ಹೊಸ ಆದಾಯ ತೆರಿಗೆ ಪದ್ಧತಿಯಿಂದ ನಮ್ಮ ಉದ್ಯೋಗಿಗಳಿಗೆ ಲಾಭವಿಲ್ಲ: ಶೇ 81ರಷ್ಟು ಕಂಪೆನಿಗಳ ಅಭಿಮತ 

ಹೊಸ ಆದಾಯ ತೆರಿಗೆ ವಿಧಾನ ತಮ್ಮ ಉದ್ಯೋಗಿಗಳಿಗೆ ಅನುಕೂಲವಾಗಿಲ್ಲ ಎಂದು ಶೇಕಡಾ 81ರಷ್ಟು ಕಂಪೆನಿಗಳು ಭಾವಿಸುತ್ತಿವೆ ಎಂದು ಮಾನವ ಸಂಪನ್ಮೂಲ ಮತ್ತು ಹಣಕಾಸು ವೃತ್ತಿಪರ ಕಂಪೆನಿಗಳಲ್ಲಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
ಹೊಸ ಆದಾಯ ತೆರಿಗೆ ಪದ್ಧತಿಯಿಂದ ನಮ್ಮ ಉದ್ಯೋಗಿಗಳಿಗೆ ಲಾಭವಿಲ್ಲ: ಶೇ 81ರಷ್ಟು ಕಂಪೆನಿಗಳ ಅಭಿಮತ 

ಮುಂಬೈ:ಹೊಸ ಆದಾಯ ತೆರಿಗೆ ವಿಧಾನ ತಮ್ಮ ಉದ್ಯೋಗಿಗಳಿಗೆ ಅನುಕೂಲವಾಗಿಲ್ಲ ಎಂದು ಶೇಕಡಾ 81ರಷ್ಟು ಕಂಪೆನಿಗಳು ಭಾವಿಸುತ್ತಿವೆ ಎಂದು ಮಾನವ ಸಂಪನ್ಮೂಲ ಮತ್ತು ಹಣಕಾಸು ವೃತ್ತಿಪರ ಕಂಪೆನಿಗಳಲ್ಲಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.


ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಹೊಸ ರೀತಿಯ ತೆರಿಗೆ ವಿಧಾನವನ್ನು ಘೋಷಿಸಿತ್ತು. ಈಗಿರುವ ಎಲ್ಲಾ ಕಡಿತ ಮತ್ತು ವಿನಾಯಿತಿಗಳನ್ನು ತೆರಿಗೆ ಪಾವತಿದಾರರಿಗೆ ಮುಂದುವರಿಸುವ ವಿಧಾನ ಇದಾಗಿದೆ.ಮರ್ಸರ್ ಕಂಪೆನಿ ದೇಶಾದ್ಯಂತ ಸುಮಾರು 119 ಕಂಪೆನಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ, ಶೇಕಡಾ 81ರಷ್ಟು ಉದ್ಯೋಗಿಗಳು ಹೊಸ ತೆರಿಗೆ ವಿಧಾನ ತಮಗೆ ಅನುಕೂಲವಾಗಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದೆ.


5ರಿಂದ 10 ಲಕ್ಷ ಆದಾಯ ಹೊಂದಿರುವವರು, 10ರಿಂದ 25 ಲಕ್ಷದೊಳಗೆ ಆದಾಯ ಹೊಂದಿರುವವರು ಹೊಸ ತೆರಿಗೆ ವಿಧಾನದಿಂದ ಪರಿಣಾಮ ಬೀರುತ್ತಾರೆ. ಶೇಕಡಾ 80ರಷ್ಟು ತೆರಿಗೆ ಪಾವತಿದಾರರು ಹೊಸ ತೆರಿಗೆ ವಿಧಾನದಿಂದ ತಮಗೆ ಮತ್ತು ತಮ್ಮ ನಿವೃತ್ತಿ ನಂತರ ತೊಂದರೆಯಾಗಲಿದೆ ಎಂದು ಭಾವಿಸಿದ್ದಾರೆ.


ಹೊಸ ತೆರಿಗೆ ವಿಧಾನದಿಂದ ಸ್ವಯಂ ನಿವೃತ್ತಿ ಪಡೆಯುವ ನೌಕರರಿಗೆ ಸೌಲಭ್ಯಗಳು ಸಿಗುವುದಿಲ್ಲ. ಅಧಿಕ ಆದಾಯ ಹೊಂದಿರುವವರು ಬೇರೆ ಹೂಡಿಕೆ ಆಯ್ಕೆಗಳನ್ನು ನೋಡಬೇಕಾಗುತ್ತದೆ. ಇದರಿಂದ ಕಂಪೆನಿಗಳಿಗೆ ಸಹ ಸವಾಲಾಗಿರುತ್ತದೆ. ಎರಡು ತೆರಿಗೆ ವಿಧಾನವನ್ನು ನಿಭಾಯಿಸುವುದು ಕಂಪೆನಿಗಳ ಹೆಚ್ ಆರ್ ವಿಭಾಗಕ್ಕೆ ಕೂಡ ಸವಾಲಾಗಿರುತ್ತದೆ ಮತ್ತು ನಿರ್ವಹಣೆ ವೆಚ್ಚ ಅಧಿಕವಾಗಿರುತ್ತದೆ. 
ಸಮೀಕ್ಷೆಯಲ್ಲಿ ಹಣಕಾಸು ಸೇವೆ, ಉತ್ಪಾದನೆ, ಐಟಿ, ಆರೋಗ್ಯಸೇವೆ, ಕೆಮಿಕಲ್, ಜೀವ ವಿಜ್ಞಾನ, ಸಮಾಲೋಚನೆ, ಟೆಲಿಕಾಂ, ಎಫ್ಎಂಸಿಜಿ/ರಿಟೈಲ್, ಪ್ರಯಾಣ/ ಲಾಜಿಸ್ಟಿಕ್, ಶಿಕ್ಷಣ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com