ಈರುಳ್ಳಿ ದಾಸ್ತಾನು ಸಂಗ್ರಹ ಮಿತಿ ಡಿ.31 ವರೆಗೆ ವಿಸ್ತರಣೆ 

ಕೇಂದ್ರ ಸರ್ಕಾರ ಈರುಳ್ಳಿ ದಾಸ್ತಾನು ಸಂಗ್ರಹ ಮಿತಿಯನ್ನು ಡಿ.31 ವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. 
ಈರುಳ್ಳಿ
ಈರುಳ್ಳಿ

ನವದೆಹಲಿ: ಕೇಂದ್ರ ಸರ್ಕಾರ ಈರುಳ್ಳಿ ದಾಸ್ತಾನು ಸಂಗ್ರಹ ಮಿತಿಯನ್ನು ಡಿ.31 ವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. 

ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳು ಅನುಕ್ರಮವಾಗಿ 2 ಹಾಗೂ 25 ಟನ್ ಗಳ ವರೆಗೆ ಈರುಳ್ಳಿಯನ್ನು ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ. ಈರುಳ್ಳಿ ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. 
 
ಈರುಳ್ಳಿ ಬೆಳೆ ನಾಶದಿಂದ ಕಳೆದ ಕೆಲವು ವಾರಗಳಿಂದ ಈರುಳ್ಳಿ ಬೆಲೆ ಕೆ.ಜಿಗೆ 75 ರೂಪಾಯಿಯಷ್ಟಾಗಿತ್ತು. ಸರ್ಕಾರದ ಪ್ರಕಾರ 15 ಲಕ್ಷ ಟನ್ ಗಳಷ್ಟು ಈರುಳ್ಳಿ ರಫ್ತು ಮಾಡಿರುವುದರಿಂದ ಈರುಳ್ಳಿ ಲಭ್ಯತೆಗೆ ಕೊರತೆ ಉಂಟಾಗಿದೆ. 

ಸೆಪ್ಟೆಂಬರ್ ತಿಂಗಳಿನಿಂದ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆ ಕೊರತೆ ಉಂಟಾಗಿದ್ದು, ಕೃತಕ ಬೆಲೆ ಏರಿಕೆ ಮಾಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com