ವೀಕೇರ್ ರವರ ಹೇರ್ ಟ್ರಾನ್ಸ್‏ಪ್ಲಾಂಟೇಶನ್ - ಕೂದಲು ಮರುಬೆಳವಣಿಗೆಗಾಗಿ ಹೊಸ ಭರವಸೆ

ಪ್ರಮುಖ ಮತ್ತು ಸ್ವದೇಶದಲ್ಲಿ ಬೆಳೆದ ಭಾರತೀಯ ಬ್ರ್ಯಾಂಡ್, ವೀಕೇರ್ ಚರ್ಮ ಮತ್ತು ಕೂದಲ ರಕ್ಷಣೆಯ ವಿಭಾಗದಲ್ಲಿ ತನ್ನ ಗ್ರಾಹಕರಿಗೆ ಅಂತರರಾಷ್ಟ್ರೀಯ ಸೌಲಭ್ಯಗಳನ್ನು ತಂದಿದೆ. ಅವರ ಚಿಕಿತ್ಸಾಲಯಗಳು ದಕ್ಷಿಣ ಭಾರತದಾದ್ಯಂತ ಅನೇಕ ಪ್ರಮುಖ ಸ್ಥಳಗಳಲ್ಲಿವೆ.

Published: 13th November 2020 06:00 PM  |   Last Updated: 19th November 2020 02:42 PM   |  A+A-


vcare

ವೀಕೇರ್

Posted By : Prasad SN
Source : Online MI

ಎಎಫ್‌ಟಿ, (ಆಕ್ಟಿವೇಟೆಡ್ ಫಾಲಿಕ್ಯುಲರ್ ಟ್ರಾನ್ಸ್‏ಪ್ಲಾಂಟೇಶನ್) https://www.vcaretrichology.com/treatment/activated-follicular-transplant ಎನ್ನುವುದು ವೀಕೇರ್‌ನ ವಿಶಿಷ್ಟ ಟ್ರೇಡ್‌ಮಾರ್ಕ್ ವಿಧಾನವಾಗಿದೆ. ಜಾಗತಿಕವಾಗಿ, ಎಫ್.ಯು.ಇ ಎಂಬುದು ಪ್ರಸಿದ್ಧ ಕೂದಲು ಕಸಿ ವಿಧಾನವಾಗಿದೆ. ಹೊಸ ಕೂದಲಿನ ಮರುಬೆಳವಣಿಗೆಯನ್ನು ಅಭಿವೃದ್ಧಿಪಡಿಸಲು ಕೂದಲಿನ ಫಾಲಿಕಲ್ ಗಳನ್ನು ಅಳವಡಿಸುವ ವಿಧಾನವನ್ನು ಸುಧಾರಿಸಿದ ನಂತರ ಕಸಿ ಮಾಡುವ ತಂತ್ರವನ್ನು ಸಂಶೋಧಕರು ಮತ್ತು ಯುಎಸ್ ಎಫ್ ಡಿಎ ಗಳ ಸಂಯೋಜಿತ ತಂಡವು ಅನುಮೋದಿಸಿದೆ. ಇದು ಎಫ್.ಯು.ಇ ಕೂದಲು ಕಸಿ ವಿಧಾನಕ್ಕಿಂತ ಉತ್ತಮವಾಗಿದೆ.

ಕೀಮೋಥೆರಪಿ ನಂತರ ಕೂದಲು ಉದುರುವಿಕೆಯಿಂದ ಬಳಲುತ್ತಿರುವ ವಿಶ್ವದಾದ್ಯಂತದ ಎಲ್ಲಾ ಕ್ಯಾನ್ಸರ್ ರೋಗಿಗಳಿಗೆ ಪ್ರಭಾವವನ್ನು ಸೃಷ್ಟಿಸುವ ವೀಕೇರ್, ಸುಧಾರಿತ ಹೇರ್ ಬಾಂಡಿಂಗ್ ತಂತ್ರವನ್ನು ಬೆಂಬಲಿಸುತ್ತದೆ, ಇದನ್ನು “ಕಾಸ್‏ಮೆಟಿಕ್ ಹೇರ್ ರೀಪ್ಲೇಸ್ಮೆಂಟ್” ಎಂದು ಹೇಳಲಾಗುತ್ತದೆ. ಈ ಸುಧಾರಿತ ಚಿಕಿತ್ಸಾ ವಿಧಾನವು ಕ್ಯಾನ್ಸರ್ ನಿಂದ ಗುಣಮುಖರಾದ ಅನೇಕರಿಗೆ ಮತ್ತು ತಲೆ ತುಂಬ ಕೂದಲನ್ನು ಹೊಂದುವ ಭರವಸೆಯನ್ನು ಕಳೆದುಕೊಂಡ ಜನರಿಗೆ ಸಹಾಯ ಮಾಡಿದೆ. ಬೋಳು ತಲೆಯ ಕೆಲವು ಹಂತಗಳಿಗೆ ಕೂದಲು ಕಸಿ ಸಹಾಯ ಮಾಡುತ್ತದೆ, ಆದರೆ ಕಾಸ್‏ಮೆಟಿಕ್ ಹೇರ್ ರೀಪ್ಲೇಸ್ಮೆಂಟ್ ಬೋಳು ತಲೆಯ ಮುಂದುವರಿದ ಹಂತಗಳಿಗೆ ಶಾಶ್ವತ ಪರಿಹಾರವಾಗಿದೆ.

