ಸಿಂಡಿಕೇಟ್ ಬ್ಯಾಂಕ್ ನಿಂದ 5 ಲಕ್ಷ ಕೋಟಿ ರೂ. ವಹಿವಾಟು: ಮಹತ್ವದ ಮೈಲಿಗಲ್ಲು!

ದೇಶದ ಪ್ರಮುಖ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ಐದು ಲಕ್ಷ ಕೋಟಿ ವ್ಯವಹಾರ ನಡೆಸಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದು, ತನ್ನ ಮೂರನೇ ತ್ರೈಮಾಸಿಕ ಅವಧಿಯಲ್ಲಿ 435 ಕೋಟಿ ರೂ ನಿವ್ವಳ ಲಾಭ ಗಳಿಸಿದೆ.
ಸಿಂಡಿಕೇಟ್ ಬ್ಯಾಂಕ್
ಸಿಂಡಿಕೇಟ್ ಬ್ಯಾಂಕ್

ಬೆಂಗಳೂರು: ದೇಶದ ಪ್ರಮುಖ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ಐದು ಲಕ್ಷ ಕೋಟಿ ವ್ಯವಹಾರ ನಡೆಸಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದು, ತನ್ನ ಮೂರನೇ ತ್ರೈಮಾಸಿಕ ಅವಧಿಯಲ್ಲಿ 435 ಕೋಟಿ ರೂ ನಿವ್ವಳ ಲಾಭ ಗಳಿಸಿದೆ.

ಕಳೆದ 2018 - 19ನೇ ಸಾಲಿಗೆ ಹೋಲಿಸಿದರೆ ನವ್ವಳ ಲಾಭದಲ್ಲಿ 108 ಕೋಟಿ ರೂ ಏರಿಕೆಯಾಗಿದೆ. ಒಟ್ಟಾರೆ ನಿವ್ಬಳ ಬಡ್ಡಿ ಆದಾಯದಲ್ಲಿ ಶೇ 16 ರಷ್ಟು ಏರಿಕೆ ಕಂಡಿದ್ದು, 2018 ರ ಡಿಸೆಂಬರ್ ಅಂತ್ಯಕ್ಕೆ 1619 ಕೋಟಿ ರೂ ಇದ್ದ ಆದಾಯ 2019ರ ಡಿಸೆಂಬರ್ ಅವಧಿಯಲ್ಲಿ 1871 ಕೋಟಿ ರೂ ಗೆ ಏರಿಕೆ ಕಂಡಿದೆ.

ಕೆನರಾ ಬ್ಯಾಂಕ್ ನೊಂದಿಗೆ ವಿಲೀನಗೊಳ್ಳುತ್ತಿರುವ ಸಿಂಡಿಕೇಟ್ ಬ್ಯಾಂಕ್ ತನ್ನ ಕಾರ್ಯಾಚರಣೆಯಲ್ಲಿ ಮೂರನೇ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ ತೋರಿದೆ. ಸಿಂಡಿಕೇಟ್ ಬ್ಯಾಂಕ್ ತನ್ನ ಕಾರ್ಯಾಚರಣೆ ವೆಚ್ಚದಲ್ಲಿ ಶೇ 10 ರಷ್ಟು ಇಳಿಕೆ ಮಾಡಿಕೊಂಡಿದ್ದು, 2018ರ ಡಿಸೆಂಬರ್ ಅವಧಿಯಲ್ಲಿ 1,604 ಕೋಟಿ ರೂ ನಿಂದ 2019ರ ಡಿಸೆಂಬರ್ ಅಂತ್ಯದಲ್ಲಿ 1,450 ಕೋಟಿ ರೂಗೆ ತನ್ನ ಹೊರೆಯನ್ನು ತಗ್ಗಿಸಿಕೊಂಡಿದೆ.

ಇದೇ ರೀತಿ ತನ್ನ ಕಾರ್ಯಾಚರಣೆ ಲಾಭವನ್ನು 634 ಕೋಟಿ ರೂ ನಿಂದ 1,336 ಕೋಟಿ ರೂ ಗೆ ಏರಿಕೆಮಾಡಿಕೊಂಡಿದೆ. ವಿಶೇಷ ಎಂದರೆ ಬ್ಯಾಂಕ್  2019ರ ಡಿಸೆಂಬರ್ ಅಂತ್ಯದ ವೇಳೆಗೆ 5,00,971 ಕೋಟಿ ರೂ ವಹಿವಾಟು ನಡೆಸಿ ಐದು ಲಕ್ಷ ಕೋಟಿ ರೂ ಗಡಿ ದಾಟಿದೆ. ಈ ಪ್ರಮಾಣ ಇದಕ್ಕೂ ಹಿಂದಿನ ವರ್ಷ 4,67,911 ಕೋಟಿ ರೂ ನಷ್ಟಿತ್ತು. ತನ್ನ ವಹಿವಾಟಿನಲ್ಲಿ ಶೇ 7 ರಷ್ಟು ಪ್ರಗತಿ ದಾಖಲಿಸಿದೆ.

ಠೇವಣಿಯಲ್ಲೂ ಸಹ ಏರಿಕೆ ದಾಖಲಾಗಿದ್ದು, 2,77,368 ಕೋಟಿ ರೂ ತಲುಪಿದೆ. ಕಳೆದ ವರ್ಷ ಠೇವಣಿ ಮೊತ್ತ 2,59, 064 ಕೋಟಿ ರೂ ನಿಷ್ಟಿತ್ತು. ವಿಶೇಷ ಎಂದರೆ ಅನುತ್ಪಾದಕ ಆಸ್ತಿ ಎನ್.ಪಿ.ಎನಲ್ಲಿ ಇಳಿಕೆ ದಾಖಲಾಗಿದ್ದು, 2018ರಲ್ಲಿ ಇದ್ದ 26,185 ಕೋಟಿ ರೂ ಮೊತ್ತ, 2019ರ ಡಿಸೆಂಬರ್ ವೇಳೆಗೆ 25,330 ಕೋಟಿ ರೂ ಗೆ ತಗ್ಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com