‘ಪಹಲ್’ ಯೋಜನೆಯಡಿ ಅಡುಗೆ ಅನಿಲಕ್ಕೆ ಕೇಂದ್ರದಿಂದ ಸಬ್ಸಿಡಿ

ಅಡುಗೆ ಅನಿಲ ದರವನ್ನು ತೀವ್ರ ಹೆಚ್ಚಳ ಮಾಡಿದ ಒಂದು ದಿನದ ನಂತರ, ಪಹಲ್ (ಡಿಬಿಟಿಎಲ್) ಯೋಜನೆಯಡಿ ಗ್ರಾಹಕರಿಗೆ ವಿತರಿಸಲಾಗುವ ಅಡುಗೆ ಅನಿಲಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿ ಮಾಡುತ್ತಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಗುರುವಾರ ಮಾಡಿರುವ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 
‘ಪಹಲ್’ ಯೋಜನೆಯಡಿ ಅಡುಗೆ ಅನಿಲಕ್ಕೆ ಕೇಂದ್ರದಿಂದ ಸಬ್ಸಿಡಿ
‘ಪಹಲ್’ ಯೋಜನೆಯಡಿ ಅಡುಗೆ ಅನಿಲಕ್ಕೆ ಕೇಂದ್ರದಿಂದ ಸಬ್ಸಿಡಿ

ನವದೆಹಲಿ: ಅಡುಗೆ ಅನಿಲ ದರವನ್ನು ತೀವ್ರ ಹೆಚ್ಚಳ ಮಾಡಿದ ಒಂದು ದಿನದ ನಂತರ, ಪಹಲ್ (ಡಿಬಿಟಿಎಲ್) ಯೋಜನೆಯಡಿ ಗ್ರಾಹಕರಿಗೆ ವಿತರಿಸಲಾಗುವ ಅಡುಗೆ ಅನಿಲಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿ ಮಾಡುತ್ತಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಗುರುವಾರ ಮಾಡಿರುವ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 
  
ಹಿಂದಿನ ತಿಂಗಳಿನ ಅಂತಾರಾಷ್ಟ್ರೀಯ ಮಾರುಕಟ್ಟೆ ದರವನ್ನು ಆಧರಿಸಿ, ಅಡುಗೆ ಅನಿಲ ದರವನ್ನು ಪರಿಷ್ಕರಿಸಲಾಗಿದೆ ಎಂದು ಸಚಿವಾಯ ಹೇಳಿದೆ. ‘ಪಹಲ್ (ಡಿಬಿಟಿಎಲ್) ಯೋಜನೆಯಡಿ ಗ್ರಾಹಕರಿಗೆ ವಿತರಿಸಲಾಗುವ ಅಡುಗೆ ಅನಿಲಕ್ಕೆ ಭಾರತ ಸರ್ಕಾರವು ಸಬ್ಸಿಡಿ ಸಬ್ಸಿಡಿ ಒದಗಿಸುತ್ತಿದೆ. ಪಹಲ್ ಗ್ರಾಹಕರಿಗೆ ನೀಡುವ ಸಬ್ಸಿಡಿಯನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತಿದ್ದು, ಇದು   ಮಾರುಕಟ್ಟೆ ನಿರ್ಧರಿಸಿದ ದರ ಮತ್ತು ಸಬ್ಸಿಡಿ ದರದ ನಡುವಿನ ವ್ಯತ್ಯಾಸವಾಗಿದೆ.’ ಎಂದು ಸಚಿವಾಲಯ ಹೇಳಿದೆ. 

ಸದ್ಯ ದೇಶದ ಸುಮಾರು ಶೇ97ರಷ್ಟು ಪ್ರದೇಶದಲ್ಲಿ ಅಡುಗೆ ಅನಿಲ ಜಾಲವಿದ್ದು, 27.76 ಕೋಟಿಗೂ ಹೆಚ್ಚು ಸಂಪರ್ಕಗಳನ್ನು ಒದಗಿಸಲಾಗಿದೆ. ಸುಮಾರು 27.76 ಕೋಟಿ ಗ್ರಾಹಕರ ಪೈಕಿ ಸುಮಾರು 26.12 ಕೋಟಿ ಗ್ರಾಹಕರಿಗೆ ಸಬ್ಸಿಡಿ ಹೆಚ್ಚಿಸುವ ಮೂಲಕ ಸರ್ಕಾರ ದರ ಹೆಚ್ಚಳವನ್ನು ಭರಿಸುತ್ತಿದೆ.
  
2020 ರ ಜನವರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡುಗೆ ಅನಿಲದ ದರ ಒಂದು ಮೆಟ್ರಿಕ್ ಟನ್ ಗೆ 448 ಡಾಲರ್ ನಿಂದ  567  ಡಾಲರ್ ಗೆ  ತೀವ್ರ ಏರಿಕೆಯಾಗಿದ್ದು, ಇದರಿಂದ  ದೆಹಲಿಯಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ದರ 144.50 ರೂ.ನಷ್ಟು ಏರಿಕೆಯಾಗಿದೆ.  
  
ದೇಶೀಯ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್‌ ದರ ಪ್ರತಿ ಸಿಲಿಂಡರ್ ಗೆ 714 ರೂ.ನಿಂದ   858.50 ರೂ.ಗೆ ಏರಿಕೆಯಾಗಿದೆ. ಸಬ್ಸಿಡಿ ನೀಡುವ ಗ್ರಾಹಕರಿಗೆ ಸಬ್ಸಿಡಿ ಮೊತ್ತ ರೂ. 153.86 ರಿಂದ  291.48 ರೂ.ಗೆ ಏರಿಕೆಯಾಗಿದೆ. ಪ್ರಧಾನ ಮಂತ್ರಿ ಉಜ್ವಾಲಾ ಯೋಜನೆ (ಪಿಎಂಯುವೈ) ಗ್ರಾಹಕರಿಗೆ, ಸರ್ಕಾರ ನೀಡುವ ಸಬ್ಸಿಡಿ ಪ್ರತಿ ಸಿಲಿಂಡರ್ ಗೆ ರೂ. 174.86 ರಿಂದ 312.48 ರೂ. ಗೆ ಏರಿಕೆಯಾಗಿದೆ. ಆದ್ದರಿಂದ, ದರ ಏರಿಕೆ ಪರಿಣಾಮವನ್ನು ಸರ್ಕಾರ ಸಬ್ಸಿಡಿ ಮೊತ್ತ ಹೆಚ್ಚಿಸುವುದರೊಂದಿಗೆ ಭರಿಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com