https://www.vcaretrichology.com/treatment/cosmetic-hair-replacement

ಕಾಸ್‏ಮೆಟಿಕ್ ಮತ್ತು ಟ್ರೈಕಾಲಜಿಯಲ್ಲಿನ ನವೀನ ಚಿಕಿತ್ಸಾ ಪರಿಹಾರಗಳ ಪ್ರಯೋಜನಗಳ ಕುರಿತು ಮಾತನಾಡಿದ ವೀಕೇರ್ ಹೇರ್ ಅಂಡ್ ಸ್ಕಿನ್ ಕ್ಲಿನಿಕ್‌ನ ಪ್ರಮುಖ ಟ್ರೈಕೊಲಾಜಿಸ್ಟ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್.ಪ್ರಬಾ ರೆಡ್ಡಿ, “ಎಎಫ್‌ಟಿ (ಆಕ್ಟಿವೇಟೆಡ್ ಫಾಲಿಕ್ಯುಲರ್ ಟ್ರಾನ್ಸ್‏ಪ್ಲಾಂಟೇಶನ್), ಸಿಎಚ್‌ಆರ್ (ಕಾಸ್‏ಮೆಟಿಕ್ ಹೇರ್ ರೀಪ್ಲೇಸ್ಮೆಂಟ್) ಮತ್ತು ರೆಡ್ ವೆಲ್ವೆಟ್ ಅನ್ನು ಪರಿಣಾಮಕಾರಿಯಾಗಿ ಕೂದಲು ಮರುಬೆಳವಣಿಗೆ, ಚರ್ಮದ ಪುನರ್ಯೌವನಗೊಳಿಸುವಿಕೆ-ಸಂಬಂಧಿತ ಸಮಸ್ಯೆಗಳು, ಡಯಾಗ್ನಾಸಿಸ್ ಮತ್ತು ಚಿಕಿತ್ಸೆಯ ಆಯ್ಕೆಗಳನ್ನು ಬಯಸುವ ನಮ್ಮ ಗ್ರಾಹಕರಿಗೆ ಜೀವನವನ್ನು ಬದಲಾಯಿಸುವ ಅನುಭವಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ವೀಕೇರ್‌ನ ತಜ್ಞರು ನಿಮ್ಮ ಕೂದಲು ಮತ್ತು ಚರ್ಮದ ವಿವರವಾದ ವರದಿಯನ್ನು ಒದಗಿಸುತ್ತಾರೆ ಮತ್ತು ಅದನ್ನು ಆಧರಿಸಿ ಯಾವ ಚಿಕಿತ್ಸೆ ನೀಡಬಹುದು ಎಂಬುದನ್ನು ಸೂಚಿಸಲಾಗುತ್ತದೆ.”

ವೀಕೇರ್, 2001 ರಿಂದ ಪುರುಷರು ಮತ್ತು ಮಹಿಳೆಯರಿಗೆ ಕೂದಲಿನ ಪರಿಹಾರಗಳನ್ನು ಯಶಸ್ವಿಯಾಗಿ ಒದಗಿಸುತ್ತಿದೆ, ಅವರ ಹೆಚ್ಚು ತರಬೇತಿ ಪಡೆದ ಮತ್ತು ಅನುಭವಿ ವೈದ್ಯರು, ಟ್ರೈಕಾಲಜಿಸ್ಟ್ ಗಳು, ಕೂದಲು ಮತ್ತು ಚರ್ಮದ ತಜ್ಞರ ಪರಿಣತಿಗೆ ಧನ್ಯವಾದಗಳು.

