ನಿರ್ಮಲಾ ಸೀತಾರಾಮನ್ ರಿಂದ 2.65 ಲಕ್ಷ ಕೋಟಿ ರೂ. ಗಳ ಹೊಸ ಆರ್ಥಿಕ ಪುನಶ್ಚೇತನ ಪ್ಯಾಕೇಜ್ ಘೋಷಣೆ

ಕೇಂದ್ರ ಸರ್ಕಾರ ದೀಪಾವಳಿ ಸಂದರ್ಭದಲ್ಲಿ ದೇಶದ ಜನತೆಗೆ ಸಂತೋಷದ ಸುದ್ದಿ ನೀಡಿದ್ದು, ಆತ್ಮನಿರ್ಭರ ಯೋಜನೆಯ ಭಾಗವಾಗಿ ಹಲವು ಪ್ರೋತ್ಸಾಹಕಗಳನ್ನು ಘೋಷಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಪ್ರಕಟಿಸಿದರು. 

Published: 12th November 2020 02:23 PM  |   Last Updated: 12th November 2020 04:23 PM   |  A+A-


Nirmala Sitharaman along with Anurag Thakur, at a press conference in New Delhi.

ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

Posted By : Sumana Upadhyaya
Source : PTI

ನವದೆಹಲಿ: ಕೇಂದ್ರ ಸರ್ಕಾರ ದೀಪಾವಳಿ ಸಂದರ್ಭದಲ್ಲಿ ದೇಶದ ಜನತೆಗೆ ಸಂತೋಷದ ಸುದ್ದಿ ನೀಡಿದ್ದು, ಆತ್ಮನಿರ್ಭರ ಯೋಜನೆಯ ಭಾಗವಾಗಿ ಹಲವು ಪ್ರೋತ್ಸಾಹಕಗಳನ್ನು ಘೋಷಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಪ್ರಕಟಿಸಿದರು. 

ದೇಶದ ರೈತರಿಗೆ ಹೆಚ್ಚುವರಿ ತುರ್ತು ಕಾರ್ಯ ಸಂಗ್ರಹ ನಿಧಿಯಿಂದ ನಬಾರ್ಡ್ ಮೂಲಕ 25 ಸಾವಿರ ಕೋಟಿ ರೂಪಾಯಿಗಳನ್ನು ವಿತರಣೆ ಮಾಡಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡು ಮೂಲಕ ರೈತರಿಗೆ 2.5 ಕೋಟಿ ರೂಪಾಯಿಗಳನ್ನು, 1.4 ಲಕ್ಷ ಕೋಟಿ ರೂಪಾಯಿಗಳನ್ನು ರೈತರಿಗೆ ವಿನಿಮಯ ಮಾಡಲಾಗಿದೆ ಎಂದರು. 

ಪ್ರೋತ್ಸಾಹಕ ಪ್ಯಾಕೇಜ್ ಗಳನ್ನು ಘೋಷಿಸಿದ ಕೇಂದ್ರ ಸರ್ಕಾರ: ಇದೇ ಸಂದರ್ಭದಲ್ಲಿ ಆತ್ಮನಿರ್ಭರ 3.0 ಅಡಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಪ್ರೋತ್ಸಾಹಕ ಪ್ಯಾಕೇಜ್ ಗಳನ್ನು ಘೋಷಿಸಿದರು.

ಅವುಗಳು ಇಂತಿವೆ. ಪಿಎಂ ಆವಾಸ್ ಯೋಜನೆಯಡಿ ನಗರ ಪ್ರದೇಶಗಳ ಜನರಿಗೆ ನೀಡಲು 18 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಲಾಗಿದೆ. 

ಹೊಸ ಉದ್ಯೋಗಗಳಿಗೆ ಎರಡು ವರ್ಷಗಳವರೆಗೆ ನಿವೃತ್ತಿ ನಿಧಿಯಡಿ ಕೊಡುಗೆ ನೀಡಲು ಕಂಪೆನಿಗಳಿಗೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡಲಿದೆ. 

ಕೋವಿಡ್-19 ಪುನಶ್ಚೇತನ ಹಂತದಲ್ಲಿ ಹೊಸ ಉದ್ಯೋಗಗಳ ಸೃಷ್ಟಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಹೊಸ ಆತ್ಮನಿರ್ಭರ ಭಾರತ್ ರೋಜ್ ಗಾರ್ ಯೋಜನೆಯನ್ನು ಘೋಷಿಸಿದೆ. ಪ್ರತಿ ಇಪಿಎಫ್ಒ ದಾಖಲಾತಿ ಹೊಂದಿದ ಕಂಪೆನಿಗಳು, ಸಂಘ ಸಂಸ್ಥೆಗಳು ಹೊಸ ಉದ್ಯೋಗಿಗಳನ್ನು ನೇಮಕಾತಿ ಮಾಡಿದರೆ ಅಥವಾ ಕಳೆದ ಮಾರ್ಚ್ 1ರಿಂದ ಸೆಪ್ಟೆಂಬರ್ 30ರ ಮಧ್ಯೆ ಉದ್ಯೋಗ ಕಳೆದುಕೊಂಡವರಿಗೆ ಈ ಸೌಲಭ್ಯ ಸಿಗಲಿದೆ. ಕಳೆದ ಅಕ್ಟೋಬರ್ 1ರಿಂದ ಮುಂದಿನ ವರ್ಷ ಜೂನ್ 30ರವರೆಗೆ ನೇಮಕಗೊಂಡವರಿಗೆ ಎರಡು ವರ್ಷಗಳವರೆಗೆ ಪ್ರೋತ್ಸಾಹಕ ಸಿಗಲಿದೆ.

