'ಯೆಸ್' ಬ್ಯಾಂಕ್ ಗೆ ತಾತ್ಕಾಲಿಕ ನಿಷೇಧ ಏಕೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ 

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಫಲವಾಗಿರುವ ಯೆಸ್ ಬ್ಯಾಂಕ್ ಆಡಳಿತವನ್ನು ಭಾರತೀಯ ರಿಸರ್ವ್ ಬ್ಯಾಂಕ್  ಇಂದು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಎಸ್ ಬಿಐನಿಂದ ಆಡಳಿತಾಧಿಕಾರಿಯೊಬ್ಬರನ್ನು ನೇಮಿಸುವ ಮೂಲಕ  ಅದರ ಕಾರ್ಯಾಚರಣೆ ಮಾಡಲಾಗುತ್ತಿದೆ.
ಯೆಸ್ ಬ್ಯಾಂಕ್
ಯೆಸ್ ಬ್ಯಾಂಕ್

ಮುಂಬೈ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಫಲವಾಗಿರುವ ಯೆಸ್ ಬ್ಯಾಂಕ್ ಆಡಳಿತವನ್ನು ಭಾರತೀಯ ರಿಸರ್ವ್ ಬ್ಯಾಂಕ್  ಇಂದು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಎಸ್ ಬಿಐನಿಂದ ಆಡಳಿತಾಧಿಕಾರಿಯೊಬ್ಬರನ್ನು ನೇಮಿಸುವ ಮೂಲಕ  ಅದರ ಕಾರ್ಯಾಚರಣೆ ಮಾಡಲಾಗುತ್ತಿದೆ.

ಕೇಂದ್ರ ಸರ್ಕಾರ ಈ ಬ್ಯಾಂಕ್ ನ್ನು ರಕ್ಷಿಸುವ ಯೋಜನೆ ಹಾಕಿಕೊಂಡಿದ್ದು, ಶೀಘ್ರದಲ್ಲಿಯೇ ಘೋಷಣೆ ಮಾಡುವ ಸಾಧ್ಯತೆ ಇದೆ. ಗ್ರಾಹಕರು ಯಾವುದೇ ರೀತಿಯ ಆತಂಕ ಪಡದಂತೆ ಕೇಂದ್ರ ಬ್ಯಾಂಕ್ ಭರವಸೆ ನೀಡಿದೆ. 

ಶೀಘ್ರದಲ್ಲಿಯೇ ಪರಿಹಾರ ಕಂಡುಹಿಡಿಯಲಾಗುವುದು, 30 ದಿನಗಳ ನಿಷೇಧವನ್ನು ಕೇಂದ್ರ ಸರ್ಕಾರ ವಿಧಿಸಿದೆ ಅಂದ್ರೆ ತಿಂಗಳೊಳಗೆ ಕೇಂದ್ರ ಬ್ಯಾಂಕ್ ಸಮಸ್ಯೆ ಪರಿಹರಿಸಲಿದೆ ಎಂಬರ್ಥ ಎಂದು ಆರ್ ಬಿಐ ಗೌರ್ವನರ್ ಶಕ್ತಿಕಾಂತ ದಾಸ್ ಪುನರುಚ್ಚರಿಸಿದ್ದಾರೆ.

ನಿಷೇಧ ಏತಕ್ಕೆ?

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಸೆಕ್ಷನ್ 45ರ ಅಡಿಯಲ್ಲಿ ಮಾರ್ಚ್ 5 ರಿಂದ ಏಪ್ರಿಲ್ 6ರವರೆಗೂ  ಒಂದು ತಿಂಗಳ ಕಾಲ ನಿರ್ಬಂಧ ಹೇರಲಾಗಿದೆ. ಈ ಅವಧಿಯಲ್ಲಿ, ಠೇವಣಿ ಹಿಂಪಡೆಯುವಿಕೆಯನ್ನು ಮುಚ್ಚಲಾಗುತ್ತದೆ, ಆದರೆ ಬ್ಯಾಂಕ್ ಹೊಸ ಸಾಲಗಳನ್ನು ನೀಡಲು ಅಥವಾ ಇತರ ಸಾಲಗಳನ್ನು ಹೊರತುಪಡಿಸಿ ಅಸ್ತಿತ್ವದಲ್ಲಿರುವ ಸಾಲಗಳನ್ನು ನವೀಕರಿಸಲು ಸಾಧ್ಯವಿಲ್ಲ.

