'ಆತ್ಮನಿರ್ಭರ ಭಾರತ' ಬೆಂಗಳೂರಿನ ಬೆಮೆಲ್‍ಗೆ ರಕ್ಷಣಾ ಸಚಿವಾಲಯದಿಂದ 842 ಕೋಟಿ ರೂ. ಮೊತ್ತದ ಗುತ್ತಿಗೆ

ಪಿನಾಕ ಯೋಜನೆಗಾಗಿ 330 ಹೈ ಮೊಬಿಲಿಟಿ ವಾಹನಗಳನ್ನು ಪೂರೈಸಲು ಪ್ರಮುಖ ರಕ್ಷಣಾ ವಲಯದ ಸಾಧನ ತಯಾರಿಕಾ ಸಂಸ್ಥೆ ಬಿಇಎಂಎಲ್‍ ಗೆ ರಕ್ಷಣಾ ಸಚಿವಾಲಯದಿಂದ 842 ಕೋಟಿ ರೂ. ಮೊತ್ತದ ಗುತ್ತಿಗೆ ದೊರೆತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಪಿನಾಕ ಯೋಜನೆಗಾಗಿ 330 ಹೈ ಮೊಬಿಲಿಟಿ ವಾಹನಗಳನ್ನು ಪೂರೈಸಲು ಪ್ರಮುಖ ರಕ್ಷಣಾ ವಲಯದ ಸಾಧನ ತಯಾರಿಕಾ ಸಂಸ್ಥೆ ಬಿಇಎಂಎಲ್‍ ಗೆ ರಕ್ಷಣಾ ಸಚಿವಾಲಯದಿಂದ 842 ಕೋಟಿ ರೂ. ಮೊತ್ತದ ಗುತ್ತಿಗೆ ದೊರೆತಿದೆ.

ಪಿನಾಕ, ಬಹು-ಬ್ಯಾರೆಲ್ ರಾಕೆಟ್ ಉಡಾವಣಾ ವಾಹಕವಾಗಿದ್ದು, ಇದನ್ನು ಭಾರತೀಯ ಸೇನೆಗಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ.ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯದ ರಕ್ಷಣಾ ಉದ್ಯಮಗಳನ್ನೊಳಗೊಂಡಂತೆ ಭಾರತದಲ್ಲೇ ಪಿನಾಕವನ್ನು ನಿರ್ಮಿಸಲಾಗುತ್ತಿದೆ. 

ಬಹು-ಬ್ಯಾರೆಲ್ ಉಡಾವಣಾ ವ್ಯವಸ್ಥೆಯನ್ನು ತುಂಬಾ ಗಟ್ಟಿಮುಟ್ಟಾದ ಬಿಇಎಂಎಲ್ ಟ್ರಕ್‌ನಲ್ಲಿ ಇರಿಸಲಾಗಿದೆ. ಈ ಟ್ರಕ್‍, ರಸ್ತೆಯಲ್ಲದೆ ಎಂತಹುದೇ ದುರ್ಗಮ ಜಾಗಗಳಲ್ಲೂ ಚಲಿಸುವುದರಿಂದ ಪ್ರಶಂಸೆಗೆ ಪಾತ್ರವಾಗಿದೆ. ಯುದ್ಧಭೂಮಿಯಲ್ಲಿ ಭಾರತೀಯ ಸೇನೆಗೆ ತುಂಬಾ ನೆರವಾಗುತ್ತಿದೆ.

ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ಉತ್ತಮ ವೈಶಿಷ್ಟ್ಯಗಳೊಂದಿಗೆ ಹೈ ಮೊಬಿಲಿಟಿ ವಾಹನಗಳ ತಯಾರಿಕೆಯಲ್ಲಿ ತೊಡಗಿರುವ ಬಿಇಎಂಎಲ್‌ಗೆ ಹೊಸ ಗುತ್ತಿದೆ ದೊಡ್ಡ ಉತ್ತೇಜನವಾಗಿದೆ. ಈ ಮೂಲಕ 'ಆತ್ಮನಿರ್ಭರ್ ಭಾರತ್' ಅಡಿಯಲ್ಲಿ ಬಿಇಎಂಎಲ್‌ನ ಪ್ರಯತ್ನಗಳನ್ನು ಬಿಂಬಿಸಲಾಗುತ್ತಿದೆ. ಹೈ ಮೊಬಿಲಿಟಿ ವಾಹನಗಳನ್ನು ಬಿಇಎಂಎಲ್ ತನ್ನ ಕೇರಳದ ಪಾಲಕ್ಕಾಡ್ ಸ್ಥಾವರದಲ್ಲಿ ಉತ್ಪಾದಿಸಲಿದ್ದು, 3 ವರ್ಷಗಳ ಅವಧಿಯಲ್ಲಿ ಎಲ್ಲ 330 ವಾಹನಗಳನ್ನು ರಕ್ಷಣಾ ಸಚಿವಾಲಯಕ್ಕೆ ಹಸ್ತಾಂತರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com