ನನ್ನ ಮಗನ ಲಿವರ್ ಫೇಲ್ ಆಗಿದೆ, ಅವನನ್ನು ಉಳಿಸಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ, ಸಹಾಯ ಮಾಡಲು ದಯವಿಟ್ಟು ದಾನ ಮಾಡಿ

ರಾಸಾತಿಯ 15 ವರ್ಷದ ಮಗ ಗುಣ, ದೀರ್ಘಕಾಲದಿಂದ ಕೊಳೆತ ಲಿವರ್ ಕಾಯಿಲೆಯಿಂದ ಬಳಲುತ್ತಿರುವುದಾಗಿ ಗೊತ್ತಾದಾಗಿನಿಂದ, ಆಕೆಯ ಜೀವನವು ದುಃಖದಿಂದ ತುಂಬಿದೆ.

Published: 22nd September 2020 03:09 PM  |   Last Updated: 23rd September 2020 08:07 PM   |  A+A-


Help Guna

ಗುಣಾ

Posted By : Prasad SN
Source : Online Desk

ಡಾಕ್ಟರ್, ನನ್ನ ಲಿವರ್ ಕೊಡಲು ನಾನು ಸಿದ್ಧ. ದಯವಿಟ್ಟು ಏನಾದರೂ ಮಾಡಿ ಆದರೆ ನನ್ನ ಮಗನನ್ನು ಉಳಿಸಿಕೊಡಿ. ಡಾಕ್ಟರ್, ದಯವಿಟ್ಟು ನನ್ನ ಮಗನನ್ನು ಉಳಿಸಿ. ವೈದ್ಯರು ತಮಗೆ ಸಾಧ್ಯವಾದುದ್ದೆಲ್ಲವನ್ನು ಮಾಡಿ ತನ್ನ ಮಗನನ್ನು ಉಳಿಸಬೇಕೆಂದು ಬೇಡಿಕೊಳ್ಳುತ್ತಾ, ರಾಸಾತಿ ಅಳುತ್ತಾಳೆ.

ರಾಸಾತಿಯ 15 ವರ್ಷದ ಮಗ ಗುಣ, ದೀರ್ಘಕಾಲದಿಂದ ಕೊಳೆತ ಲಿವರ್ ಕಾಯಿಲೆಯಿಂದ ಬಳಲುತ್ತಿರುವುದಾಗಿ ಗೊತ್ತಾದಾಗಿನಿಂದ, ಆಕೆಯ ಜೀವನವು ದುಃಖದಿಂದ ತುಂಬಿದೆ.

ಗುಣಾನ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಮತ್ತು ಮೂತ್ರ ವಿಸರ್ಜಿಸುವಾಗ ತುಂಬಾ ಉರಿಯುವುದು ಪ್ರಾರಂಭವಾದಾಗ ಜೂನ್ ತಿಂಗಳಲ್ಲಿ ಈ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಯಿತು.

ದಿನಗಳು ಕಳೆದಂತೆ ಉರಿಯುವ ಅನುಭವ ಹೆಚ್ಚಾಯಿತು. ಅವನು ತಾನು ತಿಂದದ್ದೆಲ್ಲವನ್ನು ವಾಂತಿ ಮಾಡಿಕೊಳ್ಳಲು ಪ್ರಾರಂಭಿಸಿದನು.

ಮಗನ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಮತ್ತು ಅವನನ್ನು ನೋಡಿಕೊಳ್ಳುತ್ತಿದ್ದ ರಾಸಾತಿ ಹೆಚ್ಚು ಆತಂಕಗೊಂಡಳು. ಹೆಚ್ಚು ತಡಮಾಡದೆ, ಅವಳು ಗುಣಾನನ್ನು ಸ್ಥಳೀಯ ಚಿಕಿತ್ಸಾಲಯಕ್ಕೆ ಕರೆದೊಯ್ದಳು, ಅದರಲ್ಲಿ ಅನೇಕ ಪರೀಕ್ಷೆಗಳನ್ನು ನಡೆಸಿದ ನಂತರ, ಗುಣಾ ತೀವ್ರವಾದ ಜಾಂಡೀಸ್ ರೋಗದಿಂದ ಬಳಲುತ್ತಿದ್ದಾನೆ ಎಂದು ಎಂದು ತಿಳಿದುಬಂದಿತು.

ಹೆಚ್ಚಿನ ಮನುಷ್ಯರಲ್ಲಿ ಕಂಡುಬರುವ ಸರಾಸರಿ 1% ಗಿಂತ, ಗುಣಾನ ಬಿಲಿರುಬಿನ್ ಮಟ್ಟವು 8% ರಷ್ಟಿದೆ ಎಂದು ಪರೀಕ್ಷೆಗಳಿಂದ ತಿಳಿದುಬಂತು.

ಆ ಪರೀಕ್ಷಾ ವರದಿಯನ್ನು ನೋಡಿದ ವೈದ್ಯರೇ ಸ್ವತಃ ಆಶ್ಚರ್ಯಗೊಂಡಿದ್ದರು ಮತ್ತು ಗುಣಾನ ಬಿಲಿರುಬಿನ್ ಮಟ್ಟವು ಆ ಮಟ್ಟಕ್ಕೆ ಹೇಗೆ ಏರಿಕೆಯಾಗಬಹುದೆಂಬ ಬಗ್ಗೆ ಏನೂ ತಿಳಿದಿರಲಿಲ್ಲ.

ವೈದ್ಯರು ನೀಡಿದ ಯಾವುದೇ ಷಧಿಗಳು ಗುಣಾನ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ರಾಸಾತಿ ಮತ್ತು ಅವರ ಪತಿ ಕಣ್ಣನ್, ತಮ್ಮ ಮಗನ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದಂತೆ ಪ್ರತಿದಿನ ಹೆಚ್ಚೆಚ್ಚು ಆತಂಕಿತರಾಗುತ್ತಿದ್ದರು.

ಉಬ್ಬಿದ ಹೊಟ್ಟೆಯಿಂದ ಹಿಡಿದು ಊದಿಕೊಂಡ ಕಾಲುಗಳು ಮತ್ತು ತೀವ್ರವಾಗಿ ದೇಹದ ತೂಕ ಕಳೆದುಕೊಳ್ಳುವರೆಗೆ, ಗುಣಾನ ಸಂಕಟಕ್ಕೆ ಕೊನೆ ಇಲ್ಲದಂತಾಯಿತು. ತನ್ನ ಮಗ ಈ ರೀತಿ ನರಳುತ್ತಿರುವುದನ್ನು ರಾಸಾತಿಗೆ ನೋಡಲಾಗುತ್ತಿಲ್ಲ.

4 ವಿವಿಧ ಆಸ್ಪತ್ರೆಗಳಲ್ಲಿ ಸಮಾಲೋಚಿಸಿದ ನಂತರ ಮತ್ತು ಮುಂದಿನ 2 ತಿಂಗಳುಗಳ ಕಾಲ ಔಷಧಿಗಳನ್ನು ಪಡೆದ ನಂತರ, ಗುಣಾ ಅಂತಿಮವಾಗಿ ಕೊಯಮತ್ತೂರಿನ ಜಿಇಎಂ ಆಸ್ಪತ್ರೆಗೆ ಬಂದರು. ಇಲ್ಲಿ ನಡೆಸಿದ ಪರೀಕ್ಷೆಗಳಿಂದ, ಅವನು ಕೆಲ ಕಾಲದಿಂದ ವಿಲ್ಸನ್ ರೋಗದ ಕಾರಣ ದೀರ್ಘಕಾಲದಿಂದ ಕೊಳೆತ ಲಿವರ್ ಕಾಯಿಲೆಯಿಂದ ಬಳಲುತ್ತಿರುವುದಾಗಿ ತಿಳಿದುಬಂತು.

ಇದನ್ನು ಕೇಳಿದ ರಾಸಾತಿಯ ಹೃದಯ ಒಡೆದುಹೋಯಿತು. ತನ್ನ ಮಗನು ಇಂತಹ ದುರ್ವಿಧಿಯನ್ನು  ಅನುಭವಿಸಬೇಕಾಗುತ್ತದೆ ಎಂದು ಅವಳು ಎಂದೂ ಊಹಿಸಿರಲಿಲ್ಲ.

ಆದರೆ ಇದಕ್ಕೂ ದೊಡ್ಡ ಆಘಾತ ಇನ್ನೂ ಎದುರಿಸಬೇಕಿದೆ.