ಪ್ರಮುಖ ಮತ್ತು ಸ್ವದೇಶದಲ್ಲಿ ಬೆಳೆದ ಭಾರತೀಯ ಬ್ರ್ಯಾಂಡ್, ವೀಕೇರ್ ಚರ್ಮ ಮತ್ತು ಕೂದಲ ರಕ್ಷಣೆಯ ವಿಭಾಗದಲ್ಲಿ ತನ್ನ ಗ್ರಾಹಕರಿಗೆ ಅಂತರರಾಷ್ಟ್ರೀಯ ಸೌಲಭ್ಯಗಳನ್ನು ತಂದಿದೆ. ಅವರ ಚಿಕಿತ್ಸಾಲಯಗಳು ದಕ್ಷಿಣ ಭಾರತದಾದ್ಯಂತ ಅನೇಕ ಪ್ರಮುಖ ಸ್ಥಳಗಳಲ್ಲಿವೆ.

ಅಪಾಯಿಂಟ್ಮೆಂಟ್ ಗಳಿಗಾಗಿ, ನಮ್ಮನ್ನು +91 7092525252 ರಲ್ಲಿ ಸಂಪರ್ಕಿಸಿ.

https://www.facebook.com/officialvcareclinics/posts/3511255458912920

ಪ್ರಬಾ ರೆಡ್ಡಿ ಬೆಳೆದು ಬಂದ ದಾರಿ

Praba Reddy
ಪ್ರಬಾ ರೆಡ್ಡಿ

ವೀಕೇರ್ ಎನ್ನುವುದು ತನ್ನ ಇಡೀ ಜೀವನವನ್ನು ತನ್ನ ಉತ್ಸಾಹಕ್ಕಾಗಿ ಮುಡಿಪಾಗಿಟ್ಟ ಒಬ್ಬ ಮಹಿಳೆಯ ದೃಷ್ಟಿಯ ಕಥೆ. ಮಿಸ್. ಕ್ಯಾರೋಲಿನ್ ಪ್ರಬಾ ಅವರು ಟ್ರೈಕಾಲಜಿ ಕ್ಷೇತ್ರದಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ ಮತ್ತು ಇಂದು ಭಾರತದಲ್ಲಿ ಕ್ಷೇಮ ಮತ್ತು ಆರೋಗ್ಯ ಉದ್ಯಮ ಕ್ಷೇತ್ರದಲ್ಲಿ ಅತ್ಯಂತ ಸ್ಪೂರ್ತಿದಾಯಕ ಮಹಿಳೆಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. 1991 ರಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದ ನಂತರ, ಶ್ರೀಮತಿ ಪ್ರಬಾ ಅವರು ವೀಕೇರ್ ಪ್ರಾರಂಭಿಸುವ ಮೊದಲು 7 ವರ್ಷಗಳ ಕಾಲ ಶಿಕ್ಷಕರಾಗಿ ಕೆಲಸ ಮಾಡಿದರು. ನಂತರ ಅವರು ದಕ್ಷಿಣ ಭಾರತದ ಮೊದಲ ಪ್ರಮಾಣೀಕೃತ ಟ್ರೈಕೊಲಾಜಿಸ್ಟ್ ಆಗಬೇಕೆಂಬ ಗುರಿಯನ್ನು ಸಾಧಿಸಿದರು. ವಿಶೇಷವೆಂದರೆ, ಆ ಸಮಯದಲ್ಲಿ ಅವರು ಭಾರತದ 6 ನೇ ಪ್ರಮಾಣೀಕೃತ ಟ್ರೈಕೊಲಾಜಿಸ್ಟ್ ಆಗಿದ್ದರು. ಇಂದು ಅವರು ಕಂಪನಿಯ ಅಧ್ಯಕ್ಷರಾಗಿ ಮತ್ತು ಎಂಡಿ ಆಗಿ ವೀಕೇರ್ ಅನ್ನು ಮುನ್ನಡೆಸುತ್ತಿದ್ದಾರೆ.

https://www.youtube.com/watch?v=h0VDSb6IBRc

ಅಲ್ಲದೆ, ಅವರು ಅರೋಮಾಥೆರಪಿ, ಹರ್ಬಲ್ ಕಾಸ್‏ಮೆಟಾಲಜಿ, ಮೇಕಪ್, ಡಾರ್ನ್ ಥೆರಪಿ, ಪೀಲ್ಸ್ ಚಿಕಿತ್ಸೆ, ಹಾಲಿವುಡ್ ಸಿನೆಮಾ ಮೇಕಪ್ ಇತ್ಯಾದಿಗಳಲ್ಲಿ ಹಲವಾರು ಅಲ್ಪಾವಧಿಯ ತರಬೇತಿ ಕೋರ್ಸ್‌ಗಳನ್ನು ಮಾಡಿಕೊಂಡಿದ್ದಾರೆ.

