ಕೊರೋನಾದಿಂದಾಗಿ ಜಾಗತಿಕ ಆರ್ಥಿಕತೆಗೆ 8.8 ಟ್ರಿಲಿಯನ್ ಡಾಲರ್ ನಷ್ಟ: ಏಷ್ಯನ್ ಅಭಿವೃದ್ಧಿ ಬ್ಯಾಂಕ್

ಕೊರೋನಾವೈರಸ್  ಸಾಂಕ್ರಾಮಿಕ ರೋಗದಿಂದಾಗಿ ಜಾಗತಿಕ ಆರ್ಥಿಕತೆಯು 5.8-8.8 ಟ್ರಿಲಿಯನ್ ಯುಎಸ್ ಡಾಲರ್  ನಷ್ಟವನ್ನು ಅನುಭವಿಸುವ ನಿರೀಕ್ಷೆಯಿದೆ ಎಂದು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ತಿಳಿಸಿದೆ. ಇದರಲ್ಲಿ, ದಕ್ಷಿಣ ಏಷ್ಯಾದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಮೇಲಿನ ಪರಿಣಾಮವು 142-218 ಬಿಲಿಯನ್ ಡಾಲರ್‌ಗಳಷ್ಟಿದೆ ಎಂದು ಅದು ಅಂದಾಜಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾವೈರಸ್  ಸಾಂಕ್ರಾಮಿಕ ರೋಗದಿಂದಾಗಿ ಜಾಗತಿಕ ಆರ್ಥಿಕತೆಯು 5.8-8.8 ಟ್ರಿಲಿಯನ್ ಯುಎಸ್ ಡಾಲರ್  ನಷ್ಟವನ್ನು ಅನುಭವಿಸುವ ನಿರೀಕ್ಷೆಯಿದೆ ಎಂದು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ತಿಳಿಸಿದೆ. ಇದರಲ್ಲಿ, ದಕ್ಷಿಣ ಏಷ್ಯಾದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಮೇಲಿನ ಪರಿಣಾಮವು 142-218 ಬಿಲಿಯನ್ ಡಾಲರ್‌ಗಳಷ್ಟಿದೆ ಎಂದು ಅದು ಅಂದಾಜಿಸಿದೆ.

"ಜಾಗತಿಕ ಆರ್ಥಿಕತೆಯು 5.8 ಟ್ರಿಲಿಯನ್ ಡಾಲರ್ ಗಳಿಂದ 8.8 ಟ್ರಿಲಿಯನ್  ಡಾಲರ್ ಗಳಷ್ಟು ನಷ್ಟವನ್ನು ಅನುಭವಿಸಬಹುದು - ಇದು ಜಾಗತಿಕ ಜಿಡಿಪಿಯ ಶೇಕಡಾ 6.4 ರಿಂದ 9.7 ರಷ್ಟಿದೆ - ನೋವೆಲ್ ಕೊರೋನಾವೈರಸ್ ಕಾರಣದಿಂದಾಗಿ ಈ ಬೆಳವಣಿಗೆ ಆಗಲಿದೆ" ಎಂದು ಎಡಿಬಿ ಹೇಳಿದೆ ಏಪ್ರಿಲ್ ಆರಂಭದಲ್ಲಿ ಬಿಡುಗಡೆಯಾದ ಆರ್ಥಿಕ ಸಮೀಕ್ಷೆ ನಂತರ ಇದೀಗ ಹೊಸ ವರದಿ ಪ್ರಕಟವಾಗಿದೆ.

