ಎರಡು ಶತಕೋಟಿ ದಾಟಿದ ವಾಟ್ಸಪ್ ಬಳಕೆದಾರರ ಸಂಖ್ಯೆ

ಸಂದೇಶ ರವಾನೆಯ ಅಪ್ಲಿಕೇಶನ್ ವಾಟ್ಸಪ್ ನ ಜಾಗತಿಕ ಬಳಕೆದಾರರ ಸಂಖ್ಯೆ ಎರಡು ಶತಕೋಟಿ ಮೈಲಿಗಲ್ಲು ತಲುಪಿದೆ ಎಂದು ಫೇಸ್‌ಬುಕ್ ಬುಧವಾರ ಹೇಳಿದೆ.

Published: 13th February 2020 07:00 PM  |   Last Updated: 13th February 2020 07:00 PM   |  A+A-


WhatsApp

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ಸ್ಯಾನ್ ಫ್ರಾನ್ಸಿಸ್ಕೊ: ಸಂದೇಶ ರವಾನೆಯ ಅಪ್ಲಿಕೇಶನ್ ವಾಟ್ಸಪ್ ನ ಜಾಗತಿಕ ಬಳಕೆದಾರರ ಸಂಖ್ಯೆ ಎರಡು ಶತಕೋಟಿ ಮೈಲಿಗಲ್ಲು ತಲುಪಿದೆ ಎಂದು ಫೇಸ್‌ಬುಕ್ ಬುಧವಾರ ಹೇಳಿದೆ.
  
ಬಳಕೆದಾರರ ಖಾಸಗಿ ಆನ್‌ಲೈನ್ ಸಂವಹನದಲ್ಲಿ ಅವರ ತ್ವರಿತ ಸಂದೇಶ ಸೇವೆಯನ್ನು ಸಂರಕ್ಷಿಸುವ ತನ್ನ ಬದ್ಧತೆಯನ್ನು ಫೇಸ್‌ಬುಕ್  ಪ್ರತಿಪಾದಿಸಿದೆ. 
  
ಹೊಸ ತಂತ್ರಜ್ಞಾನದಿಂದ ವಾಟ್ಸಪ್ ಮೂಲಕ ಕಳುಹಿಸುವ ಮಾಹಿತಿ ಸುರಕ್ಷಿತವಾಗಿರುತ್ತದೆ. ಕನ್ನ ಹಾಕುವವರು ಮತ್ತು ಅಪರಾಧಿಗಳಿಂದ ವಾಟ್ಸಪ್ ಸಂದೇಶವನ್ನು ರಕ್ಷಿಸಲು ಈ ತಂತ್ರಜ್ಞಾನ ಸಹಾಯ ಮಾಡಲಿದೆ ಎಂದು ಫೇಸ್ ಬುಕ್ ತಿಳಿಸಿದೆ.
  
ವಾಟ್ಸಪ್, 2 ಶತಕೋಟಿ ಬಳಕೆದಾರರ ಸಂಖ್ಯೆಯನ್ನು ದಾಟಿದ ವಿಶ್ವದ ಎರಡನೇ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ. ಇದರ ಮಾತೃ ಕಂಪನಿ ಫೇಸ್ ಬುಕ್, 2019 ರ ಅಂತ್ಯದ ವೇಳೆಗೆ ಪ್ರತಿ ತಿಂಗಳು 2.5 ಶತಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದೆ. 
  
2014 ರಲ್ಲಿ ವಾಟ್ಸಪ್ ಅನ್ನು 19 ಶತಕೋಟಿ ಡಾಲರ್‌ಗೆ ಫೇಸ್‌ಬುಕ್  ಖರೀದಿಸಿತ್ತು. 
  
2016 ರಲ್ಲಿ 1 ಶತಕೋಟಿ ಬಳಕೆದಾರರನ್ನು ಹೊಂದಿದ್ದ ವಾಟ್ಸಪ್, ಎರಡು ವರ್ಷಗಳಲ್ಲಿ ಬಳಕೆದಾರರ ಸಂಖ್ಯೆಯನ್ನು 1.5 ಶತಕೋಟಿಗೆ ಹೆಚ್ಚಿಸಿಕೊಂಡಿತ್ತು.

Stay up to date on all the latest ವಾಣಿಜ್ಯ news
Poll
school

ರಾಷ್ಟ್ರೀಯ ಶಿಕ್ಷಣ ನೀತಿ-2020: 5 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಕಲಿಸುವ ಪ್ರಸ್ತಾಪವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp