡಿಸಿ ಕೇವಲ ಅದರ ಮೂಲ ಮೊತ್ತಕ್ಕೆ ಸಂಬಂಧಿಸಿದಂತೆ ಕಾಳಜಿ ವ್ಯಕ್ತಪಡಿಸಿತ್ತು. ಆದರೆ, ಸೆಬಿ ತನ್ನ ಲೆಕ್ಕಾಚಾರದಲ್ಲಿ ಬಡ್ಡಿ ಮೊತ್ತವನ್ನು ಕೂಡಾ ಸೇರಿಸಿದೆ ಎಂದು ಸಹಾರಾ ಆರೋಪಿಸಿದೆ.
ಸೆಬಿ- ಸಹಾರಾ ಮರುಪಾವತಿ ಖಾತೆಯಲ್ಲಿ ಇರಬೇಕಾದ 24029.73 ಕೋಟಿ ರೂಪಾಯಿ ಬದಲಿಗೆ ಸದ್ಯ 22,500 ಕೋಟಿ ರೂಪಾಯಿ ಮಾತ್ರ ಇದೆ. ಆದ್ದರಿಂದ ಸಹಾರಾ ಕೇವಲ 1529 ಕೋಟಿ ರೂ. ಪಾವತಿಸಬೇಕಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