ದಕ್ಷಿಣ ಏಷ್ಯಾದ ಜಿಡಿಪಿ ಸಹ ಶೇಕಡಾ 3.9-6.0 ರಷ್ಟು ಕಡಿಮೆಯಾಗಲಿದೆ, ಇದು ಮುಖ್ಯವಾಗಿ ಬಾಂಗ್ಲಾದೇಶ, ಭಾರತ ಮತ್ತು ಪಾಕಿಸ್ತಾನದಂತಹ ದೇಶಗಳಲ್ಲಿ ಜಾರಿಯಲ್ಲಿರುವ ಕಟ್ಟುನಿಟ್ಟಿನ ನಿರ್ಬಂಧಗಳನ್ನುಅವಲಂಬಿಸಿದೆ. ಮನಿಲಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಸ್ಥೆ, ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದಲ್ಲಿನ ಆರ್ಥಿಕ ನಷ್ಟವು ಮೂರು ತಿಂಗಳ ಅಲ್ಪಾವಧಿಯ ಸನ್ನಿವೇಶದಲ್ಲಿ 1.7 ಟ್ರಿಲಿಯನ್ ಯುಎಸ್ ಡಾಲರ್ ನಿಂದ  6 ತಿಂಗಳ ದೀರ್ಘ ಸನ್ನಿವೇಶದಲ್ಲಿ 2.5 ಟ್ರಿಲಿಯನ್ ಯುಎಸ್ ಡಾಲರ್ ವರೆಗೆ ಇರಬಹುದು ಎಂದು ಹೇಳಿದೆ. ಜಾಗತಿಕ ಉತ್ಪಾದನೆಯಲ್ಲಿ ಒಟ್ಟಾರೆ ಕುಸಿತದ ಶೇಕಡಾ 30 ಪಾಲು ಇದರದ್ದಾಗಿದೆ.

ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಪಿಆರ್‌ಸಿ) 1.1 ಟ್ರಿಲಿಯನ್ ನಿಂದ 1.6 ಟ್ರಿಲಿಯನ್ ಯುಎಸ್ ಡಾಲರ್ ನಷ್ಟ ಅನುಭವಿಸುವ ನಿರೀಕ್ಷೆ ಇದೆ. ಏಪ್ರಿಲ್ 3 ರಂದು ಪ್ರಕಟವಾದ ಏಷ್ಯನ್ ಡೆವಲಪ್‌ಮೆಂಟ್ ಔಟ್ ಲುಕ್  (ಎಡಿಒ) 2020 ರಲ್ಲಿ, ಕೋವಿಡ್ D-19 ರ ಜಾಗತಿಕ ವೆಚ್ಚವನ್ನು 2 ಟ್ರಿಲಿಯನ್ ಡಾಲರ್‌ನಿಂದ 4.1 ಟ್ರಿಲಿಯನ್ ಡಾಲರ್ ವರೆಗೆ ಎಂದು ಸಂಸ್ಥೆ ಅಂದಾಜಿಸಿದೆ. ಈ ಮೊದಲು ಮಾರ್ಚ್ 6 ರಂದು, ಜಾಗತಿಕವಾಗಿ 77 ಬಿಲಿಯನ್ ಡಾಲರ್ ನಿಂದ 347 ಬಿಲಿಯನ್ ಡಾಲರ್ (ಜಾಗತಿಕ ಜಿಡಿಪಿಯ 0.1 ರಿಂದ 0.4 ಶೇಕಡಾ) ವರೆಗಿನ ಆರ್ಥಿಕ ಪರಿಣಾಮವನ್ನು ಅದು ಅಂದಾಜು ಮಾಡಿತ್ತು.ಇನ್ನು ಈ ಎಡಿಬಿ ನ ಅಂದಾಜು  ಜಾಗತಿಕ ಜಿಡಿಪಿಯಲ್ಲಿ 2-4ರ ಕುಸಿತದ ವಿಶ್ವಬ್ಯಾಂಕ್‌ನ ಅಂದಾಜುಗಿಂತ ಎರಡು ಪಟ್ಟು ಹೆಚ್ಚಾಗಿದೆ ಮತ್ತು ಐಎಂಎಫ್‌ನ ವಿಶ್ವ ಆರ್ಥಿಕಔಟ್ ಲುಕ್ ಅಂದಾಜುಗಿಂತ ಸಹ ಹೆಚ್ಚು ಇದೆ. 

ಈ ನಡುವೆ ವಿವಿಧ ದೇಶಗಳು ಘೋಷಿಸಿರುವ ಸ್ಥೂಲ ಆರ್ಥಿಕ ಸ್ಥಿರೀಕರಣ ಪ್ಯಾಕೇಜ್‌ಗಳು ಜಾಗತಿಕ ಜಿಡಿಪಿಯನ್ನು 1.7 ಟ್ರಿಲಿಯನ್ ಡಾಲರ್‌ನಿಂದ 3.4 ಟ್ರಿಲಿಯನ್ ಡಾಲರ್‌ಗೆ (ಜಾಗತಿಕ ಜಿಡಿಪಿಯ ಶೇಕಡಾ 1.9 ರಿಂದ 3.7) ಹೆಚ್ಚಿಸಬಹುದು ಎಂದು ವರದಿ ವಿಶ್ಲೇಷಿಸಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com