ಡಿಸೆಂಬರ್ ತಿಂಗಳಲ್ಲೂ 1.03 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹ

ಕೇಂದ್ರ ಸರ್ಕಾರದ ಉತ್ತೇಜನಕಾರಿ ಕ್ರಮಗಳಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್​ಟಿ) ಸಂಗ್ರಹದ ಮೊತ್ತ ಎರಡನೇ ಬಾರಿ 1.03 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ.

Published: 01st January 2020 06:22 PM  |   Last Updated: 01st January 2020 06:22 PM   |  A+A-


GST

ಸಾಂದರ್ಭಿಕ ಚಿತ್ರ

Posted By : Lingaraj Badiger
Source : PTI

ನವದೆಹಲಿ: ಕೇಂದ್ರ ಸರ್ಕಾರದ ಉತ್ತೇಜನಕಾರಿ ಕ್ರಮಗಳಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್​ಟಿ) ಸಂಗ್ರಹದ ಮೊತ್ತ ಎರಡನೇ ಬಾರಿ 1.03 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ.

ಕಳೆದ ಮೂರು ತಿಂಗಳಲ್ಲಿ ಜಿಎಸ್​ಟಿ ಸಂಗ್ರಹ ಮೊತ್ತ 1 ಲಕ್ಷ ಕೋಟಿ ರೂ.ಗಿಂತ ಕೆಳಗಿತ್ತು. ಆದರೆ ಕಳೆದ ನವೆಂಬರ್​ ತಿಂಗಳಲ್ಲಿ ಜಿಎಸ್​ಟಿ ಸಂಗ್ರಹ ಮೊತ್ತ 1.03 ಲಕ್ಷ ಕೋಟಿ ಸಗ್ರಹವಾಗಿತ್ತು. ಇದೀಗ ಡಿಸೆಂಬರ್ ತಿಂಗಳಲ್ಲೂ 1.03 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ.

ಡಿಸೆಂಬರ್ 2018ರಲ್ಲಿ 97,278 ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿತ್ತು. 2019ರ ನವೆಂಬರ್​ನಲ್ಲಿ ಜಿಎಸ್​ಟಿ ಸಂಗ್ರಹ ಮೊತ್ತ 1,03,492 ಕೋಟಿ ರೂ.ಗೆ ಏರಿಕೆಯಾಗಿತ್ತು.

ಕಳೆದ ತಿಂಗಳು ಒಟ್ಟು 1,03,184 ಕೋಟಿ ರೂ. ಜಿಎಸ್ ಟಿ ಸಂಗ್ರಹವಾಹಿದ್ದು, ಇದರಲ್ಲಿ ಸಿಜಿಎಸ್​ಟಿ 19,962 ಕೋಟಿ ರೂ., ಎಸ್​ಜಿಎಸ್​ಟಿ 26,792 ಕೋಟಿ ರೂ., ಐಜಿಎಸ್​ಟಿ 48,099 ಕೋಟಿ ರೂ.(ಆಮದು ಮೇಲಿನ ಸುಂಕ 20,948 ಕೋಟಿ ರೂ. ಸೇರಿ) ಮತ್ತು ಸೆಸ್​ 8,331 ಕೋಟಿ ರೂ.( ಆಮದು ಮೇಲಿನ ಸುಂಕ 869 ಕೋಟಿ ರೂ. ಸೇರಿ) ಸಂಗ್ರಹವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2017ರ ಜುಲೈನಲ್ಲಿ ಜಿಎಸ್​ಟಿ ಜಾರಿಯಾದಾಗಿನಿಂದ 9ನೇ ಬಾರಿಗೆ ಜಿಎಸ್​ಟಿ ಸಂಗ್ರಹ ಮೊತ್ತ ಒಂದು ಲಕ್ಷ ಕೋಟಿ ರೂ. ದಾಟಿದೆ. ಅಲ್ಲದೆ, ನವೆಂಬರ್​ ಮೂರನೇ ಅತಿಹೆಚ್ಚು ಜಿಎಸ್​ಟಿ ಸಂಗ್ರಹ ತಿಂಗಳಾಗಿದೆ. 2019 ಮಾರ್ಚ್​ ಮತ್ತು ಏಪ್ರಿಲ್​ನಲ್ಲಿ ಅತಿ ಹೆಚ್ಚು ಜಿಎಸ್ಟಿ ಸಂಗ್ರಹವಾಗಿತ್ತು.

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp