ಕೊರೋನಾ: ಹೊರ ರಾಜ್ಯಗಳಿಗೆ ನಂದಿನಿ​ ಹಾಲು ಪೂರೈಕೆ ಸ್ಥಗಿತ

ಕೊರೋನಾವೈರಸ್ ಹಾವಳಿಯ ಕಾರಣ ದೇಶಾದ್ಯಂತ ಲಾಕ್ ಡೌನ್ ಆಗಿದ್ದು ಅಗತ್ಯ ವಸ್ತುಗಳ ಹೊರತು ಬೇರೆಲ್ಲಾ ಉದ್ಯಮಗಳು ಸ್ಥಗಿತವಾಗಿದೆ. ಇದೀಗ ರಾಜ್ಯದ ಪ್ರಮುಖ ಉದ್ಯಮವಾಗಿರುವ ಕೆಎಂಎಫ್ ಸಹ ಕೊರೋನಾ ಕಾರಣಕ್ಕೆ ಹೊರರಾಜ್ಯಗಳಿಗೆ ಹಾಲು ಪೂರೈಕೆ ಸ್ಥಗಿತಗೊಳಿಸಿದೆ.
ನಂದಿನಿ ಹಾಲು
ನಂದಿನಿ ಹಾಲು

ಬೆಂಗಳೂರು: ಕೊರೋನಾವೈರಸ್ ಹಾವಳಿಯ ಕಾರಣ ದೇಶಾದ್ಯಂತ ಲಾಕ್ ಡೌನ್ ಆಗಿದ್ದು ಅಗತ್ಯ ವಸ್ತುಗಳ ಹೊರತು ಬೇರೆಲ್ಲಾ ಉದ್ಯಮಗಳು ಸ್ಥಗಿತವಾಗಿದೆ. ಇದೀಗ ರಾಜ್ಯದ ಪ್ರಮುಖ ಉದ್ಯಮವಾಗಿರುವ ಕೆಎಂಎಫ್ ಸಹ ಕೊರೋನಾ ಕಾರಣಕ್ಕೆ ಹೊರರಾಜ್ಯಗಳಿಗೆ ಹಾಲು ಪೂರೈಕೆ ಸ್ಥಗಿತಗೊಳಿಸಿದೆ.

ಕೊರೋನಾ ಕಾರಣ ದೇಶಾದ್ಯಂತ ಲಾಕ್ ಡೌನ್ ಆಗಿದ್ದು ರಾಜ್ಯದಲ್ಲಿ ಹಾಲಿನ ಪೂರೈಕೆಗೆ ಸಹ ಸಮಸ್ಯೆಯಾಗಿದೆ. ತೆಲಂಗಾಣ, ಮಹಾರಾಶ್ಃಟ್ರ ಸೇರಿದಂತೆ ಹೊರರಾಜ್ಯಗಳಿಗೆ ನಂದಿನಿ ಹಾಲು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಕೆಎಂಎಫ್​ ವ್ಯವಸ್ಥಾಪಕ ನಿರ್ದೇಶದ ಸತೀಶ್​ ಹೇಳೀದ್ದಾರೆ.

ಇಷ್ಟೇಅಲ್ಲದ ರಾಜ್ಯದ ಹೋಟೆಲ್ ಹಾಗೂ ಅಂಗಡಿಗಳು ಬಂದ್ ಆದ ಕಾರಣ ಹಾಲಿನ ಬೇಡಿಕೆಯಲ್ಲಿ ಸಹ ಕುಸಿತವಾಗಿದೆ. ಮನೆಗಳಿಗೆ ಬೇಕಾದ ಹಾಲಿನ ಬೇಡಿಕೆ ಯಥ್ಸ್ಥಿತಿಯಲ್ಲಿದ್ದು ಹೊರರಾಜ್ಯಕ್ಕೆ ಕಳುಹಿಸಬೇಕಾದ ಎರಡೂವರೆ ಲಕ್ಷ ಲೀಟರ್ ಹಾಲು ಪೂರೈಕೆ ಸ್ಥಗಿತವಾಗಿದೆ. ಹೀಗೆ ಸರಬರಾಜು ಆಗದ ಹಾಲನ್ನು ಪೌಡರ್ ರೂಪಕ್ಕೆ ಮಾರ್ಪಡಿಸಾಗುತ್ತದೆ. ರೈತರಿಂದ ಸರಬರಾಜಾಗುವ ಹಾಲಿನ ಪ್ರಮಾಣದಲ್ಲಿ ಇದುವರೆಗೆ ಯಾವ ವ್ಯತ್ಯಾಸವಾಗಿಲ್ಲ ಎಂದು ಸತೀಶ್ ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com