ಎಫ್‌ಡಿಯಲ್ಲಿ ಹಣ ಹೂಡಿದರೆ, ಹಣವೂ ಸುರಕ್ಷಿತ ಮತ್ತು ಲಾಭ ನಿಶ್ಚಿತ

ನಾವೆಷ್ಟು ಮಂದಿ ಹಣ ಉಳಿತಾಯ ಮಾಡುತ್ತೇವೆ? ಹಣ ಉಳಿತಾಯ ಮಾಡುವುದೆಂದರೆ ಒಂದೆಡೆ ಕೂಡಿ ಇಡುವುದೇ? ಖಂಡಿತವಾಗಿಯೂ ಅಲ್ಲ. ಹಾಗಾದರೆ ಬ್ಯಾಂಕಿನ ನಮ್ಮ ಉಳಿತಾಯ ಖಾತೆಯಲ್ಲಿ ಇಟ್ಟು ಬಿಡುವುದೆ? ಅದೂ ಅಲ್ಲ.
ಪಿಎನ್ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್
ಪಿಎನ್ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್

ಹಣ ನಮ್ಮ ಇಂದಿನ ಅಗತ್ಯಗಳನ್ನು ತೀರಿಸುವ ಸಾಧನವಷ್ಟೇ ಅಲ್ಲ. ಅದು ನಮ್ಮ ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವುದಕ್ಕೆ ಇರುವ ಭರವಸೆಯೂ ಹೌದು. ಹಲವು ಸವಾಲುಗಳನ್ನು ಎದುರಿಸುತ್ತಾ, ಒತ್ತಡಗಳ ನಡುವೆ ನಮ್ಮೆಲ್ಲಾ ಶ್ರಮವನ್ನು ವ್ಯಯಿಸಿ ದುಡಿಯುವುದು ಹಣಕ್ಕಾಗಿ. ಅದು ನಮ್ಮಗಳ ಜೀವನದ ಮೂಲಭೂತ ಅಗತ್ಯಗಳ ಜೊತೆಗೆ ಹಲವು ಆಸೆ, ಆಕಾಂಕ್ಷೆಗಳನ್ನು ಈಡೇರಿಸುತ್ತದೆ. ಆಪತ್ತುಗಳಿಂದ ಕಾಪಾಡುತ್ತದೆ. ನೆಮ್ಮದಿಯ, ಸುರಕ್ಷತೆಯ ಜೀವನ ನಡೆಸುವುದಕ್ಕೆ, ನಮ್ಮ ಮಕ್ಕಳ, ನಮ್ಮ ಭವಿಷ್ಯದ ದಿನಗಳಲ್ಲೂ ನೆರವಿಗೆ ಬರುತ್ತದೆ. ಇದೇ ಕಾರಣಕ್ಕೆ ಉಳಿತಾಯ ಮಾಡುವ ಯೋಚನೆಯನ್ನು ಮಾಡುತ್ತೇವೆ. 

ನಾವೆಷ್ಟು ಮಂದಿ ಹಣ ಉಳಿತಾಯ ಮಾಡುತ್ತೇವೆ? ಹಣ ಉಳಿತಾಯ ಮಾಡುವುದೆಂದರೆ ಒಂದೆಡೆ ಕೂಡಿ ಇಡುವುದೇ? ಖಂಡಿತವಾಗಿಯೂ ಅಲ್ಲ. ಹಾಗಾದರೆ ಬ್ಯಾಂಕಿನ ನಮ್ಮ ಉಳಿತಾಯ ಖಾತೆಯಲ್ಲಿ ಇಟ್ಟು ಬಿಡುವುದೆ? ಅದೂ ಅಲ್ಲ. ಇದಕ್ಕಿಂತ ಉತ್ತಮವಾದ ಅವಕಾಶಗಳು ಇಂದು ನಮ್ಮ ಮುಂದೆ ಇವೆ. ಆದರೆ ಅವುಗಳೊಂದಿಗೆ ಕೆಲವು ಅಪಾಯಗಳೂ ಇವೆ. ಸುರಕ್ಷಿತ ಹೂಡಿಕೆ, ಅದರಿಂದ ಉತ್ತಮ ರಿಟರ್ನ್ಸ್‌ ಸಿಗುವಂತೆ ಎಚ್ಚರವಹಿಸುವುದು ನಾವು ನಮ್ಮ ಪರಿಶ್ರಮದಿಂದ ಗಳಿಸಿದ ಹಣಕ್ಕೆ ಕೊಡುವ ಬೆಲೆ! ಹಾಗಾದರೆ ನಮ್ಮ ಹಣವನ್ನು ಎಲ್ಲಿ ಹೂಡಬೇಕು? 