ಒಂದು ವೇಳೆ ನೀವು ಠೇವಣಿದಾರರಾಗಿದ್ದು, ಅನೇಕ ಖಾತೆಗಳನ್ನು ಹೊಂದಿದ್ದರೆ   ಇಂದಿನಿಂದ ಏಪ್ರಿಲ್ 6ರವರೆಗೂ 50 ಸಾವಿರ ರೂ. ವಿತ್ ಡ್ರಾ ಮಾಡಬಹುದು. ಆದಾಗ್ಯೂ, ವೈದ್ಯಕೀಯ ತುರ್ತುಪರಿಸ್ಥಿತಿ ಅಥವಾ ಮದುವೆ, ಶಿಕ್ಷಣ ಮತ್ತಿತರ ಅಗತ್ಯತೆ ಸಂದರ್ಭಗಳಲ್ಲಿ 5 ಲಕ್ಷ ರೂ. ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬಹುದು.

ನಿಮ್ಮ ಹಣದ ಕಥೆ ಏನು?

ವಿತ್ ಡ್ರಾ ಮಾಡಿಕೊಳ್ಳಲು ಮಿತಿಗಳಿದ್ದರೂ ಠೇವಣಿದಾರರು ತಮ್ಮ ಹಣದ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಸಂದರ್ಭದಲ್ಲೂ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ ಅಡಿಯಲ್ಲಿ  ಪ್ರತಿ ಖಾತೆಗೂ  ಬಡ್ಡಿ ಜೊತೆಗೆ 5 ಲಕ್ಷದಷ್ಟು ನಿಮ್ಮ ಠೇವಣಿ ಹಣ ಸುರಕ್ಷಿತವಾಗಿ ಇರಲಿದೆ. 

 ತಮ್ಮ ಮೇಲ್ವಿಚಾರಣೆಯಲ್ಲಿ ಯಾವುದೇ ಭಾರತೀಯ ಬ್ಯಾಂಕುಗಳು ವಿಫಲಗೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ಹಾಗೂ ಆರ್ ಬಿಐ ಭರವಸೆ ನೀಡಿದ್ದು, ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲಾಗುವುದು, ಯಾವುದೇ ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಆರ್ ಬಿಐ ಇಂದು ಹೇಳಿದೆ.

ಖಾತೆ ದಾರರರಿಗೆ ಮಾಹಿತಿ

ಯೆಸ್ ಬ್ಯಾಂಕ್ ಖಾತೆಯಿಂದ ಮನೆ, ಆಟೋ, ಇತರೆ ಯಾವುದೇ ರೀತಿಯ ಸಾಲಕ್ಕಾಗಿ ತಿಂಗಳ ಕಂತು ಕಟ್ಟುತ್ತಿದ್ದರೆ ಅಥವಾ ಮ್ಯೂಚುವಲ್ ಫಂಡ್ ಹೂಡಿಕೆಗೆ ಬಳಿಸಿದ್ದರೆ ನಿಷೇಧ ಹೇರಲಾಗಿರುವ ಅವಧಿಯಷ್ಟು ದಿನ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ

ಆರ್ ಬಿಐ ಮಾಹಿತಿ ಪ್ರಕಾರ ಯೆಸ್ ಬ್ಯಾಂಕ್ ದೇಶದ ನಾಲ್ಕನೇ ಅತಿದೊಡ್ಡ ಖಾಸಗಿ ಕ್ಷೇತ್ರದ ಸಾಲಗಾರ ಬ್ಯಾಂಕ್ ಆಗಿದೆ. ಯೆಸ್ ಬ್ಯಾಂಕ್ 28 ಲಕ್ಷ ಡೆಬಿಟ್ ಕಾರ್ಡ್ ದಾರರನ್ನು ಹೊಂದಿದ್ದು, ಕಳೆದ ವರ್ಷ ಸೆಪ್ಟೆಂಬರ್ ವೇಳೆ 2 ಲಕ್ಷ ಕೋಟಿ ಠೇವಣಿ ಇಡಲಾಗಿತ್ತು. ರಿಟೈಲ್ ಮತ್ತು ಸಣ್ಣ ವ್ಯವಹಾರಗಳ ಗ್ರಾಹಕರಿಂದ ಇಡಲಾಗಿದ್ದ ಠೇವಣಿ 80 ಸಾವಿರ ಕೋಟಿಯಷ್ಟಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com