1,000 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಇಇಎಸ್ಎಲ್ ಬಿಎಸ್ಎನ್ಎಲ್ ಒಡಂಬಡಿಕೆ

 ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಬಿಎಸ್ಎನ್ಎಲ್ ಜೊತೆ ಆರಂಭಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ಮಂಗಳವಾರ ತಿಳಿಸಿದೆ.
 

Published: 18th February 2020 04:10 PM  |   Last Updated: 18th February 2020 04:10 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : PTI

ನವದೆಹಲಿ: ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಬಿಎಸ್ಎನ್ಎಲ್ ಜೊತೆ ಆರಂಭಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ಮಂಗಳವಾರ ತಿಳಿಸಿದೆ.

ಮೆಮೊರ್ಯಾಂಡಮ್ ಅನುಸಾರ ಇಇಎಸ್ಎಲ್ 1,000 ಬಿಎಸ್ಎನ್ಎಲ್ ಸೈಟ್ ಗಳಲ್ಲಿ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಹಂತಹಂತವಾಗಿ ದೇಶಾದ್ಯಂತ ಸ್ಥಾಪಿಸುತ್ತದೆ ಎಂದು ಇಇಎಸ್ಎಲ್ ಹೇಳಿಕೆ ತಿಳಿಸಿದೆ.ಅರ್ಹ ಸಿಬ್ಬಂದಿಯನ್ನು ಬಳಸಿಕೊಂಡು ಚಾರ್ಜಿಂಗ್ ಮೂಲಸೌಕರ್ಯಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯೊಂದಿಗೆ ಎಂಇಯುಗೆ ಸಂಬಂಧಿಸಿದ ಸೇವೆಗಳ ಮೇಲೆ ಇಇಎಸ್ಎಲ್ ಸಂಪೂರ್ಣ ಮುಂಗಡ ಹೂಡಿಕೆ ಮಾಡುತ್ತದೆ.

ಚಾರ್ಜಿಂಗ್ ಮೂಲಸೌಕರ್ಯ ಸ್ಥಾಪನೆಗೆ ಗತ್ಯವಾದ ಸ್ಥಳ ಮತ್ತು ವಿದ್ಯುತ್ ಸಂಪರ್ಕಗಳನ್ನು ಒದಗಿಸುವ ಜವಾಬ್ದಾರಿಯನ್ನು ಟೆಲಿಕಾಂ ಪಿಎಸ್‌ಯು ಬಿಎಸ್‌ಎನ್‌ಎಲ್ ನಿರ್ವಹಿಸಲಿದೆ. ರಾಷ್ಟ್ರೀಯ ಎಲೆಕ್ಟ್ರಿಕ್ ಮೊಬಿಲಿಟಿ ಕಾರ್ಯಕ್ರಮದ ದೂರದೃಷ್ಟಿಯೊಂದಿಗೆ ಇಇಎಸ್ಎಲ್ ಭಾರತದಾದ್ಯಂತ 300 ಎಸಿ ಮತ್ತು 170 ಡಿಸಿ ಚಾರ್ಜರ್‌ಗಳನ್ನು ನಿಯೋಜಿಸಿದೆ. ಇಲ್ಲಿಯವರೆಗೆ, ದೆಹಲಿ-ಎನ್‌ಸಿಆರ್‌ನಲ್ಲಿ 66 ಸಾರ್ವಜನಿಕ ಚಾರ್ಜಿಂಗ್ ಪಾಯಿಂಟ್‌ಗಳು ಕಾರ್ಯನಿರ್ವಹಿಸುತ್ತಿವೆ.

ಬೇಡಿಕೆ ಹಾಗೂ  ಬೃಹತ್ ಸಂಗ್ರಹಣೆಯ ನವೀನ ಮಾದರಿಯೊಂದಿಗೆ, ಇಇಎಸ್ಎಲ್ ಎಲೆಕ್ಟ್ರಿಕ್ ವಾಹನಗಳು ಮತ್ತು ಚಾರ್ಜರ್‌ಗಳನ್ನು ನಿಜವಾದ ಮಾರುಕಟ್ಟೆ ಮೌಲ್ಯಕ್ಕೆ ಹೋಲಿಸಿದರೆ ಗಮನಾರ್ಹವಾಗಿ ರಿಯಾಯಿತಿ ದರದಲ್ಲಿ ಪಡೆಯುತ್ತದೆ.ಇದರೊಡನೆ  ಇಇಎಸ್ಎಲ್ ಸುಸ್ಥಿರ ವ್ಯವಹಾರ ಮಾದರಿಯನ್ನು ಸ್ಥಾಪಿಸಿದೆ, ಇದು ಇವಿಗಳನ್ನು ಕಟ್ಟ ಕಡೆಯ ಗ್ರಾಹಕರಿಗೂ ಕೈಗೆಟುಕುವಂತೆ ಮಾಡುತ್ತದೆ.

Stay up to date on all the latest ವಾಣಿಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp