ಎದುರಾಳಿ ಸಂಸ್ಥೆ ಎಲ್ ಜಿ ಜೊತೆ ಒಪ್ಪಂದಕ್ಕೆ ಮುಂದಾಗಲಿದೆಯೇ ಸ್ಯಾಮ್ ಸಂಗ್?

ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ತನ್ನ ಎದುರಾಳಿ ಸಂಸ್ಥೆ ಎಲ್ ಜಿ ಡಿಸ್ಪ್ಲೇ ಜೊತೆಗೆ ಒಪ್ಪಂದಕ್ಕೆ ಮುಂದಾಗುವ ಸಾಧ್ಯತೆ ಇದೆ. 
ಎದುರಾಳಿ ಸಂಸ್ಥೆ ಎಲ್ ಜಿ ಜೊತೆ ಒಪ್ಪಂದಕ್ಕೆ ಮುಂದಾಗಲಿದೆಯೇ ಸ್ಯಾಮ್ ಸಂಗ್?

ಸಿಯೋಲ್: ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ತನ್ನ ಎದುರಾಳಿ ಸಂಸ್ಥೆ ಎಲ್ ಜಿ ಡಿಸ್ಪ್ಲೇ ಜೊತೆಗೆ ಒಪ್ಪಂದಕ್ಕೆ ಮುಂದಾಗುವ ಸಾಧ್ಯತೆ ಇದೆ. 

ಟಿವಿ ಕ್ಷೇತ್ರದಲ್ಲಿ ಸ್ಯಾಮ್ ಸಂಗ್ ಹಾಗೂ ಎಲ್ ಜಿ ಎರಡೂ ಎದುರಾಳಿ ಸಂಸ್ಥೆಗಳಾಗಿದ್ದು, ಸ್ಯಾಮ್ ಸಂಗ್ ನೆಕ್ಸ್ಟ್ ಜನರೇಶನ್ ಡಿಸ್ಲ್ಪೇಯಾಗಿರುವ ಕ್ವಾಂಟಮ್ ಡಾಟ್ ಉತ್ಪಾದನೆಯತ್ತ ಹೆಚ್ಚಿನ ಗಮನ ಹರಿಸಲಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷದ ವೇಳೆಗೆ ಎಲ್ ಸಿ ಡಿ ಸ್ಕ್ರೀನ್ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿತ್ತು.

ಈ ಹಿನ್ನೆಲೆಯಲ್ಲಿ ಡಿಸ್ಪ್ಲೇ ಪ್ಯಾನಲ್ ಗಳನ್ನು ಖರೀದಿಸುವುದಕ್ಕಾಗಿ ಎಲ್ ಜಿ ಡಿಸ್ಪ್ಲೇ ಜೊತೆಗೆ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಮಾತುಕತೆ ನಡೆಸುತ್ತಿದ್ದು, ಎಲ್ ಸಿಟಿ ಟಿವಿ ಪ್ಯಾನಲ್ ಪೂರೈಕೆಗೆ ಒಪ್ಪಂದವೂ ಏರ್ಪಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸ್ಯಾಮ್ ಸಂಗ್ ಎಲ್ ಸಿಡಿ ಸ್ಕ್ರೀನ್ ಉತ್ಪಾದನೆಯನ್ನು ಘೋಷಿಸುತ್ತಿದ್ದಂತೆಯೇ ಹೊರಬಂದಿದ್ದ ವಿಶ್ಲೇಷಣೆಯ ಪ್ರಕಾರ ಸ್ಯಾಮ್ ಸಂಗ್ ಎಲ್ ಸಿಡಿ ಪ್ಯಾನಲ್ ಗಳನ್ನು ಚೀನಾದ ಸಂಸ್ಥೆಗಳಿಂದ ಖರೀದಿಸಲಿದೆ ಎಂದು ಅಂದಾಜಿಸಲಾಗಿತ್ತು.

ಈ ಒಪ್ಪಂದ ಯಶಸ್ವಿಯಾದರೆ ಎಲ್ ಜಿ ಡಿಸ್ಪ್ಲೆಯ ಪೂರೈಕೆಯ ಉದ್ಯಮ ಅಂದಾಜು 1 ಟ್ರಿಲಿಯನ್ (833 ಮಿಲಿಯನ್ ಅಮೆರಿಕನ್ ಡಾಲರ್) ನಿಂದ 2 ಟ್ರಿಲಿಯನ್ ನಷ್ಟಾಗಲಿದ್ದು ಚೀನಾದಲ್ಲಿರುವ ಘಟಕದಿಂದ ಪೂರೈಕೆಯಾಗಲಿದೆ.

ಸ್ಯಾಮ್ ಸಂಗ್ ಹಾಗೂ ಎಲ್ ಜಿ ಟಿವಿ ಇಂಡಸ್ಟ್ರಿಯಲ್ಲಿ ಎದುರಾಳಿ ಸಂಸ್ಥೆಗಳಾಗಿದ್ದು, ಸ್ಯಾಮ್ ಸಂಗ್ ಕ್ಯುಎಲ್ಇಡಿ ಟಿವಿಯನ್ನು ಪ್ರತಿನಿಧಿಸಿದರೆ, ಎಲ್ ಜಿ ಒಎಲ್ಇಡಿ ಟಿಗಳಿಗೆ ಖ್ಯಾತಿ ಪಡೆದಿದೆ. 2017 ರಲ್ಲಿಯೂ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ 65 ಇಂಚು ಹಾಗೂ 75 ಇಂಚಿನ ಟಿವಿಗಳಿಗೆ ಎಲ್ ಸಿ ಡಿ ಸ್ಕ್ರೀನ್ ಗಹ್ಳನ್ನು ಎಲ್ ಜಿ ಡಿಸ್ಪ್ಲೇಯಿಂದ ಖರೀದಿಸಿರುವ ಉದಾಹರಣೆಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com