ಲಾಕ್ ಡೌನ್ ಸಮಯದಲ್ಲಿ ನಾವು ರೈತರಿಗೆ 8,000 ಕೋಟಿ ರೂ. ನಗದು ನೀಡಿದ್ದೇವೆ: ಅಮುಲ್ ಎಂಡಿ

ಡೈರಿ ದೈತ್ಯ ಅಮುಲ್ ಲಾಕ್ ಡೌನ್ ಸಮಯದದಲ್ಲೂ ಪೂರೈಕೆ ಚೈನ್ ಅನ್ನು ಜೀವಂತವಾಗಿಟ್ಟುಳ್ಳುವುದರೊಂದಿಗೆ 8,000 ಕೋಟಿ ರೂ. ಹಣವನ್ನು ರೈತರ ಕೈಗೆ ನೀಡುವ ಮೂಲಕ ತನ್ನ ದಕ್ಷತೆ ಮತ್ತು ಖ್ಯಾತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆರ್ ಎಸ್ ಸೋಧಿ
ಆರ್ ಎಸ್ ಸೋಧಿ

ಡೈರಿ ದೈತ್ಯ ಅಮುಲ್ ಲಾಕ್ ಡೌನ್ ಸಮಯದದಲ್ಲೂ ಪೂರೈಕೆ ಚೈನ್ ಅನ್ನು ಜೀವಂತವಾಗಿಟ್ಟುಳ್ಳುವುದರೊಂದಿಗೆ 8,000 ಕೋಟಿ ರೂ. ಹಣವನ್ನು ರೈತರ ಕೈಗೆ ನೀಡುವ ಮೂಲಕ ತನ್ನ ದಕ್ಷತೆ ಮತ್ತು ಖ್ಯಾತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಅವರೊಂದಿಗೆ ಮಾತನಾಡಿರುವ ಅಮುಲ್ ವ್ಯವಸ್ಥಾಪಕ ನಿರ್ದೇಶಕ ಆರ್ ಎಸ್ ಸೋಧಿ ಅವರು, ನಾವು ಹಾಲು ಸರಬರಾಜು ಚೈನ್ ಅನ್ನು ನಿಲ್ಲಿಸಲು ಬಯಸಿದ್ದರೂ, ಅದು ನಮ್ಮಿಂದ ಸಾಧ್ಯವಿಲ್ಲ. ಭಾರತದಲ್ಲಿ, ಹಾಲು 100 ಮಿಲಿಯನ್ ಕುಟುಂಬಗಳಿಗೆ ಜೀವನೋಪಾಯದ ಮೂಲವಾಗಿದೆ. ಆದ್ದರಿಂದ, ನಾವು ನಮ್ಮ ಎಲ್ಲ ಪಾಲುದಾರರೊಂದಿಗೆ ಮಾತುಕತೆ ನಡೆಸಿದ್ದೇವೆ. ಸರಬರಾಜನ್ನು ಮುಂದುವರಿಸುವುದು ನಮ್ಮ ಕರ್ತವ್ಯ ಮಾತ್ರವಲ್ಲ, ಅದು ರಾಷ್ಟ್ರೀಯ ಹಿತಾಸಕ್ತಿ ಎಂದು ಅವರಿಗೆ ಮನವರಿಕೆ ಮಾಡಿದ್ದೇವು. ಲಾಕ್ ಡೌನ್ ಇದ್ದರೂ ಒಂದೇ ಒಂದು ನಿಮಿಷವೂ ಹಾಲು ಸರಬರಾಜಿಗೆ ಅಡ್ಡಿಯಾಗಲಿಲ್ಲ ಎಂದು ಹೇಳಲು ನನಗೆ ತುಂಬಾ ಸಂತೋಷವಾಗುತ್ತಿದೆ. ನಾವು ಅಧಿಕಾರಿಗಳನ್ನು ಸಂಪರ್ಕಿಸುವ ಬದಲು, ಗೃಹ ವ್ಯವಹಾರಗಳ ಸಚಿವಾಲಯ, ಸ್ಥಳೀಯ ಆಡಳಿತ ಇತ್ಯಾದಿಗಳಿಂದ ನಮಗೆ ಪೂರ್ವಭಾವಿಯಾಗಿ ಬೆಂಬಲ ಸಿಕ್ಕಿತು ಎಂದಿದ್ದಾರೆ.

ಆದರೆ, ನಮ್ಮ ಪೂರೈಕೆ ಚೈನ್ ಪಾಲುದಾರರಿಗೆ ಸಾಮಾಜಿಕ ಅನುಮತಿಗಳು ಹೆಚ್ಚು ಮುಖ್ಯವಾಗಿದ್ದವು. ಉದಾಹರಣೆಗೆ, ನಮ್ಮ ಕೆಲವು ವಿತರಕರು ಹಾಲು ವಿತರಿಸಿದ ನಂತರ ತಮ್ಮ ಗ್ರಾಮಗಳಿಗೆ ಹಿಂತಿರುಗಲು ತೊಂದರೆ ಅನುಭವಿಸಿದರು. ಏಕೆಂದರೆ ಕೆಲವು ನೆರೆಹೊರೆಯವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಈ ಸಮಸ್ಯೆಗಳನ್ನು ಸಹ ನಾವು ನಿಭಾಯಿಸಿದೆವು ಎಂದು ಸೋಧಿ ತಿಳಿಸಿದ್ದಾರೆ.

ಈಗ ನೀವು ಎಷ್ಟು ಹಾಲು ಸಂಗ್ರಹಿಸುತ್ತಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಧಿ ಅವರು, ಸಾಮಾನ್ಯವಾಗಿ ನಾವು ದಿನಕ್ಕೆ ಸುಮಾರು 26 ಮಿಲಿಯನ್ ಲೀಟರ್ ಹಾಲು ಸಂಗ್ರಹಿಸುತ್ತೇವೆ. ಈಗ, ನಾವು ಶೇಕಡಾ 15 ರಷ್ಟು ಹೆಚ್ಚು ಸಂಗ್ರಹಿಸುತ್ತಿದ್ದೇವೆ. ಕಳೆದ 60 ದಿನಗಳಲ್ಲಿ, ನಾವು ಮುಖ್ಯವಾಗಿ ಗುಜರಾತ್‌ನ ಗ್ರಾಮೀಣ ಆರ್ಥಿಕತೆಗೆ - ರೈತರಿಗೆ 8,000 ಕೋಟಿ ರೂ. ನೀಡಿದ್ದೇವೆ. ಹೆಚ್ಚುವರಿ ಬಾಲು ಸಂಗ್ರಹಣೆಯಿಂದ 800 ಕೋಟಿ ರೂ. ಬಾಕಿ ಇದೆ. ಲಾಕ್ ಡೌನ್ ವೇಳೆ  ಇತರೆ ವ್ಯವಹಾರಗಳು ಕ್ಷೀಣಿಸುತ್ತಿದ್ದವು, ಆದರೆ ನಾವು ಹೆಚ್ಚಿನದನ್ನು ಸಂಪಾದಿಸಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com