ಅನೇಕ ಕೂದಲು ಮತ್ತು ಚರ್ಮದ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸಲು ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗಳು ಸಹಾಯ ಮಾಡುತ್ತವೆ ಎಂದು ಮಿಸ್ ಪ್ರಬಾ ಬಲವಾಗಿ ನಂಬಿದ್ದಾರೆ. ಈ ನಂಬಿಕೆಯನ್ನು ಗಮನದಲ್ಲಿಟ್ಟುಕೊಂಡು, ತಮ್ಮ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆಗೆ ಒಳಗಾದ ತನ್ನ ಗ್ರಾಹಕರಿಗೆ ವೀಕೇರ್ ಜೀವಮಾನದ ನಿರ್ವಹಣೆ ಪರಿಹಾರಗಳನ್ನು ಸಹ ನೀಡುತ್ತದೆ. ಈ ಜೀವಮಾನದ  ಪ್ರೋಗ್ರಾಂಗಳು ಅನೇಕ ರಿಯಾಯಿತಿಗಳನ್ನು ನೀಡುತ್ತವೆ ಮತ್ತು ಸಂಭವನೀಯ ಸಮಸ್ಯೆಗಳನ್ನು ಪ್ರಾರಂಭದಲ್ಲಿಯೇ ತಡೆಗಟ್ಟಲು ಸಹಾಯ ಮಾಡುತ್ತವೆ.

ಕಳೆದ 10 ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಸಂಸ್ಥೆಯಾದ ಪ್ರಬಾ ರೆಡ್ಡಿ ಅವರ ಹೇರ್ ಅಂಡ್ ಬ್ಯೂಟಿ ಅಕಾಡೆಮಿ (ವಿಕೇರ್‌ನ ಗ್ಲೋಬಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್) ಮೂಲಕ ಸ್ವಾಸ್ಥ್ಯ ಮತ್ತು ಸೌಂದರ್ಯಕ್ಕೆ ಸಂಬಂಧಿಸಿದಂತೆ 25,000 ಕ್ಕೂ ಹೆಚ್ಚು ಬ್ಯುಟಿಸಿಯನ್ ಗಳಿಗಾಗಿ ನೂರಾರು ತರಬೇತಿ ಕಾರ್ಯಕ್ರಮಗಳು, ಕಾರ್ಯಾಗಾರಗಳು ಮತ್ತು ಸೆಮಿನಾರ್‌ಗಳನ್ನು ನಡೆಸುವಲ್ಲಿ ಅವರು ನಿರತರಾಗಿದ್ದಾರೆ.

ಶ್ರೀಮತಿ ಇ. ಕ್ಯಾರೊಲಿನ್ ಪ್ರಬಾ ಅವರು ಮಹತ್ವಾಕಾಂಕ್ಷಿ ಉದ್ಯಮಿ, ಅವರು ನಿರಂತರ ಸುಧಾರಣೆಯ ಮೂಲಕ ಬೆಳವಣಿಗೆಯಲ್ಲಿ ದೃಢವಾದ ನಂಬಿಕೆಯನ್ನು ಹೊಂದಿದ್ದಾರೆ. ಇದು ವ್ಯಾಪಕವಾದ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಗುಣಮಟ್ಟದ ವ್ಯವಸ್ಥೆಗಳ ಅನುಷ್ಠಾನಕ್ಕೆ ಹೆಚ್ಚು ಗಮನ ಹರಿಸುವಂತೆ ಮಾಡಿದೆ. ಗುಣಮಟ್ಟ ಮತ್ತು ಫಲಿತಾಂಶ ಆಧಾರಿತ ಆರೋಗ್ಯ ಮತ್ತು ಕ್ಷೇಮ ಉತ್ಪನ್ನಗಳು ಮತ್ತು ಸೇವೆಗಳನ್ನು ಸಮಾಜಕ್ಕೆ ತಲುಪಿಸುವ ಗುರಿಯನ್ನು ಅವರು ಹೊಂದಿದ್ದಾರೆ.

https://www.vcareproducts.com/blogs/news/the-rank-of-guinness-world-record-beauty-skincare-in-consumers-market

ವಿಕೇರ್ ಬಗ್ಗೆ

ವೀಕೇರ್ ಎಂಬುದು ಭಾರತದಲ್ಲಿ ವಾಸಿಸುವ ಜನರಿಗೆ ಪ್ರಸಿದ್ಧ ಬ್ರಾಂಡ್ ಹೆಸರು. ಕೂದಲು ಮತ್ತು ಚರ್ಮ ಸಂಬಂಧಿತ ಸಮಸ್ಯೆಗಳನ್ನು ಗುಣಪಡಿಸಲು ನವೀನ ತಂತ್ರಗಳನ್ನು ಅಳವಡಿಸುವುದರ ಮೂಲಕ ಮತ್ತು ಅತ್ಯಂತ ಪರಿಣಾಮಕಾರಿ ಮತ್ತು ಉಪಯುಕ್ತವಾದ ಉತ್ತಮ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಈ ಬ್ರ್ಯಾಂಡ್ ಜನರಿಂದ ವಿಶ್ವಾಸವನ್ನು ಗಳಿಸಿದೆ.

https://vcareskinclinic.com/

ವೀಕೇರ್ ಸಮೂಹವು 2004 ರಲ್ಲಿ "ಸೌಂದರ್ಯ ಮತ್ತು ಸೌಂದರ್ಯವರ್ಧಕ" ಕ್ಷೇತ್ರದಲ್ಲಿ ತನ್ನ ಕಾರ್ಯಾರಂಭ ಮಾಡಿತು ಮತ್ತು ಇಂದು ಇದು ತ್ವಚೆ ಆರೈಕೆ ಚಿಕಿತ್ಸೆಗಳು, ಕೂದಲ ರಕ್ಷಣೆಯ ಚಿಕಿತ್ಸೆಗಳು, ಸುಧಾರಿತ ಕೂದಲು ಕಸಿ, ಆರೋಗ್ಯ ಮತ್ತು ಕ್ಷೇಮ ಶಿಕ್ಷಣ, ಸಂಶೋಧನೆ ಮತ್ತು ಅಭಿವೃದ್ಧಿ, ಸುಧಾರಿತ ಡಯಾಗ್ನಾಸ್ಟಿಕ್ಸ್, ಉತ್ಪಾದನೆ, ವಿತರಣೆ, ರೀಟೇಲಿಂಗ್, ಟೆಲಿಮಾರ್ಕೆಟಿಂಗ್, ಇತ್ಯಾದಿ ಯಂತಹ ಹಲವಾರು ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಸಾರ್ವಜನಿಕರ ಅಗತ್ಯತೆಗಳು ಮತ್ತು ಬೇಡಿಕೆಗಳನ್ನು ಕೇಂದ್ರೀಕರಿಸುವ ಮತ್ತು ಪರಿಗಣಿಸುವುದರಿಂದ ಅದರ ಪ್ರತಿಯೊಂದು ಉದ್ಯಮಗಳು ಯಶಸ್ವಿಯಾಗಿವೆ.

ನಮ್ಮ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ಅಧಿಕೃತ ವೆಬ್‌ಸೈಟ್: www.vcaretrichology.com ಗೆ ಭೇಟಿ ನೀಡಿ

ಅಪಾಯಿಂಟ್ಮೆಂಟ್ ಗಳಿಗಾಗಿ, ನಮ್ಮನ್ನು +91 7092525252 ರಲ್ಲಿ ಸಂಪರ್ಕಿಸಿ.

ಡಿಸ್ಕ್ಲೇಮರ್: ಈ ಲೇಖನಕ್ಕೆ ವಿಷಯವನ್ನು ವೀಕೇರ್ ಕೊಟ್ಟಿರುತ್ತದೆ. ಟಿಎನ್‌ಐಇ ಗ್ರೂಪ್ ನ ಯಾವುದೇ ಪತ್ರಕರ್ತ ಈ ಲೇಖನದ ವಿಷಯದ ಬರಹದಲ್ಲಿ/ರಚನೆಯಲ್ಲಿ ಭಾಗಿಯಾಗಿಲ್ಲ.


Stay up to date on all the latest ವಾಣಿಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp