ಎಜಿಆರ್ ಸಂಬಂಧಿತ 4 ಲಕ್ಷ ಕೋಟಿ ರೂ. ಬಾಕಿಯಲ್ಲಿ ಶೇ 96 ರಷ್ಟು ಹಣವನ್ನು ಹಿಂಪಡೆಯಲಾಗುವುದು: ಕೇಂದ್ರ

ಖಾಸಗಿ ಟೆಲಿಕಾಂ ಕಂಪೆನಿಗಳಿಂದ ಬಾಕಿ ಎಜಿಆರ್ ಶುಲ್ಕ ಪಾವತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೇಡಿಕೆ ಇಡಲಾಗಿದ್ದ 4 ಲಕ್ಷ ಕೋಟಿ ರೂಪಾಯಿಗಳಲ್ಲಿ ಶೇಕಡಾ 96ರಷ್ಟನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಗುರುವಾರ ತಿಳಿಸಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಖಾಸಗಿ ಟೆಲಿಕಾಂ ಕಂಪೆನಿಗಳಿಂದ ಬಾಕಿ ಎಜಿಆರ್ ಶುಲ್ಕ ಪಾವತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೇಡಿಕೆ ಇಡಲಾಗಿದ್ದ 4 ಲಕ್ಷ ಕೋಟಿ ರೂಪಾಯಿಗಳಲ್ಲಿ ಶೇಕಡಾ 96ರಷ್ಟನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಗುರುವಾರ ತಿಳಿಸಿದೆ.

ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್ ಅಬ್ದುಲ್ ನಸೀರ್ ಮತ್ತು ಎಂ ಆರ್ ಶಾ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಸರ್ಕಾರದ ಪರ ವಕೀಲ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಇಂದು ಈ ವಿಷಯ ತಿಳಿಸಿದ್ದು ಎಜಿಆರ್ ಶುಲ್ಕ ಪಾವತಿಗೆ ಒತ್ತಾಯಿಸಲು ಕಾರಣವೇನು ಎಂಬ ಬಗ್ಗೆ ವಿವರ ನೀಡಲು ದೂರ ಸಂಪರ್ಕ ಇಲಾಖೆ ಅಫಿಡವಿಟ್ಟು ಸಲ್ಲಿಸಿದೆ ಎಂದು ಹೇಳಿದರು.
ಖಾಸಗಿ ಟೆಲಿಕಾಂ ಕಂಪೆನಿಗಳಾದ ಭಾರ್ತಿ ಏರ್ ಟೆಲ್, ವೊಡಾಫೋನ್ ಐಡಿಯಾ ಲಿಮಿಟೆಡ್ ಮೊದಲಾದವು ಎಜಿಆರ್ ಶುಲ್ಕ ಪಾವತಿ ಮಾಡುವುದಕ್ಕೆ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಖಾಸಗಿ ಕಂಪೆನಿಗಳು ಸಲ್ಲಿಸಿದ್ದ ಅಫಿಡವಿಟ್ಟಿಗೆ ಉತ್ತರಿಸಲು ಟೆಲಿಕಾಂ ಇಲಾಖೆ ಸಮಯಾವಕಾಶ ಕೇಳಿದೆ.

ಈ ಸಂದರ್ಭದಲ್ಲಿ ನ್ಯಾಯಾಲಯ ಟೆಲಿಕಾಂ ಕಂಪೆನಿಗಳಿಗೆ ಹಣಕಾಸು ಹೇಳಿಕೆಗಳನ್ನು ಸಲ್ಲಿಸಲು ಸೂಚಿಸಿ ಮುಂದಿನ ವಿಚಾರಣೆಯನ್ನು ಜುಲೈ ಮೂರನೇ ವಾರಕ್ಕೆ ಮುಂದೂಡಿತು.

ಬಾಕಿ ಎಜಿಆರ್ ಶುಲ್ಕ ಪಾವತಿಗೆ ಗ್ಯಾರಂಟಿ ಮತ್ತು ಸೆಕ್ಯುರಿಟಿ ಏನು ಕೊಡುತ್ತೀರಿ ಎಂದು ಖಾಸಗಿ ಟೆಲಿಕಾಂ ಕಂಪೆನಿಗಳ ಬಳಿ ನ್ಯಾಯಪೀಠ ಕೇಳಿತು.

ವೊಡಾಫೋನ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೊಹ್ಟಗಿ, ಕಂಪೆನಿ ಈಗಾಗಲೇ 7 ಸಾವಿರ ಕೋಟಿ ರೂಪಾಯಿಗಳನ್ನು ಟೆಲಿಕಾಂ ಇಲಾಖೆಗೆ ಪಾವತಿಸಿದ್ದು ಸದ್ಯದ ಹಣಕಾಸು ಬಿಕ್ಕಟ್ಟಿನಲ್ಲಿ ಬ್ಯಾಂಕ್ ಗ್ಯಾರಂಟಿ ನೀಡಲು ಸಾಧ್ಯವಿಲ್ಲ ಎಂದರು.

ಅದಕ್ಕೆ ನ್ಯಾಯಾಲಯ ಕೋವಿಡ್-19 ಸಂಕಷ್ಟದ ಸಮಯದಲ್ಲಿ ಬೇರೆ ಎಲ್ಲಾ ವಲಯಗಳು ಹಣಕಾಸು ತೊಂದರೆಯನ್ನು ಎದುರಿಸಿದ್ದರೆ ಟೆಲಿಕಾಂ ವಲಯಗಳಿಗೆ ಮಾತ್ರ ಯಾವುದೇ ತೊಂದರೆಯಾಗಿಲ್ಲ, ಅವು ಹಣ ಸಂಪಾದನೆ ಮಾಡಿದ್ದು ಸ್ವಲ್ಪ ಪ್ರಮಾಣದಲ್ಲಿ ಹಣವನ್ನು ಸರ್ಕಾರಕ್ಕೆ ಕೊಡಬೇಕು ಎಂದು ಹೇಳಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com