ಆರ್ಥಿಕತೆ ಬಗ್ಗೆ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸಿದ ಆರ್ ಬಿಐ 

ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು, ಮೈಕ್ರೋ ಎಕಾನಾಮಿಕ್ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ.
ಆರ್ಥಿಕತೆ ಬಗ್ಗೆ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸಿದ ಆರ್ ಬಿಐ
ಆರ್ಥಿಕತೆ ಬಗ್ಗೆ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸಿದ ಆರ್ ಬಿಐ

ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು, ಮೈಕ್ರೋ ಎಕಾನಾಮಿಕ್ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಆರ್ಥಿಕತೆಯ ವಿವಿಧ ಕ್ಷೇತ್ರಗಳ ಬಗ್ಗೆ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳಿಂದ ಅಭಿಪ್ರಾಯವನ್ನೂ ಸಂಗ್ರಹಿಸಿದ್ದಾರೆ. 

ಕ್ರೆಡಿಟ್ ರೇಟಿಂಗ್ ಸಂಸ್ಥೆ ಸ್ಟ್ಯಾಂಡರ್ಡ್ ಹಾಗೂ ಪೂರ್ಸ್ ಭಾರತದ ದೀರ್ಘಾವಧಿಯ ವಿದೇಶಿ ಹಾಗೂ ಸ್ಥಳೀಯ ಕ್ರೆಡಿಟ್ ನ್ನು ಅತ್ಯಂತ ಕಡಿಮೆ ಹೂಡಿಕೆ ಗ್ರೇಡ್ ನೀಡಿದ್ದು, ಆರ್ಥಿಕತೆಗೆ ಸಂಬಂಧಿಸಿದಂತೆ ಸ್ಥಿರತೆ ಕಾಯ್ದುಕೊಳ್ಳಲಿದೆ ಎಂಬ ವರದಿ ಪ್ರಕಟಿಸಿತ್ತು. ಈ ಬೆನ್ನಲ್ಲೇ ಆರ್ ಬಿಐ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. 

ಭಾರತದ ದೀರ್ಘಾವಧಿಯ ರೇಟಿಂಗ್ ನ್ನು ಬಿಬಿಬಿ-ಮೈನಸ್ ನೀಡಿದ್ದು, ಅಲ್ಪಾವಧಿಯ ರೇಟಿಂಗ್ ನ್ನು A3 ನಲ್ಲಿ ಗುರುತಿಸಲಾಗಿದೆ. ಜೂ.01 ರಂದು ಮೂಡೀಸ್ ಭಾರತದ ರೇಟಿಂಗ್ ನ್ನು ಬಿಎಎ2-ಬಿಎಎ3 ಗೆ ಇಳಿಕೆ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com