ಸಾಮಾನ್ಯವಾಗಿ ಈ ಪ್ರಶ್ನೆಯನ್ನು ಕೇಳಿದಾಗ ಬರುವ ಬಹುಮುಖ್ಯ ಸಲಹೆಗಳಲ್ಲಿ ಒಂದು ಮ್ಯೂಚ್ಯುವಲ್‌ ಫಂಡ್‌. ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಒಂದು ಮಾರ್ಗ. ಮ್ಯೂಚ್ಯುವಲ್‌ ಫಂಡ್‌ಗಳಲ್ಲಿ ನಾವು ತೊಡಗಿಸುವ ಹಣ, ಈಕ್ವಿಟಿ ಫಂಡ್‌ಗಳಲ್ಲಿ ಮತ್ತು ಡೆಟ್‌ ಫಂಡ್‌ಗಳಲ್ಲಿ ಹೂಡಿಕೆಯಾಗುತ್ತದೆ. ಇಲ್ಲಿ ನಷ್ಟದ ಸಾಧ್ಯತೆ ಕಡಿಮೆ ಎಂಬುದು ಹೂಡಿಕೆ ಮಾಡುವವರ ಲೆಕ್ಕಾಚಾರ. ಆದರೆ ಇವು ನಷ್ಟದ ಅಪಾಯದಿಂದ ಮುಕ್ತವೇನಲ್ಲ.  ಸ್ಟಾಕ್‌ ಎಕ್ಸ್ ಚೇಂಜ್‌ನ ಅನಿಶ್ಚಿತತೆಯಿಂದಾಗಿ ಈಕ್ವಿಟಿ ಫಂಡ್‌ಗಳ ಮೌಲ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಡೆಂಟ್‌ ಫಂಡ್‌ಗಳು ಸಾಲದ ಅಪಾಯದಲ್ಲಿರುತ್ತವೆ. ಎಷ್ಟು ಪ್ರಮಾಣದಲ್ಲಿ ಕಂಪನಿ ಹೂಡಿಕೆ ಮಾಡಿದೆ ಮತ್ತು ಭವಿಷ್ಯ ಹೇಗಿರುತ್ತದೆ ಎಂಬುದರ ಮೇಲೆ ಮ್ಯೂಚ್ಯುವಲ್‌ ಫಂಡ್‌ ಹೂಡಿಕೆ ಒಳ್ಳೆಯ ನಿರ್ಧಾರ ಹೌದೊ ಅಲ್ಲವೋ ಎಂದು ನಿರ್ಧಾರವಾಗುತ್ತದೆ.

ಹಾಗಾದರೆ ಬ್ಯಾಂಕ್‌ ಉಳಿತಾಯ ಖಾತೆಯೇ ಉತ್ತಮ, ಸುರಕ್ಷಿತವಾಗಿರುತ್ತದೆ ಎಂದು ಅನ್ನಿಸಬಹುದು. ಆದರೆ ಇಲ್ಲಿ ಸಿಗುವ ಬಡ್ಡಿ ದರ 3% ರಿಂದ. 4%. ಯಾವುದೇ ಅವಧಿಗೆ ಹಣವಿಟ್ಟರೂ ಈ ಪ್ರಮಾಣದ ಬಡ್ಡಿದರ ನಮಗೆ ಅನುಕೂಲಕರವಾಗಿ ಇರುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬಡ್ಡಿದರ ಆಕರ್ಷಕವಾಗಿಲ್ಲ. ಅತ್ಯಧಿಕ ಬಡ್ಡಿದರ ನೀಡುವ ಬ್ಯಾಂಕ್‌, ಸಹಕಾರಿ ಬ್ಯಾಂಕ್‌ಗಳು ಇವೆ. ಆದರೆ ಇಲ್ಲಿ ಹಣ ಸುರಕ್ಷಿತವಾಗಿರುತ್ತದೆ ಎಂಬ ವಿಶ್ವಾಸವಿರುವುದಿಲ್ಲ. ಇನ್ನು ಕೆಲವು ಬ್ಯಾಂಕ್‌ಗಳು ಲಾಕ್‌ ಇನ್‌ ಅವಧಿಯ ಹೂಡಿಕೆಗೆ ಅವಕಾಶ ಮಾಡಿಕೊಡುತ್ತದೆ. ಹೂಡಿಕೆದಾರ ಅವಧಿ ಪೂರ್ಣವಾಗುವವರೆಗೆ ಕಾಯಬೇಕಾಗುತ್ತದೆ.

