4ನೇ ತ್ರೈಮಾಸಿಕದಲ್ಲಿ ಎಸ್ ಬಿಐ ಲಾಭ 4 ಪಟ್ಟು ಏರಿಕೆ! 

ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ 2019-20ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಬರೊಬ್ಬರಿ ನಾಲ್ಕು ಪಟ್ಟು ಆದಾಯ ಹೆಚ್ಚಿಸಿಕೊಂಡಿದೆ. 
4ನೇ ತ್ರೈಮಾಸಿಕದಲ್ಲಿ ಎಸ್ ಬಿಐ ಆದಾಯ 4 ಪಟ್ಟು ಏರಿಕೆ!
4ನೇ ತ್ರೈಮಾಸಿಕದಲ್ಲಿ ಎಸ್ ಬಿಐ ಆದಾಯ 4 ಪಟ್ಟು ಏರಿಕೆ!

ಮುಂಬೈ: ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ 2019-20ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಬರೊಬ್ಬರಿ ನಾಲ್ಕು ಪಟ್ಟು ಆದಾಯ ಹೆಚ್ಚಿಸಿಕೊಂಡಿದೆ. 

ಸಂಸ್ಥೆಯ ನಿವ್ವಳ ಲಾಭ ಈ ಅವಧಿಯಲ್ಲಿ 3,581 ಕೋಟಿ ರೂಪಾಯಿಯಷ್ಟಾಗಿದೆ. 2018-19 ರ ಅವಧಿಯಲ್ಲಿ ಬ್ಯಾಂಕ್ ನ ಲಾಭ 838.4 ಕೋಟಿಯಷ್ಟಿತ್ತು. ಕಳೆದ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ  ಬ್ಯಾಂಕ್ ನ ಆದಾಯ 76,027.51 ಕೋಟಿ ರೂಪಾಯಿಗಳಷ್ಟಾಗಿದೆ. 2018-19ರಲ್ಲಿ 75,670.5 ಕೋಟಿ ರೂಪಾಯಿಯಷ್ಟಿತ್ತು ಎಂದು ಎಸ್ ಬಿಐ ತಿಳಿಸಿದೆ. 

ಇನ್ನು ಎನ್ ಪಿಎ ವಿಷಯದಲ್ಲೂ ಸ್ಟೇಟ್ ಬ್ಯಾಂಕ್ ಸುಧಾರಣೆ ಕಂಡಿದ್ದು, 2019 ರಲ್ಲಿ ಶೇ.7.53 ರಷ್ಟಿದ್ದ ಎನ್ ಪಿಎ 2020 ರ ಮಾರ್ಚ್ 31 ರ ವೇಳೆಗೆ ಶೇ.6.15 ಕ್ಕೆ ಇಳಿಕೆಯಾಗಿದ್ದು, ಶೇ.3.01 ರಿಂದ ಶೇ.2.23 ರಷ್ಟಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com