ಇಪಿಎಫ್ ವಂತಿಗೆ 12% ರಿಂದ 10% ಗೆ ಇಳಿಸಿ ಸರ್ಕಾರ ಸೂಚನೆ

ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ಆದೇಶಿಸಿದ ಲಾಕ್ ಡೌನ್ ಹಾಗು ಇತರೆ ತೊಂದರೆಗಳಿಂದ ಕಾರ್ಮಿಕರಿಗೆ ಮತ್ತು ಸಂಸ್ಥೆಗಳ ಮಾಲೀಕರಿಗೆ ಪರಿಹಾರ ನೀಡಲು, ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯು ಕಾಲ ಕಾಲಕ್ಕೆ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ.
ಇಪಿಎಫ್ಒ
ಇಪಿಎಫ್ಒ

ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ಆದೇಶಿಸಿದ ಲಾಕ್ ಡೌನ್ ಹಾಗು ಇತರೆ ತೊಂದರೆಗಳಿಂದ ಕಾರ್ಮಿಕರಿಗೆ ಮತ್ತು ಸಂಸ್ಥೆಗಳ ಮಾಲೀಕರಿಗೆ ಪರಿಹಾರ ನೀಡಲು, ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯು ಕಾಲ ಕಾಲಕ್ಕೆ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ.

ಕೇಂದ್ರ ಸರ್ಕಾರವು ಆತ್ಮನಿರ್ಭರ್ ಯೋಜನೆಯಡಿಯಲ್ಲಿ ದಿನಾಂಕ 13.05.2020ರಂದು ಭವಿಷ್ಯನಿಧಿ ಕಾಯ್ದೆ, 1952 ಅಡಿಯಲ್ಲಿ ಬರುವ ಎಲ್ಲಾ ವರ್ಗದ ಸಂಸ್ಥೆಗಳಿಗೆ ಶಾಸನಬಧ್ದ ವಂತಿಗೆಯನ್ನು 12% ರಿಂದ 10% ಗೆ ಇಳಿಸಿ ದಿನಾಂಕ 18.05.20ರ  ಗೆಜೆಟ್ ಪ್ರಕಟಣೆ ಸಂಖ್ಯೆ  1513 (E)ಯಲ್ಲಿ ಪ್ರಕಟಿಸಿದೆ. ಈ ಪ್ರಕಟಣೆಯು ಭವಿಷ್ಯನಿಧಿ ಸಂಘಟನೆ ವೆಬ್ ಸೈಟ್ ನ ಹೋಂಪೇಜ್ ನಲ್ಲಿ ಕೋವಿಡ್-19 ಟ್ಯಾಬ್ ನಲ್ಲಿ ಲಭ್ಯವಿದೆ. 

ಈ ಮೇಲಿನ ಇಳಿಕೆಯು ಕೇಂದ್ರ ಮತ್ತು ರಾಜ್ಯದ ಸಾರ್ವಜನಿಕ ವಲಯ ಸಂಸ್ಥೆಗಳು ಅಥವಾ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ. ಈ ಸಂಸ್ಥೆಗಳು ಮಾಮೂಲಿನಂತೆ ಮೂಲವೇತನ ಮತ್ತು ತುಟ್ಟಿಭತ್ಯೆಯ ಶೇಕಡ 12%ರಷ್ಟು ವಂತಿಗೆಯನ್ನು ಭವಿಷ್ಯನಿಧಿಗೆ ಪಾವತಿಸಬೇಕು.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಅಡಿಯಲ್ಲಿ ಸವಲತ್ತು ಪಡೆಯುತ್ತಿರುವ ಸಂಸ್ಥೆಗಳ ಕಾರ್ಮಿಕರ ಮತ್ತು ಉದ್ಯೋಗದಾತರ 24% ವಂತಿಗೆಯನ್ನು ಕೇಂದ್ರ ಸರ್ಕಾರವೇ ಭರಿಸುತ್ತಿರುವುದರಿಂದ, ಅಂತಹ ಸಂಸ್ಥೆಗಳಿಗೂ ಈ ಇಳಿಕೆಯು ಅನ್ವಯವಾಗುವುದಿಲ್ಲ.

ವಂತಿಗೆಯನ್ನು ಶೇಕಡ 12% ರಿಂದ 10% ಇಳಿಸಿರುವುದರಿಂದ 4.3 ಕೋಟಿ ಕಾರ್ಮಿಕರಿಗೆ ಮತ್ತು 6.5 ಲಕ್ಷ ಸಂಸ್ಥೆಗಳಿಗೆ ಲಾಭವಾಗಲಿದೆ ಮತ್ತು ಹಣದ ದ್ರವ್ಯತೆಯ ಅಭಾವದಿಂದ ತಕ್ಕಮಟ್ಟಿಗೆ ಸುಧಾರಣೆ ಆಗಲಿದೆ. 

ಶಾಸನಬಧ್ಧ ವಂತಿಗೆಯನ್ನು 12% ರಿಂದ 10%ಗೆ ಇಳಿಸಿರುವುದರಿಂದ, ಕಾರ್ಮಿಕರ ಮನೆಗೆ ಕೊಂಡೊಯ್ಯುವ ಸಂಬಳವು ಹೆಚ್ವಾಗಲಿದೆ ಅಂತೆಯೇ ಉದೋಗಾತರ ವಂತಿಗೆಯಲ್ಲಿ ಶೇಕಡ 2%ರಷ್ಟು ಭಾಧ್ಯತೆಯು  ಕಡಿಮೆಯಾಗಲಿದೆ. ಉದಾಹರಣೆಗೆ, ಭವಿಷ್ಯನಿಧಿಗೆ ತೋರಿಸುವ ವೇತನವು ರೂ.10,000.00.00ವಾದರೆ, ಕಾರ್ಮಿಕರ ಪಾಲು ರೂ.1200/-ರ ಬದಲು ರೂ.1000/- ಮತ್ತು ಉದ್ಯೋಗದಾತರ ಪಾಲು ರೂ.1200/-ರ ಬದಲು ಕೇವಲ ರೂ.1000/- ಭರಿಸಬೇಕಾಗುತ್ತದೆ.

ಕಾಸ್ಟ್ ಟು ಕಂಪನಿ (ಸಿಟಿಸಿ) ಮಾದರಿಯಲ್ಲಿ, ಭವಿಷ್ಯನಿಧಿಗೆ ತೋರಿಸುವ ವೇತನವು ರೂ.10,000.00ವಾದರೆ, ಉಧ್ಯೋಗದಾತರಿಂದ ಕಾರ್ಮಿಕರಿಗೆ ರೂ.200/- ಹೆಚ್ಚಾಗಿ ದೊರೆಯಲಿದೆ ಮತ್ತು ಕಾರ್ಮಿಕರಿಂದ ರೂ.200/- ಕಡಿಮೆ ಕಡಿತವಾಗಲಿದೆ. 

ಭವಿಷ್ಯನಿಧಿ ಕಾಯ್ದೆ 1952 ಅಡಿಯಲ್ಲಿ ಯಾವುದೇ ಸದಸ್ಯನು ವಂತಿಗೆಯನ್ನು ಶಾಸನಬಧ್ದ ವಂತಿಗೆಗಿಂತ ಹೆಚ್ಚು ಪಾವತಿಸಬಹುದು ಮತ್ತು ಉದ್ಯೋಗದಾತನು ತನ್ನ ಪಾಲಿನ ವಂತಿಗೆಯನ್ನು ಅಂತಹ ಸದಸ್ಯನ ಖಾತೆಗೆ ಶೇಕಡ 10%ಗೆ ನಿರ್ಭಂದಿಸಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com