ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ, ಇಂದು ಏರಿಕೆಯಾಗಿದ್ದೇಷ್ಟು?

ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ಚಿನ್ನದ ಬೆಲೆ ಮತ್ತೆ ಗಗನಕ್ಕೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ಚಿನ್ನದ ಬೆಲೆ ಮತ್ತೆ ಗಗನಕ್ಕೇರಿದೆ. 

485 ರುಪಾಯಿ ಏರಿಕೆಯಾಗಿದ್ದು 10 ಗ್ರಾಂ ಸದ್ಯದ ಬೆಲೆ 41,810 ರುಪಾಯಿ ಇದೆ. ಇದರ ಜೊತೆಗೆ ಬೆಳ್ಳಿ ಬೆಲೆ ಸಹ ಜಾಸ್ತಿಯಾಗಿದ್ದು 1 ಕೆಜಿ ಮೇಲೆ 855 ರುಪಾಯಿ ಆಗಿದೆ. ಸದ್ಯ 1 ಕೆಜಿ ಬೆಳ್ಳಿ ಬೆಲೆ 49,530 ರುಪಾಯಿ ಇದೆ. 

ಭೌಗೋಳಿಕ ರಾಜಕೀಯ ಅನಿಶ್ಚಿತತೆ ಮತ್ತು ರೂಪಾಯಿ ಕುಸಿತದಿಂದಾಗಿ ಚಿನ್ನ ಏರಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಸಲಹಾ ಮುಖ್ಯಸ್ಥ(ಪಿಸಿಜಿ) ದೇವರ್ಶ್ ವಕಿಲ್ ಹೇಳಿದ್ದಾರೆ.

ಇದರ ನಡುವೆ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 72 ರೂ. ಗಡಿ ದಾಟಿದೆ. ಒಂದು ಡಾಲರ್ ಗೆ 72.03 ರುಪಾಯಿ ದರ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com