ಸ್ಯಾನಿಟೈಸರ್ ಮೇಲೆ ಶೇ.18 ಜಿಎಸ್‌ಟಿ: ಹಣಕಾಸು ಸಚಿವಾಲಯ

 ಸ್ಯಾನಿಟೈಜರ್‌ಗಳು ಸೋಪುಗಳು, ಬ್ಯಾಕ್ಟೀರಿಯಾ ವಿರೋಧಿ ಡೆಟ್ಟೋಲ್ ಮುಂತಾದ ಸೋಂಕುನಿವಾರಕಗಳ ಹಾಗೆ ಶೇಕಡಾ 18 ರಷ್ಟು ಜಿಎಸ್‌ಟಿ ತೆರಿಗೆ ವ್ಯಾಪ್ತಿಗೆ ಬರಲಿದೆ ಎಂದು ಸರ್ಕಾರ  ಹೇಳಿದೆ.
ಸ್ಯಾನಿಟೈಸರ್ಸ್
ಸ್ಯಾನಿಟೈಸರ್ಸ್

ನವದೆಹಲಿ: ಸ್ಯಾನಿಟೈಜರ್‌ಗಳು ಸೋಪುಗಳು, ಬ್ಯಾಕ್ಟೀರಿಯಾ ವಿರೋಧಿ ಡೆಟ್ಟೋಲ್ ಮುಂತಾದ ಸೋಂಕುನಿವಾರಕಗಳು ಶೇಕಡಾ 18 ರಷ್ಟು ಜಿಎಸ್‌ಟಿ ತೆರಿಗೆ ವ್ಯಾಪ್ತಿಗೆ ಬರಲಿದೆ ಎಂದು ಸರ್ಕಾರ  ಹೇಳಿದೆ.

ಹ್ಯಾಂಡ್ ಸ್ಯಾನಿಟೈಸರ್ ತಯಾರಿಸಲು ಬಳಸುವ ವಿವಿಧ ರಾಸಾಯನಿಕಗಳು, ಪ್ಯಾಕಿಂಗ್ ವಸ್ತುಗಳು ಮತ್ತು ಇನ್ನಿತರೆ  ಉತ್ಪನ್ನಗಳು ಸಹ ಜಿಎಸ್‌ಟಿ ಅಡಿಯಲ್ಲಿ ಬರಲಿದ್ದು ಅವುಗಳ ಮೇಲೆ ಸಹ ಶೇಕಡಾ 18 ರಷ್ಟುಜಿಎಸ್‌ಟಿ ಹಾಕಲಾಗುತ್ತದೆ ಎಂದು  ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಸ್ಯಾನಿಟೈಜರ್‌ಗಳು  ಸೋಪುಗಳು, ಬ್ಯಾಕ್ಟೀರಿಯಾ ವಿರೋಧಿ ಡೆಟ್ಟೋಲ್ ಮುಂತಾದ ಸೋಂಕುನಿವಾರಕಗಳಂತೆಯೇ ಇದ್ದು ಇವುಗಳೆಲ್ಲವೂ ಜಿಎಸ್‌ಟಿಆಡಳಿತದಲ್ಲಿ ಶೇಕಡಾ 18 ರಷ್ಟು ಡ್ಯೂಟಿ ಸ್ಟ್ಯಾಂಡರ್ಡ್ ದರವನ್ನು ಆಕರ್ಷಿಸುತ್ತವೆ" ಎಂದು ಅದು ಹೇಳಿದೆ. ಸ್ಯಾನಿಟೈಜರ್‌ಗಳು   ಮತ್ತು ಇತರ ರೀತಿಯ ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆ ಮಾಡುವುದರಿಂದ  ದೇಶೀಯ ತಯಾರಕರು ಹ್ಯಾಂಡ್ ಸ್ಯಾನಿಟೈಜರ್‌ಗಳ ಆಮದುದಾರರಿಗೆ ಅನಾನುಕೂಲವಾಗಬಹುದು ಎಂದು ಸಚಿವಾಲಯ ತಿಳಿಸಿದೆ.

ಜಿಎಸ್‌ಟಿ ದರವನ್ನು ಕಡಿಮೆ ಮಾಡುವುದರಿಂದ ಸ್ಯಾನಿಟೈಜರ್‌ಗಳನ್ನು ಆಮದು ಮಾಡಿಕೊಳ್ಳುವುದು ಅಗ್ಗವಾಗುವುದರಿಂದ ಕಚ್ಚಾ ಸಾಮಗ್ರಿಗಳಿಗೆ ಅಂತಿಮ ಉತ್ಪನ್ನಕ್ಕಿಂತ ಹೆಚ್ಚಿನ ದರದಲ್ಲಿ ತೆರಿಗೆ ವಿಧಿಸಿದರೆ ದೇಶೀಯ ಉದ್ಯಮಕ್ಕೆ ತೊಂದರೆಯಾಗಲಿದೆ. ಕಡಿಮೆ ಜಿಎಸ್‌ಟಿ ದರಗಳು ಆಮದುಗಳನ್ನು ಅಗ್ಗವಾಗಿಸುವ ಮೂಲಕ ಸಹಾಯ ಮಾಡುತ್ತವೆ. ಇದು 'ಆತ್ಮನಿರ್ಭಾರ ಭಾರತ್' ಕುರಿತ ರಾಷ್ಟ್ರದ ನೀತಿಗೆ ವಿರುದ್ಧವಾಗಿದೆ. ದೇಶೀಯ ಉತ್ಪಾದನೆಯು ಸಂಕಷ್ಟದಲ್ಲಿದ್ದರೆ ವಿದೇಶೀ ಸಂಸ್ಥೆಗಳು ಲಾಭಗಳಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.

ಜಿಎಸ್‌ಟಿ  ಅಡಿಯಲ್ಲಿ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್‌ಗಳು ಶೇ 18 ರಷ್ಟು ತೆರಿಗೆ ಆಕರ್ಷಿಸಬಹುದು ಎಂದು ಗೋವಾ ಬೆಂಚ್ ಆಫ್ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ (ಎಎಆರ್) ಇತ್ತೀಚೆಗೆ ತೀರ್ಪು ನೀಡಿತ್ತು. ಗ್ರಾಹಕ ವ್ಯವಹಾರಗಳ ಸಚಿವಾಲಯವು ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ಅತ್ಯಗತ್ಯ ಸರಕು ಎಂದು ವರ್ಗೀಕರಿಸಿದ್ದರೂ, ಜಿಎಸ್‌ಟಿ ಕಾನೂನು ವಿನಾಯಿತಿ ಪಡೆದ ಸರಕುಗಳ ಪ್ರತ್ಯೇಕ ಪಟ್ಟಿಯನ್ನು ಹೊಂದಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com