ಕಚ್ಚಾ ತೈಲ ಬೆಲೆ ಇಳಿಕೆ: ಪೆಟ್ರೋಲ್, ಡೀಸೆಲ್ ಕೊಂಚ ಅಗ್ಗ, ಇಂದಿನ ದರ ಹೀಗಿದೆ 

ಇಂಧನ ಬೆಲೆ ಕೊಂಚ ಇಳಿಕೆಯಾಗಿದ್ದು ಪೆಟ್ರೋಲ್ ಬೆಲೆ 15 ಪೈಸೆ ಮತ್ತು ಡೀಸೆಲ್ ಬೆಲೆ 14 ಪೈಸೆ ಇಳಿಕೆಯಾಗಿದೆ. 
ಕಚ್ಚಾ ತೈಲ ಬೆಲೆ ಇಳಿಕೆ: ಪೆಟ್ರೋಲ್, ಡೀಸೆಲ್ ಕೊಂಚ ಅಗ್ಗ, ಇಂದಿನ ದರ ಹೀಗಿದೆ 

ನವದೆಹಲಿ: ಇಂಧನ ಬೆಲೆ ಕೊಂಚ ಇಳಿಕೆಯಾಗಿದ್ದು ಪೆಟ್ರೋಲ್ ಬೆಲೆ 15 ಪೈಸೆ ಮತ್ತು ಡೀಸೆಲ್ ಬೆಲೆ 14 ಪೈಸೆ ಇಳಿಕೆಯಾಗಿದೆ.


ಇಳಿಕೆಯ ನಂತರ ಪೆಟ್ರೋಲ್ ದರ ದೆಹಲಿಯಲ್ಲಿ ಇಂದು ಲೀಟರ್ ಗೆ 75 ರೂಪಾಯಿ 55 ಪೈಸೆ, ಮುಂಬೈಯಲ್ಲಿ 81 ರೂಪಾಯಿ 14 ಪೈಸೆ, ಕೋಲ್ಕತ್ತಾದಲ್ಲಿ ಲೀಟರ್ ಗೆ 78 ರೂಪಾಯಿ 23 ಪೈಸೆ ಮತ್ತು ಚೆನ್ನೈಯಲ್ಲಿ ಲೀಟರ್ ಗೆ 78 ರೂಪಾಯಿ 49 ಪೈಸೆಯಷ್ಟಾಗಿದೆ.


ಡೀಸೆಲ್ ಬೆಲೆ ದೆಹಲಿಯಲ್ಲಿ ಲೀಟರ್ ಗೆ 68 ರೂಪಾಯಿ 92 ಪೈಸೆ, ಮುಂಬೈಯಲ್ಲಿ 72 ರೂಪಾಯಿ 27 ಪೈಸೆ, ಕೋಲ್ಕತ್ತಾದಲ್ಲಿ 71 ರೂಪಾಯಿ 29 ಪೈಸೆ ಮತ್ತು ಚೆನ್ನೈಯಲ್ಲಿ 72 ರೂಪಾಯಿ 83 ಪೈಸೆಯಾಗಿದೆ ಎಂದು ಭಾರತೀಯ ತೈಲ ನಿಗಮ ತಿಳಿಸಿದೆ.


ರಾಜಧಾನಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್ ಗೆ 77 ರೂಪಾಯಿ 83 ಪೈಸೆಯಾಗಿದೆ. ಡೀಸೆಲ್ ಬೆಲೆ 70 ರೂಪಾಯಿ 99 ಪೈಸೆಯಾಗಿದೆ.


ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 70 ಡಾಲರ್ ಆಗಿದ್ದು ಅದು ಇಂದು ಕೊಂಚ ಇಳಿಕೆಯಾಗಿ ಅಮೆರಿಕಾ ಮತ್ತು ಇರಾನ್ ಸಂಘರ್ಷಗಳ ನಡುವೆ ಬ್ಯಾರಲ್ ಗೆ 64 ಡಾಲರ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com