ಎಲ್ಲಾ ಹೊಸ ಉದ್ಯೋಗಿಗಳಿಗೆ ಸಹಾಯಧನ ಪಡೆಯಲು ಆತ್ಮನಿರ್ಭರ್ ಭಾರತ್ ರೊಜ್ಗರ್ ಯೋಜನೆ ಪ್ರಾರಂಭವಾದ ನಂತರ ಇಪಿಎಫ್‌ಒನಲ್ಲಿ ನೋಂದಾಯಿಸುವ ಸಂಸ್ಥೆಗಳು. 2021 ರ ಜೂನ್ 30 ರವರೆಗೆ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಅವರು ಹೇಳಿದರು. 

ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡು ಯೋಜನೆಯನ್ನು ದೇಶದ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಿಗುತ್ತದೆ. 

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ರೋಜ್ ಗಾರ್ ಯೋಜನೆಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಗ್ರಾಮೀಣ ಉದ್ಯೋಗಕ್ಕೆ 10 ಸಾವಿರ ಕೋಟಿ ರೂಪಾಯಿ.

ಆದಾಯ ತೆರಿಗೆ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದ್ದು, ಪ್ರಾಥಮಿಕ ವಸತಿ ಘಟಕಗಳನ್ನು ಚಾಲ್ತಿಯಲ್ಲಿರುವ ದರಕ್ಕಿಂತ 2 ಕೋಟಿ ರೂಪಾಯಿ ಕಡಿಮೆ ಮೌಲ್ಯಕ್ಕೆ ಮಾರಾಟ ಮಾಡಲು ಅವಕಾಶ.ಇದುವರೆಗೆ ಚಾಲ್ತಿತ ದರ ಮತ್ತು ಒಪ್ಪಂದ ದರದ ಮಧ್ಯೆ ಶೇಕಡಾ 10ರಷ್ಟು ವ್ಯತ್ಯಾಸಕ್ಕೆ ಮಾತ್ರ ಅನುವು ಮಾಡಿಕೊಡಲಾಗಿತ್ತು. 

ವಸತಿ ರಿಯಲ್ ಎಸ್ಟೇಟ್ ವಲಯವನ್ನು ಉತ್ತೇಜಿಸಲು ಈ ವ್ಯತ್ಯಾಸವನ್ನು ಜೂನ್ 30, 2021ರವರೆಗೆ ಶೇಕಡಾ 20ಕ್ಕೆ ಹೆಚ್ಚಿಸಲಾಗಿದೆ. ಅದು ವಸತಿ ಎಸ್ಟೇಟ್ ಘಟಕಗಳ ಪ್ರಾಥಮಿಕ ಮೌಲ್ಯ 2 ಕೋಟಿಯೊಳಗೆ ಇದ್ದರೆ ಮಾತ್ರ.ಇದರಿಂದ ಡೆವಲಪರ್ ಗಳಿಗೆ ಮತ್ತು ಮನೆ ಖರೀದಿಸುವವರಿಗೆ ಸಹಾಯವಾಗುತ್ತದೆ.

ರಸಗೊಬ್ಬರ ಸಬ್ಸಿಡಿ:ಪ್ರೋತ್ಸಾಹಕ ಪ್ಯಾಕೇಜ್ ಭಾಗವಾಗಿ ರೈತರಿಗೆ ರಸಗೊಬ್ಬರ ಸಬ್ಸಿಡಿಯಾಗಿ 65 ಸಾವಿರ ಕೋಟಿ ರೂಪಾಯಿ ಬಿಡುಗಡೆ. ಪ್ರಾಜೆಕ್ಟ್ ರಫ್ತನ್ನು ಕ್ರೆಡಿಟ್ ಗಳ ಹಾದಿಯಲ್ಲಿ ಪ್ರಚುರಪಡಿಸಲು ಎಕ್ಸಿಮ್ ಬ್ಯಾಂಕ್ ಗಳಿಗೆ 3 ಸಾವಿರ ಕೋಟಿ ರೂ ಬಿಡುಗಡೆ. 

ಕೋವಿಡ್-19 ಲಸಿಕೆ ಸಂಶೋಧನೆಗೆ ಬಯೊಟೆಕ್ನಾಲಜಿ ವಿಭಾಗಕ್ಕೆ 900 ಕೋಟಿ ರೂಪಾಯಿ ಧನಸಹಾಯ. ದೇಶೀಯ ರಕ್ಷಣಾ ಉಪಕರಣಗಳು, ಕೈಗಾರಿಕಾ ಪ್ರೋತ್ಸಾಹ ಮತ್ತು ಮೂಲಸೌಕರ್ಯ ಮತ್ತು ಹಸಿರು ಇಂಧನಕ್ಕಾಗಿ ಬಂಡವಾಳ ಮತ್ತು ಕೈಗಾರಿಕಾ ವೆಚ್ಚಗಳಿಗೆ 10,200 ಕೋಟಿ ರೂ.

Stay up to date on all the latest ವಾಣಿಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp