ಜಿಯೋದ ಶೇ. 1.85 ಷೇರುಗಳನ್ನು 9,000 ಕೋಟಿಗೆ ಖರೀದಿಸಿದ ಅಬುಧಾಬಿ ಮೂಲದ ಸಂಸ್ಥೆ

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಜಿಯೋ ಸಂಸ್ಛೆಯಲ್ಲಿ ಇದೀಗ ಅಬುದಾಬಿ ಮೂಲದ ಸಂಸ್ಥೆಯೊಂದು ಬಂಡವಾಳ ಹೂಡಿಕೆ ಮಾಡಿದ್ದು, ಸುಮಾರು 9 ಸಾವಿರ ಕೋಟಿ ರೂ.ಗಳಿಗೆ ಜಿಯೋದ ಶೇ.1.85ರಷ್ಟು ಷೇರುಗಳನ್ನು ಖರೀದಿ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಜಿಯೋ ಸಂಸ್ಛೆಯಲ್ಲಿ ಇದೀಗ ಅಬುದಾಬಿ ಮೂಲದ ಸಂಸ್ಥೆಯೊಂದು ಬಂಡವಾಳ ಹೂಡಿಕೆ ಮಾಡಿದ್ದು, ಸುಮಾರು 9 ಸಾವಿರ ಕೋಟಿ ರೂ.ಗಳಿಗೆ ಜಿಯೋದ ಶೇ.1.85ರಷ್ಟು ಷೇರುಗಳನ್ನು ಖರೀದಿ ಮಾಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ತನ್ನ ಜಿಯೋ ಪ್ಲಾಟ್‌ ಫಾರ್ಮ್‌ಗಳಿಗಾಗಿ ಹೂಡಿಕೆ ಸಂಗ್ರಹಣೆ ಮುಂದುವರೆಸಿದ್ದು, ಇದೀಗ ಅಬುಧಾಬಿ ಮೂಲದ ಮುಬದಲಾ ಸಂಸ್ಥೆ ಜಿಯೋದ ಶೇ 1.85 ರಷ್ಟು ಪಾಲನ್ನು 9,093  ಕೋಟಿ ರೂ. ಗಳಿಗೆ  ಖರೀದಿಸಿದೆ ಎಂದು ಆರ್ ಐ ಎಲ್ ತಿಳಿಸಿದೆ.

ಗಮನಾರ್ಹ ಸಂಗತಿಯೆಂದರೇ ಕಳೆದ 6 ವಾರಗಳಲ್ಲಿ ಜಿಯೋದಲ್ಲಿ ಹೂಡಿಕೆ ಮಾಡಿದ 6ನೇ ಸಂಸ್ಥೆ ಇದಾಗಿದೆ. ಈ ಹಿಂದೆ ಕಳೆದ ಏಪ್ರಿಲ್ 22ರಂದು ಫೇಸ್ ಬುಕ್ ಸಂಸ್ಥೆ ಶೇ. 9.99ರಷ್ಟು ಷೇರು ಖರೀದಿ (87,655.35 ಕೋಟಿ ರೂ) ಮಾಡಿ ಅಚ್ಚರಿ ಮೂಡಿಸಿತ್ತು. ಬಳಿಕ ಮೇ 3ರಂದು ಸಿಲ್ವರ್ ಲೇಕ್ ಸಂಸ್ಥೆ ಶೇ. 1.15ರಷ್ಟು ಷೇರು (5,655.75 ಕೋಟಿ ರೂ.) ಖರೀದಿ ಮಾಡಿತ್ತು. ಬಳಿಕ ಮೇ 8ರಂದು ವಿಸ್ತಾ ಸಂಸ್ಥೆ ಶೇ.2.32ರಷ್ಟು (11,367 ಕೋಟಿ ರೂ) ಷೇರು ಖರೀದಿ ಮಾಡಿತ್ತು. ಇದಾದ ನಂತರ ಮೇ 17ರಂದು ಜನರಲೆ ಅಟ್ಲಾಂಟಿಕ್ ಸಂಸ್ಥೆ ಶೇ.1.34ರಷ್ಟು (6598.38  ಕೋಟಿ ರೂ) ಷೇರು ಖರೀದಿ ಮಾಡಿತ್ತು. ಮೇ 22ರಂದು ಕೆಕೆಆರ್ ಶೇ. 2.32ರಷ್ಟು (11,367 ಕೋಟಿ ರೂ) ಷೇರು ಖರೀದಿ ಮಾಡಿತ್ತು. 

ಇದೀಗ ಜಿಯೋದಲ್ಲಿ ಅಬುದಾಬಿ ಮೂಲದ ಮುಬದಲಾ ಶೇ.1.85ರಷ್ಟು ಪಾಲುದಾರಿಕೆ ಹೊಂದಿದೆ. ಆ ಮೂಲಕ ಮುಖೇಶ್ ಅಂಬಾನಿಯ ಒಡೆತನದ ಜಿಯೋ ಸಂಸ್ಥೆಯ ಮೇಲೆ ಸತತ ಜಾಗತಿಕ ಹೂಡಿಕೆಯ ಒಟ್ಟು ಮೌಲ್ಯ  87,655.35 ಕೋಟಿ ರೂ. ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com