'ಪರಿಸರ ಸ್ನೇಹಿ' ಮೊದಲ ಝಡ್ಎಸ್ ಇವಿ ಕಾರು ಖರೀದಿಸಿದ ಸರ್ಕಾರಿ ಸ್ವಾಮ್ಯದ ಇಇಎಸ್ಎಲ್ ಸಂಸ್ಥೆ

ಎಂಜಿ ಮೋಟಾರ್ ಇಂಡಿಯಾದ ಮೊದಲ ಪರಿಸರ ಸ್ನೇಹಿ ಝಡ್ಎಸ್ ಇವಿ ಕಾರನ್ನು ಸರ್ಕಾರಿ ಸ್ವಾಮ್ಯದ ಇಇಎಸ್ಎಲ್ (ಎನರ್ಜಿಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್) ಸಂಸ್ಥೆ ಖರೀದಿಸಿದೆ.

Published: 27th January 2020 08:33 PM  |   Last Updated: 27th January 2020 08:33 PM   |  A+A-


ZS-EV-Car

ಪರಿಸರ ಸ್ನೇಹಿ ಕಾರು

Posted By : Vishwanath S
Source : UNI

ಬೆಂಗಳೂರು: ಎಂಜಿ ಮೋಟಾರ್ ಇಂಡಿಯಾದ ಮೊದಲ ಪರಿಸರ ಸ್ನೇಹಿ ಝಡ್ಎಸ್ ಇವಿ ಕಾರನ್ನು ಸರ್ಕಾರಿ ಸ್ವಾಮ್ಯದ ಇಇಎಸ್ಎಲ್ (ಎನರ್ಜಿಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್) ಸಂಸ್ಥೆ ಖರೀದಿಸಿದೆ. 

2030 ರ ವೇಳೆಗೆ ಮತ್ತಷ್ಟು ಸರ್ಕಾರಿ ಸ್ವಾಮ್ಯದ ಅಧಿಕಾರಿಗಳು ಈ ವಾಹನಗಳನ್ನು ಬಳಸಿ ಪರಿಸರಕ್ಕೆ ತಮ್ಮ ಕೊಡುಗೆಯನ್ನು ನೀಡಲಿದ್ದಾರೆ. ಹೆಚ್ಚೆಚ್ಚು ಇ-ವಾಹನಗಳ ತಯಾರಿಕೆ ಸರ್ಕಾರದ ಆಶಯವಾಗಿದೆ ಮತ್ತು ಎಂಜಿ ಮೋಟಾರ್ ಇಂಡಿಯಾದ ಕನಸು ಕೂಡ ಪರಿಸರ ಸ್ನೇಹಿ ವಾಹನಗಳ ತಯಾರಿಕೆ ಆಗಿದೆ. ಇದರ ಭಾಗವಾಗಿ ಎಂಜಿ ಇಂಡಿಯಾ ಸಂಸ್ಥೆಯು ದೇಶದ ಮೊದಲ ಪ್ಯೂರ್ ಎಲೆಕ್ಟ್ರಿಕ್ ಇಂಟರ್ನೆಟ್ ಕಾರ್ ಎಸ್ಯುವಿ ಝಡ್ಎಸ್ ಇವಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

"ಭಾರತದಲ್ಲಿ ಚಲನಶೀಲತೆಯ ಭವಿಷ್ಯವು ವಿದ್ಯುತ್ ಮತ್ತು ಸುಸ್ಥಿರವಾಗಿದೆ. ಎಂಜಿ ಮೋಟಾರ್ ಇಂಡಿಯಾದಂತಹ ಖಾಸಗಿ ಕಂಪನಿಗಳು ಸರ್ಕಾರದ ಇವಿ ದೃಷ್ಟಿಗೆ ಪೂರಕವಾಗಿ ಬಲವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು ಹೃದಯಸ್ಪರ್ಶಿಯಾಗಿದೆ. ಇವಿ ಅಳವಡಿಕೆಯು ಕಡಿಮೆ ಮಟ್ಟದ ವಾಯುಮಾಲಿನ್ಯ ಮತ್ತು ದುಬಾರಿ ಪಳೆಯುಳಿಕೆ ಇಂಧನಗಳ ಮೇಲೆ ಕಡಿಮೆ ಅವಲಂಬನೆಯಂತಹ ಅನೇಕ ಪ್ರಯೋಜನಗಳನ್ನು ತರುತ್ತದೆ. 

ನಾವು ಐದು ಝಡ್ಎಸ್ ಇವಿಗಳ ಖರೀದಿಯು ಪರಿಸರವನ್ನು ರಕ್ಷಿಸುವ ನಮ್ಮಬದ್ಧತೆಗೆ ಅನುಗುಣವಾಗಿರುತ್ತದೆ. ಈ ಫ್ಲೀಟ್ ಅನ್ನು ಇನ್ನಷ್ಟು ವಿಸ್ತರಿಸಲು ಮತ್ತು ನಮ್ಮ ಇಂಗಾಲದ ಹೆಜ್ಜೆ ಗುರುತನ್ನು ಕಡಿಮೆ ಮಾಡಲು ನಾವು ಅವಕಾಶಗಳನ್ನು ಅನ್ವೇಷಿಸುತ್ತೇವೆ" ಎಂದು ಇಇಎಸ್ಎಲ್ ನ ವ್ಯವಸ್ಥಾಪಕ ನಿರ್ದೇಶಕ ಸೌರಭ್ ಕುಮಾರ್ ಹೇಳಿದರು.
 

Stay up to date on all the latest ವಾಣಿಜ್ಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp