ಯೆಸ್ ಬ್ಯಾಂಕ್'ನಿಂದಾಗಿರುವ ದೋಷಗಳನ್ನು ಆರ್'ಬಿಐ ನೋಡಿಕೊಳ್ಳಲಿದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ದೇಶದ ದೊಡ್ಡ ಖಾಸಗಿ ಬ್ಯಾಂಕ್ ಗಳಲ್ಲಿ ಒಂದಾದ ಯೆಸ್ ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ವಿತ್ ಡ್ರಾ ಮಿತಿಯನ್ನು ಮಾಸಿಕ ರೂ.50,000ಕ್ಕೆ ನಿಗದಿಪಡಿಸಿದ ಬೆನ್ನಲ್ಲೇ ಬ್ಯಾಂಕ್ ಖಾತೆದಾರರು ತೀವ್ರ ಆತಂಕಕ್ಕೀಡಾಗಿದ್ದು, ಬ್ಯಾಂಕ್ ನಿಂದಾಗಿರುವ ದೋಷಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೋಡಿಕೊಳ್ಳಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದ
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Updated on

ನವದೆಹಲಿ: ದೇಶದ ದೊಡ್ಡ ಖಾಸಗಿ ಬ್ಯಾಂಕ್ ಗಳಲ್ಲಿ ಒಂದಾದ ಯೆಸ್ ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ವಿತ್ ಡ್ರಾ ಮಿತಿಯನ್ನು ಮಾಸಿಕ ರೂ.50,000ಕ್ಕೆ ನಿಗದಿಪಡಿಸಿದ ಬೆನ್ನಲ್ಲೇ ಬ್ಯಾಂಕ್ ಖಾತೆದಾರರು ತೀವ್ರ ಆತಂಕಕ್ಕೀಡಾಗಿದ್ದು, ಬ್ಯಾಂಕ್ ನಿಂದಾಗಿರುವ ದೋಷಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೋಡಿಕೊಳ್ಳಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, 2017ರಿಂದಲೂ ಬ್ಯಾಂಕ್'ನ ಎಲ್ಲಾ ಕಾರ್ಯಗಳನ್ನು ಗಮನಿಸಲಾಗುತ್ತಿದೆ. 2014ಕ್ಕಿಂತ ಮೊದಲು (ಯುಪಿಎ ಸರ್ಕಾರದ ಅವಧಿ) ಯೆಸ್ ಬ್ಯಾಂಕ್ ನಿಂದ ವಸೂಲಾಗದ ಸಾಲಗಳನ್ನು ಮಂಜೂರು ಮಾಡಲಾಗಿತ್ತು. 2014ಕ್ಕಿಂತ ಮೊದಲೇ ಯೆಸ್ ಬ್ಯಾಂಕ್ ದುರ್ಬಲಗೊಳ್ಳಲು ಆರಂಭವಾಗಿತ್ತು. ಆದರೆ, ನಾವು ಅಧಿಕಾರಕ್ಕೆ ಬಂದ ಬಳಿಕ ಬ್ಯಾಂಕ್ ವಿದ್ಯಾಮಾನದ ಮೇಲೆ ನಿಗಾ ಇಡಲಾಯಿತು ಎಂದು ಹೇಳಿದ್ದಾರೆ. 

2017ರಿಂದ ಯೆಸ್ ಬ್ಯಾಂಕಿನಲ್ಲಿ ಆಡಳಿತ ಸಮಸ್ಯೆಗಲು ಹಾಗೂ ದುರ್ಬಲಗೊಳ್ಳಲು ಆರಂಭವಾಗಿತ್ತು. ಇದನ್ನು ಕೇಂದ್ರೀಯ ಬ್ಯಾಂಕ್ ಗಮಿನಿಸುತ್ತಲೇ ಬಂದಿದೆ. ಜೊತೆಗೆ ಆಸ್ತಿ ವರ್ಗೀಕರಣ, ಅಪಾಯಕಾರಿ ಸಾಲದ ನಿರ್ಧಾರಗಳಾದ ಬಳಿಕ ಬ್ಯಾಂಕ್ ನಿರ್ವಹಣೆ ಬದಲಾಯಿಸುವಂತೆ ಆರ್'ಬಿಐ ಸಲಹೆ ಕೂಡ ನೀಡಿತ್ತು. ಪ್ರಸ್ತುತ ಬ್ಯಾಂಕಿನ ನಿರ್ವಹಣೆಯಲ್ಲಿ ಅಕ್ರಮಗಳು ಕಂಡು ಬಂದಿದ್ದು, ತನಿಖೆ ನಡೆಯುತ್ತಿದೆ. ಬ್ಯಾಂಕ್ ನಿಂದ ಎದುರಾಗಿರುವ ಸಮಸ್ಯೆಗಳನ್ನು ನಿವಾರಿಸುವಂತೆ ಆರ್'ಬಿಐಗೆ ಸೂಚನೆ ನೀಡಲಾಗಿದೆ. 

ಕಾನೂನಿನ ಸೂಕ್ತ ಪ್ರಕ್ರಿಯೆಗಳನ್ನು ಪ್ರಜ್ಞಾಪೂರ್ವಕವಾಗಿ ಅನುಸರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಮುಂದಿನ 30 ದಿನಗಳಳಲ್ಲಿ ಯೋಜನೆಗಳನ್ನು ಪುನರ್ ಸ್ಥಾಪನೆಗೊಳ್ಳಲಿದೆ. ಎಸ್ಬಿಐ ಕೂಡ ಯೆಸ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಲು ಇಂಗಿತ ವ್ಯಕ್ತಪಡಿಸಿದೆ. ಯೆಸ್ ಬ್ಯಾಂಕ್ ಉದ್ಯೋಗಿಗಳ ಉದ್ಯೋಗ ಮತ್ತು ವೇತನವನ್ನು ಒಂದು ವರ್ಷದಿಂದ ಖಾತ್ರಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. 

ಅನಿಲ್ ಅಂಬಾನಿ ಸಂಶ್ತೆ, ಇಎಸ್ಎಸ್ಇಎಲ್, ಐಎಲ್ಎಫ್ಎಸ್, ಡಿಹೆಚ್ಎಫ್ಎಲ್ ಮತ್ತು ವೊಡಾಫೋನ್ ಕೂಡ ಯೆಸ್ ಬ್ಯಾಂಕ್ ಮಾನ್ಯತೆಗಳಲ್ಲಿ ಒಂದಾಗಿವೆ. ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಣೆ ಮಾಡಲಾಗುತ್ತದೆ. ಎಲ್ಲಾ ಹೂಡಿಕೆದಾರರ ಹಣ ಸುರಕ್ಷಿತವಾಗಿದೆ ಎಂಬ ಭರವಸೆಯನ್ನು ನೀಡುತ್ತೇವೆ. ಆರ್'ಬಿಐ ಜೊತಗೆ ಮೇಲ್ವಿಚಾರಣೆಗೆ ಅಗತ್ಯವಿರುವ ಪ್ರತಿಯೊಂದು ಸಂಸ್ಥೆಯನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com