ಕೋವಿಡ್-19 ಪರಿಣಾಮ: 101 ಉದ್ಯೋಗಿಗಳನ್ನು ಕೆಲಸದಿಂದ ತೆಗೆದ ಶೇರ್ ಚಾಟ್!

ಕೋವಿಡ್-19 ರ ಪರಿಣಾಮ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ಕತ್ತರಿ ಬೀಳುತ್ತಿದ್ದು, ದೇಶಿಯ ಸಾಮಾಜಿಕ ಜಾಲತಾಣ ಶೇರ್ ಚಾಟ್ 101 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. 
ಕೋವಿಡ್-19 ಪರಿಣಾಮ: 101 ಉದ್ಯೋಗಿಗಳನ್ನು ಕೆಲಸದಿಂದ ತೆಗೆದ ಶೇರ್ ಚಾಟ್!
ಕೋವಿಡ್-19 ಪರಿಣಾಮ: 101 ಉದ್ಯೋಗಿಗಳನ್ನು ಕೆಲಸದಿಂದ ತೆಗೆದ ಶೇರ್ ಚಾಟ್!

ನವದೆಹಲಿ: ಕೋವಿಡ್-19 ರ ಪರಿಣಾಮ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ಕತ್ತರಿ ಬೀಳುತ್ತಿದ್ದು, ದೇಶಿಯ ಸಾಮಾಜಿಕ ಜಾಲತಾಣ ಶೇರ್ ಚಾಟ್ 101 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. 

ಸಂಸ್ಥೆಯ ಒಟ್ಟಾರೆ ನೌಕರರ ಪೈಕಿ 4 ನೇ ಒಂದು ಭಾಗದಷ್ಟು ನೌಕರರನ್ನು ಉದ್ಯೋಗದಿಂದ ತೆಗೆದುಹಾಕುತ್ತಿರುವುದಾಗಿ ಶೇರ್ ಚಾಟ್ ಮೇ.20 ರಂದು ಘೋಷಿಸಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ಸಹ ಸಂಸ್ಥಾಪಕ ಹಾಗೂ ಸಿಇಒ ಅಂಕುಶ್ ಸಚದೇವ ಈ ಬಗ್ಗೆ ಮಾಹಿತಿ ನೀಡಿದ್ದು, ಜಾಹಿರಾತು ಮಾರುಕಟ್ಟೆಯಲ್ಲಿ ಕೋವಿಡ್-19 ರ ಅಸ್ಥಿರತೆಯ ಪರಿಣಾಮ ಸಂಸ್ಥೆಯ ನೌಕರರ ಪೈಕಿ 101 ಜನರನ್ನು ಉದ್ಯೋಗದಿಂದ ತೆಗೆದುಹಾಕಲಾಗಿದೆ. ಮಾರುಕಟ್ಟೆಯಲ್ಲಿ ಉಂಟಾಗಿರುವ ಅಸ್ಥಿರತೆಗಳಿಂದಾಗಿ ಉದ್ಯಮಕ್ಕೆ ಸಂಬಂಧಿಸಿದಂತೆ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ಭಾಗವಾಗಿ ನೌಕರರನ್ನು ಉದ್ಯೋಗದಿಂದ ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ.

ಕಚೇರಿಯಿಂದ ದೂರ ಉಳಿದೇ ಕೆಲಸ ಮಾಡುವ ವಾತಾವರಣವನ್ನು ನಾವು ಅಳವಡಿಕೆ ಮಾಡಿಕೊಳ್ಳಲಾಗಿದೆ. ಕಚೇರಿಯಲ್ಲೇ ನಡೆಯುವ ಕೆಲಸಗಳ ಕುರಿತು ನಾವು ಮರುಪರಿಶೀಲನೆ ಮಾಡಿದ್ದೇವೆ ಎಂದು ಸಿಇಒ ಹೇಳಿದ್ದಾರೆ. 

ತಿಂಗಳಿಗೆ 60 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಶೇರ್ ಚಾಟ್ ಕಳೆದ ಆಗಸ್ಟ್ ನಲ್ಲಿ $100 ರಷ್ಟು ಗಳಿಸಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com