ಹಣಕಾಸು ವರ್ಷದಲ್ಲಿ ವಿಸ್ತರಣೆ ಇಲ್ಲ, ಮುದ್ರಾಂಕ ತೆರಿಗೆ ಅವಧಿ 3 ತಿಂಗಳು ವಿಸ್ತರಣೆ

2019-20ನೇ ಸಾಲಿನ ಹಣಕಾಸು ವರ್ಷದ ಅವಧಿಯನ್ನು ಕೊರೋನಾ ವೈರಸ್ ಹಿನ್ನೆಲೆಯಲ್ಲಿ ವಿಸ್ತರಿಸದ ಕೇಂದ್ರ ಸರ್ಕಾರ ಯಥಾಪ್ರಕಾರ ಪ್ರತಿವರ್ಷದಂತೆ ಈ ವರ್ಷ ಕೂಡ ಇಂದಿಗೆ(ಮಾರ್ಚ್31) ಮುಕ್ತಾಯವಾಗಲಿದೆ.
ಹಣಕಾಸು ವರ್ಷದಲ್ಲಿ ವಿಸ್ತರಣೆ ಇಲ್ಲ, ಮುದ್ರಾಂಕ ತೆರಿಗೆ ಅವಧಿ 3 ತಿಂಗಳು ವಿಸ್ತರಣೆ

ನವದೆಹಲಿ: 2019-20ನೇ ಸಾಲಿನ ಹಣಕಾಸು ವರ್ಷದ ಅವಧಿಯನ್ನು ಕೊರೋನಾ ವೈರಸ್ ಹಿನ್ನೆಲೆಯಲ್ಲಿ ವಿಸ್ತರಿಸದ ಕೇಂದ್ರ ಸರ್ಕಾರ ಯಥಾಪ್ರಕಾರ ಪ್ರತಿವರ್ಷದಂತೆ ಈ ವರ್ಷ ಕೂಡ ಇಂದಿಗೆ(ಮಾರ್ಚ್31) ಮುಕ್ತಾಯವಾಗಲಿದೆ.

ಈ ಹಿಂದೆ ಪ್ರಸಕ್ತ ಹಣಕಾಸು ವರ್ಷ ಜುಲೈ 1ರಿಂದ ಆರಂಭವಾಗಲಿದೆ ಎಂದು ವರದಿಯಾಗಿತ್ತು. ಆದರೆ ಹಣಕಾಸು ವರ್ಷವನ್ನು ವಿಸ್ತರಿಸುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಈ ಸಂಬಂಧ ಕಳೆದ ಸಂಜೆ ಗೆಜೆಟೆಡ್ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರ ಮುದ್ರಾಂಕ ತೆರಿಗೆ ದಿನಾಂಕವನ್ನು ಏಪ್ರಿಲ್ 1ರಿಂದ ಜುಲೈ1ಕ್ಕೆ ವಿಸ್ತರಿಸಿದೆ. ಭಾರತೀಯ ಮುದ್ರಾಂಕ ಕಾಯ್ದೆ(ಐಎಸ್ಎ)ಗೆ ತಿದ್ದುಪಡಿ ತಂದಿರುವ ಹಣಕಾಸು ಸಚಿವಾಲಯ ಅದನ್ನು ಜುಲೈ 1ಕ್ಕೆ ಮುಂದೂಡಿದೆ. ಈ ತಿದ್ದುಪಡಿ ಜುಲೈ 1ರಿಂದ ಜಾರಿಗೆ ಬರಲಿದೆ ಎಂದು ಸರ್ಕಾರ ಹೇಳಿದೆ.

ಕೊರೋನಾ ವೈರಸ್ ನಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಹಣಕಾಸು ವರ್ಷವನ್ನು ಮೂರು ತಿಂಗಳು ವಿಸ್ತರಿಸಬೇಕೆಂದು ಉದ್ಯಮವಲಯಗಳಿಂದ ಕೇಳಿಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com