ತುರ್ತಾಗಿ ಲಿವರ್ ಕಸಿ ಶಸ್ತ್ರಚಿಕಿತ್ಸೆ ಮಾತ್ರ ಗುಣಾನ ಜೀವವನ್ನು ಉಳಿಸಬಲ್ಲದು ಎಂದು ವೈದ್ಯರು ಅವಳಿಗೆ ಮತ್ತು ಕಣ್ಣನ್‌ಗೆ ಹೇಳಿದಾಗ, ಅವರು ಅಂತಿಮವಾಗಿ ಈ ದುಃಖದ ಮೋಡಗಳಲ್ಲಿ ಭರವಸೆಯ ಕಿರಣವನ್ನು ಕಂಡರು.

ಆದರೆ ಚಿಕಿತ್ಸೆಯ ವೆಚ್ಚ 30 ಲಕ್ಷ ರೂಪಾಯಿಗಳಾಗುತ್ತದೆ ಎಂದು ತಿಳಿದಾಗ ಆ ಭರವಸೆಯ ಕಿರಣ ಸಹ ಮರೆಯಾದಂತೆ ಅನಿಸಿತು.

ನಾನು ಕೇವಲ ಗೃಹಿಣಿಯಾಗಿದ್ದು ನನ್ನ ಮಕ್ಕಳನ್ನು ಅವರಿಗೆ ಏನೂ ಆಗದಂತೆ ನೋಡಿಕೊಳ್ಳುವುದಷ್ಟೇ ನನಗೆ ತಿಳಿದಿದೆ. ನನ್ನ ಪತಿ ಬಡಗಿ, ಅವರು ಕೇವಲ 4,500 ರೂ. ಸಂಪಾದಿಸುತ್ತಾರೆ. ನನ್ನ ಮಗನ ಚಿಕಿತ್ಸೆಗೆ ಈ ಮೊತ್ತವು ಏನೂ ಸಾಕಾಗುವುದಿಲ್ಲ. ದಯವಿಟ್ಟು ನಮಗೆ ಸಹಾಯ ಮಾಡಿ. ಅಂತಹ ಬೃಹತ್ ಮೊತ್ತವನ್ನು ತಾನು ಹೇಗೆ ಹೊಂದಿಸಬಹುದು ಎಂದು ಯೋಚಿಸುತ್ತಾ ಅಳುತ್ತಾ ರಾಸಾತಿ ಬೇಡುತ್ತಿದ್ದಳು.

ಇಲ್ಲಿಯವರೆಗೆ ಕಣ್ಣನ್ ಮತ್ತು ರಾಸಾತಿ ಅನೇಕ ಸಾಲಗಳನ್ನು ತೆಗೆದುಕೊಂಡು ತಮ್ಮ ಬಳಿಯಿದ್ದ ಪ್ರತಿಯೊಂದು ಅಮೂಲ್ಯ ವಸ್ತುಗಳನ್ನು ಮಾರಿದ್ದಾರೆ. ಆದರೆ ಅವರು ಸಂಗ್ರಹಿಸಿದ ಮೊತ್ತವು 30 ಲಕ್ಷ ರೂ. ತಲುಪಿಲ್ಲ.

ಈಗ ನೀವು ಈ ಕುಟುಂಬದ ಏಕೈಕ ಭರವಸೆ. ಗುಣಾ ಅವರ ಲಿವರ್ ಕಸಿ ಶಸ್ತ್ರಚಿಕಿತ್ಸೆಗೆ ಕೃಪೆಯಿಂದ ದಾನ ಮಾಡಿ ಮತ್ತು ಇತರ ಹದಿಹರೆಯದವರಂತೆ ಅವನೂ ಸಾಮಾನ್ಯ ಜೀವನವನ್ನು ನಡೆಸಲು ಸಹಾಯ ಮಾಡಿ.
 

ಡಿಸ್ಕ್ಲೇಮರ್: "ಈ ಲೇಖನಕ್ಕೆ ವಿಷಯವನ್ನು ಕೆಟ್ಟೊ ಕ್ರೌಡ್‌ಫಂಡಿಂಗ್ ವೆಬ್‌ಸೈಟ್ ಕೊಟ್ಟಿರುತ್ತದೆ. ಟಿಎನ್‌ಐಇ ಗ್ರೂಪ್ ನ ಯಾವುದೇ ಪತ್ರಕರ್ತ ಈ ಲೇಖನದ ವಿಷಯದ ಬರಹದಲ್ಲಿ/ರಚನೆಯಲ್ಲಿ ಭಾಗಿಯಾಗಿಲ್ಲ."

Stay up to date on all the latest ವಾಣಿಜ್ಯ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp