ಹಳೆಯ ಜಿಎಸ್‍ಟಿ ರಿಟರ್ನ್ಸ್ ಗಳಿಗೆ ವಿಳಂಬ ಪಾವತಿ ಶುಲ್ಕ ಇಲ್ಲ: ನಿರ್ಮಲಾ ಸೀತಾರಾಮನ್‍

ಜುಲೈ 2017 ಮತ್ತು ಜನವರಿ 2020 ರ ನಡುವೆ ಜಿಎಸ್‍ಟಿ ರಿಟರ್ನ್ಸ್ ಬಾಕಿಯಿರದ ನೋಂದಾಯಿತ ಸಂಸ್ಥೆಗಳಿಗೆ ಯಾವುದೇ ವಿಳಂಬ ಪಾವತಿ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ನವದೆಹಲಿ: ಜುಲೈ 2017 ಮತ್ತು ಜನವರಿ 2020 ರ ನಡುವೆ ಜಿಎಸ್‍ಟಿ ರಿಟರ್ನ್ಸ್ ಬಾಕಿಯಿರದ ನೋಂದಾಯಿತ ಸಂಸ್ಥೆಗಳಿಗೆ ಯಾವುದೇ ವಿಳಂಬ ಪಾವತಿ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಹೇಳಿದ್ದಾರೆ.

5 ಕೋಟಿ ರೂ. ವಹಿವಾಟು ಹೊಂದಿರುವ ಸಣ್ಣ ತೆರಿಗೆದಾರರಿಗೆ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ 2020 ರಲ್ಲಿ ಜಾರಿಗೆ ಬರುವಂತೆ ಸರಬರಾಜುಗಳಿಗಾಗಿ ರಿಟರ್ನ್ಸ್‍ ವಿಳಂಬ ಪಾವತಿಗೆ ಬಡ್ಡಿದರವನ್ನು ವಾರ್ಷಿಕ ಶೇ 18ರಿಂದ ಶೇ. 9 ಕ್ಕೆ ಇಳಿಸಲಾಗಿದೆ.

ಅಂದರೆ, ಪರಿಹಾರಕ್ಕಾಗಿ ಅಧಿಸೂಚಿತ ದಿನಾಂಕಗಳವರೆಗೆ ಸಣ್ಣ ತೆರಿಗೆದಾರರಿಗೆ ಯಾವುದೇ ಬಡ್ಡಿಯನ್ನು ವಿಧಿಸಲಾಗುವುದಿಲ್ಲ. ನಂತರ ಸೆಪ್ಟೆಂಬರ್ 31 ರವರೆಗೆ ಶೇ. 9 ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ ಸಚಿವರು ತಿಳಿಸಿದರು.

ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 40 ನೇ ಜಿಎಸ್‌ಟಿ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಜಿಎಸ್‍ಟಿ ಆರ್ -3 ಬಿ ವಿಳಂಬ ಫೈಲಿಂಗ್ ಶುಲ್ಕವನ್ನು 500 ರೂ.ಗೆ ನಿಗದಿಪಡಿಸಲಾಗಿದೆ. ಜುಲೈ 2017 ರಿಂದ ಜನವರಿ 2020 ರವರೆಗಿನ ತೆರಿಗೆ ಅವಧಿಯಲ್ಲಿ ಜಿಎಸ್‌ಟಿಆರ್ -3 ಬಿ ನಮೂನೆಯನ್ನು ಸಲಿಸದಿರುವ ತೆರಿಗೆದಾರರಿಗೆ ಶುಲ್ಕವನ್ನು ಕಡಿಮೆ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ರಾಜ್ಯಗಳಿಗೆ ನೀಡಬೇಕಾದ ಪರಿಹಾರ ಸೆಸ್ ಸೇರಿದಂತೆ ಇತರ ವಿಷಯಗಳನ್ನು ಚರ್ಚಿಸಲು ಜುಲೈನಲ್ಲಿ ಸಭೆ ನಡೆಯಲಿದೆ. ದಿನಾಂಕಗಳನ್ನು ನಂತರ ನಿಗದಿಪಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com