ದೇಶದ ಪ್ರಮುಖ 9 ನಗರಗಳಲ್ಲಿ ಮನೆಗಳ ಮಾರಾಟದಲ್ಲಿ ಶೇ. 30ರಷ್ಟು ಕುಸಿತ, ಬೆಂಗಳೂರಿನಲ್ಲಿ ಶೇ.50 ರಷ್ಟು ಕುಸಿತ!

ಆರ್ಥಿಕ ಕುಸಿತದ ಪರಿಣಾಮ ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಮನೆಗಳ ಮಾರಾಟದಲ್ಲಿ ಶೇ. 30ರಷ್ಟು ಕುಸಿತವಾಗಿದ್ದು, ದೇಶದ ಪ್ರಮುಖ 9 ನಗರಗಳಲ್ಲಿ ಸುಮಾರು 64 ಸಾವಿರ ಮನೆಗಳು ಮಾರಾಟವಾಗಿವೆ ಎಂದು ಪ್ರಾಪ್ ಟೈಗರ್ಸ್ ವರದಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಆರ್ಥಿಕ ಕುಸಿತದ ಪರಿಣಾಮ ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಮನೆಗಳ ಮಾರಾಟದಲ್ಲಿ ಶೇ. 30ರಷ್ಟು ಕುಸಿತವಾಗಿದ್ದು, ದೇಶದ ಪ್ರಮುಖ 9 ನಗರಗಳಲ್ಲಿ ಸುಮಾರು 64 ಸಾವಿರ ಮನೆಗಳು ಮಾರಾಟವಾಗಿವೆ ಎಂದು ಪ್ರಾಪ್ ಟೈಗರ್ಸ್ ವರದಿ ತಿಳಿಸಿದೆ.

ಮೊದಲ ಒಂಬತ್ತು ತಿಂಗಳಲ್ಲಿ ಗೃಹ ಮಾರುಕಟ್ಟೆ ಶೇ. 13ರಷ್ಟು ಕುಸಿದಿದ್ದು, ಅಕ್ಟೋಬರ್ - ಡಿಸೆಂಬರ್ ಅವಧಿಯಲ್ಲಿ ಭಾರತದ ಒಂಬತ್ತು ಪ್ರಮುಖ ನಗರಗಳಲ್ಲಿ ಮನೆ ಖರೀದಿಯು ಶೇ. 30ರಷ್ಟು ಇಳಿಕೆಯಾಗಿದೆ. ಈ ತ್ರೈಮಾಸಿಕದಲ್ಲಿ ಒಂಬತ್ತು ನಗರಗಳಲ್ಲಿ ಒಟ್ಟು 64 ಸಾವಿರ ಮನೆಗಳು ಮಾರಾಟವಾಗಿದೆ ಎಂದು ವರದಿ ಹೇಳಿದೆ. 

ಕಳೆದ ವರ್ಷದ ತ್ರೈಮಾಸಿಕ ಅವಧಿಯಲ್ಲಿ 91,464 ಮನೆಗಳು ಮಾರಾಟವಾಗಿದ್ದವು. ಆದರೆ ಈ ತ್ರೈಮಾಸಿಕ ಅವಧಿಯಲ್ಲಿ 64,034 ಮನೆಗಳು ಮಾತ್ರ ಮಾರಾಟವಾಗಿವೆ.

ವರದಿ ಪ್ರಕಾರ, ಬೆಂಗಳೂರಿನಲ್ಲಿ ಮನೆಗಳ ಮಾರಾಟ ಶೇ. 50ರಷ್ಟು ಕುಸಿದಿದ್ದು, ಈ ಅವಧಿಯಲ್ಲಿ ಕೇವಲ 5 , 155 ಮನೆಗಳು ಮಾತ್ರ ಮಾರಾಟವಾಗಿವೆ.  ಹೈದರಾಬಾದ್ ನಂತರದ ಸ್ಥಾನ (ಶೇ.44), ಪುಣೆ(ಶೇ. 39, ನೊಯಿಡಾ(ಶೇ. 38) ಚೆನ್ನೈ ಮತ್ತು ಕೋಲ್ಕತ್ತಾ (ಶೇ.33), ದೆಹಲಿ (ಶೇ. 6), ಮತ್ತು ಮುಂಬೈ  ಶೇ. 18 ರಷ್ಟು ಇಳಿಕೆ ದಾಖಲಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com