ರಾಜ್ಯಗಳ ಜಿಎಸ್ಟಿ ಕೊರತೆ ಸರಿತೂಗಿಸಲು 1.1 ಲಕ್ಷ ಕೋಟಿ ರೂ. ಸಾಲ ಪಡೆಯಲು ಕೇಂದ್ರ ಸರ್ಕಾರ ಮುಂದು!

ರಾಜ್ಯಗಳ ಜಿಎಸ್ಟಿ ಆದಾಯದ ಕೊರತೆಯನ್ನು ನಿವಾರಿಸಲು ವಿಶೇಷ ಅವಕಾಶದಡಿ 1.1 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ನವದೆಹಲಿ: ರಾಜ್ಯಗಳ ಜಿಎಸ್ಟಿ ಆದಾಯದ ಕೊರತೆಯನ್ನು ನಿವಾರಿಸಲು ವಿಶೇಷ ಅವಕಾಶದಡಿ 1.1 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಬಗ್ಗೆ ಹೇಳಿಕೆ ಹೊರಡಿಸಿರುವ ಕೇಂದ್ರ ಹಣಕಾಸು ಸಚಿವಾಲಯ, ಜಿಎಸ್ಟಿ ಅನುದಾನ ಸೆಸ್ ಬಿಡುಗಡೆಯಡಿ ಸಾಲದ ರೂರದಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ. ಅಂದರೆ ಕೇಂದ್ರ ಸರ್ಕಾರ ಸಾಲ ಪಡೆದ ನಂತರ ಅದು ರಾಜ್ಯದ ಅನುದಾನದಲ್ಲಿ ಕಂಡುಬರುತ್ತದೆ.

ಆದರೆ ಕೆಲವು ರಾಜ್ಯಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ತೆಲಂಗಾಣ ಹಣಕಾಸು ಸಚಿವ ಟಿ ಹರೀಶ್ ರಾವ್, ಇದನ್ನು ಒಪ್ಪಲು ಸಾಧ್ಯವಿಲ್ಲ. ಸಾಲದ ಮೊತ್ತ ರಾಜ್ಯ ಸರ್ಕಾರದ ಖಜಾನೆಯಲ್ಲಿ ತೋರಿಸಲ್ಪಡುವುದರಿಂದ ರಾಜ್ಯ ಸರ್ಕಾರಗಳ ಮೇಲೆ ಹೊರೆಯಾಗುತ್ತದೆ ಎಂದಿದ್ದಾರೆ. ಆದರೆ ಕೇರಳ ಹಣಕಾಸು ಸಚಿವರು ಇದನ್ನು ಒಪ್ಪಿದ್ದಾರೆ. 2023ಕ್ಕೆ ಕೇಂದ್ರ ಸರ್ಕಾರ ಎಷ್ಟು ಜಿಎಸ್ಟಿ ಪರಿಹಾರ ನೀಡುತ್ತದೆ, ಈ ಬಗ್ಗೆ ಒಮ್ಮತಕ್ಕೆ ಬರಬೇಕು ಎಂದು ಕೇರಳ ಹಣಕಾಸು ಸಚಿವ ಥಾಮಸ್ ಇಸ್ಸಾಕ್ ಹೇಳಿದ್ದಾರೆ.

ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಕೂಡ ಇದನ್ನು ಒಪ್ಪಿದ್ದು, ಕೇಂದ್ರ ಸರ್ಕಾರ 1.1 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯಲು ಸಿದ್ದವಿದ್ದು, ರಾಜ್ಯಗಳಿಗೆ ಒಂದಾದ ಬಳಿಕ ಒಂದರಂತೆ ಸಾಲಗಳನ್ನು ನೀಡಿದರೆ ನಾನು ಇದನ್ನು ಒಪ್ಪುತ್ತೇನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com