ಹೆಚ್ಚಿನ ಲಾಭ ಪಡೆಯಲು ಷೇರುಮಾರುಕಟ್ಟೆಯಲ್ಲಿ ಹೂಡಿದರೆ ಸುರಕ್ಷಿತಯದ್ದೇ ಅನುಮಾನ. ಇನ್ನು ಸುರಕ್ಷಿತವಾಗಿರುತ್ತದೆ ಎಂದು ಉಳಿತಾಯ ಖಾತೆಯ ಮೊರೆ ಹೋದರೆ ಕಡಿಮೆ ಬಡ್ಡಿ ದರಕ್ಕೆ ತೃಪ್ತರಾಗಬೇಕು. ಇವುಗಳ ಹೊರತಾದ ಉತ್ತಮ ಆಯ್ಕೆ ಇಲ್ಲವೆ? ಇದೆ. ಅದೇ ಫಿಕ್ಸೆಡ್‌ ಡಿಪಾಸಿಟ್‌ ಅಂದರೆ ನಿಶ್ಚಿತ ಠೇವಣಿ.

ಹಾಗಂದರೇನು? ಹೆಸರೇ ಹೇಳುವಂತೆ ನಿಮ್ಮ ಹಣವನ್ನು ನಿಶ್ಚಿತ ಅವಧಿಗೆ ಠೇವಣಿ ಮಾಡುವುದು. ಬ್ಯಾಂಕ್‌ ಮತ್ತು ಇತರೆ ಹಣಕಾಸು ಸಂಸ್ಥೆಗಳು ಈ ಸೇವೆಯನ್ನು ನೀಡುತ್ತಿವೆ. ನಿಶ್ಚಿತ ಠೇವಣಿ (ಎಫ್‌ಡಿ) ಸುರಕ್ಷಿತ ಹೂಡಿಕೆಗೆ ಉತ್ತಮ ಆಯ್ಕೆಯಾಗಿದ್ದು, ಇದರ ಮೂಲಕ ನೀವು ಸಾಮಾನ್ಯ ಉಳಿತಾಯ ಖಾತೆಗಿಂತ ಹೆಚ್ಚಿನ ಬಡ್ಡಿದರವನ್ನು ಗಳಿಸಬಹುದು.

ಎಲ್ಲ ಬ್ಯಾಂಕ್ಗಳು ಹಾಗೂ ಹಣಕಾಸು ಸಂಸ್ಥೆಗಳಲ್ಲಿ ನಿಶ್ಚಿತ ಠೇವಣಿ ಸೇವೆ ಲಭ್ಯವಿದೆ. ಪ್ರತಿ ಬ್ಯಾಂಕ್ ತನ್ನದೇ ನಿಶ್ಚಿತ ಠೇವಣಿ ಸೇವೆಯನ್ನು ನೀಡುತ್ತದೆ. ವಿಶೇಷ ಬಡ್ಡಿದರ, ಅವಧಿಪೂರ್ಣ ಹಣ ಹಿಂಪಡೆಯುವಾಗ ಅಥವಾ ಅವಧಿಪೂರ್ವ ಹಣ ಹಿಂಪಡೆಯುವಾಗ ಭಿನ್ನರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸುತ್ತದೆ. ನಿಶ್ಚಿತ ಠೇವಣಿಗಳು ಗ್ರಾಹಕರ ಅಗತ್ಯ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ರೂಪಿಸಲಾಗಿದೆ. ಇವುಗಳಿಂದ ಗ್ರಾಹಕರ ಪಡೆಯುವ ಸೌಲಭ್ಯಗಳು ಅಷ್ಟೇ ಮುಖ್ಯವಾದದ್ದಾಗಿದೆ.


ಇದರಲ್ಲಿ ಎರಡು ರೀತಿಯ ನಿಶ್ಚಿತ ಠೇವಣಿಗಳಿವೆ:
1.    ಸಂಚಿತ ಠೇವಣಿ: ಗಳಿಸಿದ ಬಡ್ಡಿಯನ್ನು ವಾರ್ಷಿಕವಾಗಿ ನಿಶ್ಚಿತ ಠೇವಣಿಗೆ ಜಮಾ ಮಾಡಲಾಗುತ್ತದೆ ಮತ್ತು ಅವಧಿ ಪೂರ್ಣಗೊಂಡ ಸಮಯದಲ್ಲಿ ಮೂಲ ಹಣದ ಜೊತೆಗೆ ಪಾವತಿಸಲಾಗುತ್ತದೆ. ವಾರ್ಷಿಕವಾಗಿ ಬಡ್ಡಿ ಹೆಚ್ಚಾಗುವುದರಿಂದ ಇದು ಕಾರ್ಪಸ್ ನಿರ್ಮಿಸಲು ನಿಮಗೆ ಸಹಾಯ ಮಾಡುತ್ತದೆ. ಸಂಚಿತ ಠೇವಣಿಗಳಿಗಾಗಿ ನಾವು ಕನಿಷ್ಠ ₹ 10,000 ಠೇವಣಿ ಸ್ವೀಕರಿಸುತ್ತೇವೆ.
2.    ಸಂಚಿತವಲ್ಲದ ಠೇವಣಿ: ಗಳಿಸಿದ ಬಡ್ಡಿಯನ್ನು ಒಪ್ಪಿದ ಆವರ್ತನದಲ್ಲಿ ಠೇವಣಿದಾರರಿಗೆ ಪಾವತಿಸಲಾಗುತ್ತದೆ. ಪಾವತಿಯ ಆವರ್ತನವು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಗಿರಬಹುದು. ನಿಮ್ಮ ದೈನಂದಿನ ಖರ್ಚುಗಳನ್ನು ಪೂರೈಸಲು ನಿಯಮಿತ ಬಡ್ಡಿ ಪಾವತಿಗಳನ್ನು ಬಳಸಬಹುದು.


ಮೇಲಿನ ಠೇವಣಿಗಳನ್ನು ಜಂಟಿಯಾಗಿಯೂ ಮಾಡಬಹುದು. ನೀವು ಗರಿಷ್ಠ ಮೂರುಮಂದಿಯನ್ನು ಒಳಗೊಂಡಂತೆ ಖಾತೆಯನ್ನು ತೆರೆಯಬಹುದು. ಸಂಚಿತವಲ್ಲದ ಠೇವಣಿಗಳ ಬಡ್ಡಿಯನ್ನು ಮೊದಲ ಹೆಸರಿನ ಅರ್ಜಿದಾರರಿಗೆ ಪಾವತಿಸಲಾಗುವುದು, ಮತ್ತು ಅವರು ನೀಡುವ ಡಿಸಾರ್ಜ್ಗೆ ಉಳಿದ ಸದಸ್ಯರು ಬದ್ಧರಾಗಿರುತ್ತಾರೆ. ಸಂಚಿತ ಠೇವಣಿಗಳ ಸಂದರ್ಭದಲ್ಲಿ, ಬಡ್ಡಿಯನ್ನು ಮೊದಲ ಅರ್ಜಿದಾರರ ಹೆಸರಿನಲ್ಲಿ ಸಂಗ್ರಹಿಸಲಾಗುತ್ತದೆ ಎಂದು ಪರಿಗಣಿಸಲಾಗುತ್ತದೆ. ಮುಕ್ತಾಯದ ಮರುಪಾವತಿಯನ್ನು ಎಫ್‌ಡಿ ಅರ್ಜಿ ನಮೂನೆಯಲ್ಲಿ ನೀಡಲಾದ ಸೂಚನೆಗಳ ಪ್ರಕಾರ ಮಾಡಲಾಗುತ್ತದೆ.

ಅನಿವಾಸಿ ಭಾರತೀಯರು (ಎನ್‌ಆರ್‌ಐ) ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡುವ ಅವಕಾಶವೂ ಲಭ್ಯವಿದೆ. ಇದು ಗರಿಷ್ಠ ಮೂರು ವರ್ಷಗಳ ಅವಧಿಗೆ ಮಾತ್ರ ಲಭ್ಯವಿದ್ದು, ಗಳಿಸಿದ ಯಾವುದೇ ಬಡ್ಡಿಯನ್ನು ಪಾವತಿ ಠೇವಣಿದಾರರ NRO ಖಾತೆಗೆ ಕ್ರೆಡಿಟ್ ಮೂಲಕ ಮಾಡಲಾಗುತ್ತದೆ.

ಮತ್ತೇನು ವಿಶೇಷಗಳಿವೆ?
•    ವಿವಿಧ ಬ್ಯಾಂಕ್‌ ಮತ್ತು ಎನ್‌ಬಿಎಫ್‌ಸಿಗಳಲ್ಲಿ ನಿಶ್ಚಿತ ಠೇವಣಿಗೆ ಸಿಗುವ ರಿಟರ್ನ್‌ ನಿಶ್ಚಿತವಾಗಿದ್ದು, ಸರಾಸರಿ 6-7%ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ.
•    ನೀವು ಹೆಚ್ಚಿನ ಬಡ್ಡಿ ದರವನ್ನು ನಿರೀಕ್ಷಿಸಬಹುದು. ಕಂಪನಿ ಫಿಕ್ಸೆಡ್‌ ಡಿಪಾಸಿಟ್‌ನಲ್ಲಿ ಹಣ ಹೂಡಿದರೆ ಇನ್ನೂ ಉತ್ತಮ. 
•    ನಿಶ್ಚಿತ ಠೇವಣಿಗಳನ್ನು ಪುನಃ ಸುಲಭವಾಗಿ ನವೀಕರಿಸಬಹುದು.
•    ನಿಶ್ಚಿತ ಠೇವಣಿಯ ಮೇಲೆ ಸಾಲ ಪಡೆಯುವುದು ಸುಲಭವಾಗಿರುತ್ತದೆ. ಹೆಚ್ಚಿನ ದಾಖಲೆಗಳು ಮತ್ತು ಅಡಮಾನದ ಅಗತ್ಯವಿರುತ್ತದೆ.
•    ನಿಮ್ಮ ತಿಂಗಳ ವೆಚ್ಚಗಳನ್ನು ನಿರ್ವಹಿಸಲು ಸಹಾಯವಾಗುವಂತೆ, ನೀವು ನಿಯತಕಾಲಿಕ ಬಡ್ಡಿಯ ಪಾವತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
•    ಹಿರಿಯ ನಾಗರಿಕ ಹೂಡಿಕೆ ಮಾಡುವ ನಿಶ್ಚಿತ ಠೇವಣಿಗಳಿಗೆ ಕೆಲವು ಹಣಕಾಸು ಸಂಸ್ಥೆಗಳು ಹೆಚ್ಚಿನ ಬಡ್ಡಿ ದರವನ್ನೂ ನೀಡುತ್ತವೆ.

ಪ್ರಸ್ತುತ ಹಲವು ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳು ನಿಶ್ಚಿತ ಠೇವಣಿ ಸೇವೆಯನ್ನು ನೀಡುತ್ತಿವೆಯಾದರೂ, ಉತ್ತಮ ಅಂದರೆ 8.40% ಬಡ್ಡಿದರ ಹಾಗೂ ಸುರಕ್ಷತೆಯನ್ನು ಪಿಎನ್‌ಬಿ ಹೌಸಿಂಗ್ ನಿಶ್ಚಿತ ಠೇವಣಿ ಹೆಚ್ಚು ನೀಡುತ್ತದೆ. ಹಾಗಾಗಿ ಇದು ಅನುಕೂಲಕರವೂ ಲಾಭದಾಯಕವೂ ಆಗಿದೆ. ಗ್ರಾಹಕರಮನೆ ಬಾಗಿಲಿನ ಸೇವೆಗಳನ್ನು ನೀಡುತ್ತದೆ. ಇದು 0.25% ಹೆಚ್ಚುವರಿ ಬಡ್ಡಿ ದರವನ್ನು ಹಿರಿಯ ನಾಗರಿಕರಿಗೆ ನೀಡುತ್ತದೆ.  ಜೊತೆಗೆ ಪಿಎನ್ಬಿ ಹೌಸಿಂಗ್ ಫಿಕ್ಸೆಡ್ ಡಿಪಾಸಿಟ್ಗಳಿಗೆ FAAA/CRISIL ನ ನೆಗೆಟಿವ್ ರೇಟಿಂಗ್ ಪಡೆದಿದೆ, ಅಂದರೆ ಇದು ಅತ್ಯುತ್ಕೃಷ್ಟ ಸುರಕ್ಷತೆಯನ್ನು ನೀಡುತ್ತದೆ ಎಂದರ್ಥ.  ಪಿಎನ್‌ಬಿ ವಸತಿ ಪ್ರತಿನಿಧಿಗಳು ಗ್ರಾಹಕರನ್ನು ಭೇಟಿನೀಡಿ, ಅರ್ಜಿ ಪಡೆದುಕೊಳ್ಳುತ್ತಾರೆ. ಹಣ ಹಿಂಪಡೆಯುವುದು ಉಳಿದ ಬ್ಯಾಂಕ್ಗಳಿಗೆ ಹೋಲಿಸಿದರೆ ಪಿಎನ್ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನಲ್ಲಿ ಅತ್ಯಂತ ಅನುಕೂಲಕರ ಮತ್ತು ಗ್ರಾಹಕ ಸ್ನೇಹಿಯಾಗಿದೆ. ಯಾಕೆಂದರೆ, ಠೇವಣಿಯನ್ನು ಇಟ್ಟ ದಿನಾಂಕದಿಂದ ಮೂರು ತಿಂಗಳ ನಂತರ ನಿಮ್ಮ ನಿಶ್ಚಿತ ಠೇವಣಿ ಖಾತೆಯಿಂದ ಅಕಾಲಿಕವಾಗಿ ಹಿಂತೆಗೆದುಕೊಳ್ಳುವ ಅವಕಾಶವಿದೆ. ಠೇವಣಿ ದಿನಾಂಕದಿಂದ ಆರು ತಿಂಗಳೊಳಗೆ ಅಕಾಲಿಕ ಹಿಂಪಡೆದರೆ ವಾರ್ಷಿಕ 4% ಬಡ್ಡಿ ನೀಡಲಾಗುತ್ತದೆ. ಆರು ತಿಂಗಳ ನಂತರದ ಅಕಾಲಿಕ ಹಿಂಪಡೆಯುವಿಕೆಗಾಗಿ, ಠೇವಣಿ ಚಾಲನೆಯಲ್ಲಿರುವ ಅವಧಿಗೆ ಸಾರ್ವಜನಿಕ ನಿಶ್ಚಿತ ಠೇವಣಿಯ ಅನ್ವಯಕ್ಕಿಂತ 1% ಕಡಿಮೆ ಬಡ್ಡಿದರವನ್ನು ನೀಡಲಾಗುತ್ತದೆ. ಇಷ್ಟೇಅಲ್ಲ, ಟಿಡಿಎಸ್ ಕಡಿತ ನಿರ್ದಿಷ್ಟ ಹಣಕಾಸು ವರ್ಷದಲ್ಲಿ ರೂ. 5,000 ವರೆಗಿನ ನಿಶ್ಚಿತ ಠೇವಣಿಗಳ ಮೇಲೆ ಗಳಿಸಿದ ಬಡ್ಡಿಯ ಮೇಲೆ ಯಾವುದೇ ಟಿಡಿಎಸ್ ಅನ್ನು ಕಡಿತಗೊಳಿಸಲಾಗುವುದಿಲ್ಲ.
ನಿಮ್ಮ ಹಣವನ್ನು ಪಿಎನ್ಬಿಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನ ನಿಶ್ಚಿತ ಠೇವಣಿಯಲ್ಲಿರಿಸಿ, ನಿಶ್ಚಿಂತೆಯಿಂದ ನೆಮ್ಮದಿಯಾಗಿ ಬಡ್ಡಿಯನ್ನು ಪಡೆದುಕೊಳ್ಳಬಹುದು. ನೀವು ಹೂಡಿಕೆ ಮಾಡುವ ಹಣದ ಬಗ್ಗೆ ಆತಂಕವಿರುವುದಿಲ್ಲ. ಬರುವ ಬಡ್ಡಿ ಕಡಿಮೆ ಎಂಬ ಬೇಸರವೂ ಇರುವುದಿಲ್ಲ. ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡಿರುವ ನಿರಾಂತರಕವಾಗಿ ಈ ನಿಶ್ಚಿತ ಠೇವಣಿಯಲ್ಲಿ ಹಣ ಹೂಡಬಹುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಪಿಎನ್ಬಿಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನ ಶಾಖೆಗೆ ಭೇಟಿ ನೀಡಿ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com