ಹಸಿರು ಇಂಧನ ವ್ಯವಹಾರದಲ್ಲಿ 75 ಸಾವಿರ ಕೋಟಿ ರೂ. ವೆಚ್ಚಕ್ಕೆ ಮುಂದಾದ ರಿಲಯನ್ಸ್!

ಜಿಯೋದೊಂದಿಗೆ ಟೆಲಿಕಾಂ ಕ್ಷೇತ್ರದಲ್ಲಿ ಯಶಸ್ವಿಯಾದ ನಂತರ ಇದೀಗ ರಿಲಯನ್ಸ್ ಹೊಸ ಶುದ್ಧ ಮತ್ತು ಹಸಿರು ಇಂಧನದಲ್ಲಿ ವ್ಯವಹಾರವನ್ನು ಆರಂಭಿಸುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ.
ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ
Updated on

ಚೆನ್ನೈ: ಜಿಯೋದೊಂದಿಗೆ ಟೆಲಿಕಾಂ ಕ್ಷೇತ್ರದಲ್ಲಿ ಯಶಸ್ವಿಯಾದ ನಂತರ ಇದೀಗ ರಿಲಯನ್ಸ್ ಹೊಸ ಶುದ್ಧ ಮತ್ತು ಹಸಿರು ಇಂಧನದಲ್ಲಿ ವ್ಯವಹಾರವನ್ನು ಆರಂಭಿಸುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ.

ಕಂಪನಿಯ ಷೇರುದಾರರ 44ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಮುಕೇಶ್ ಅಂಬಾನಿ, ಒಮ್ಮೆ ತನ್ನ ಬಹುತೇಕ ವ್ಯವಹಾರವನ್ನು ಪೆಟ್ರೋಲಿಯಂ ಕ್ಷೇತ್ರದಿಂದ ಪಡೆದುಕೊಳ್ಳುತ್ತಿದ್ದ ಕಂಪನಿ, ಹಸಿರು ಇಂಧನ ವ್ಯವಹಾರದಲ್ಲಿ ತೊಡಗಲು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದರು.

ಕಳೆದ ವರ್ಷ ಅಮೆರಿಕದ ದೈತ್ಯ ಕಂಪನಿ ಗೂಗಲ್ ಸಹಭಾಗಿತ್ವದೊಂದಿಗೆ ಕೈಗೆಟುಕುವ ದರದಲ್ಲಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುವುದಾಗಿ ರಿಲಯನ್ಸ್ ಘೋಷಿಸಿತ್ತು, ಇದೀಗ, ವಿಶೇಷ ವಿನ್ಯಾಸದ ಆಂಡ್ರ್ಯಾಡ್ ಆಪರೇಟಿಂಗ್ ಸಿಸ್ಟಮ್ ನೊಂದಿಗೆ ಕಾರ್ಯನಿರ್ವಹಿಸುವ 5ಜಿ ಜಿಯೋ ಫೋನ್ ನೆಕ್ಸ್ಟ್ ನ್ನು ಈ ವರ್ಷದ ಗಣೇಶ ಚತುರ್ಥಿಯಂದು ಸೆಪ್ಟೆಂಬರ್ 10 ರಂದು ಬಿಡುಗಡೆ ಮಾಡುವುದಾಗಿ ಅಂಬಾನಿ ಹೇಳಿದ್ದಾರೆ.

ರಿಲಯನ್ಸ್ ಕಂಪನಿ ಮೂರು ವರ್ಷಗಳಲ್ಲಿ  ಹಸಿರು ಇಂಧನ ವ್ಯವಹಾರದಲ್ಲಿ 75 ಸಾವಿರ ಕೋಟಿ ರೂ.ವೆಚ್ಚ ಮಾಡಲಿದೆ. ಗುಜರಾತಿನ ಜಾಮ್ ನಗರದಲ್ಲಿ  5 ಸಾವಿರ ಎಕರೆ ಹಬ್ ನಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ. ಜಾಮ್ ನಗರ ನಮ್ಮ ಹಳೆಯ ವ್ಯವಹಾರದ ತೊಟ್ಟಿಲು ಎಂದು ಅಂಬಾನಿ ಹೇಳಿದರು.

ಧೀರೂಬಾಯಿ ಅಂಬಾನಿ ಹಸಿರು ಇಂಧನ ಗಿಗಾ ಕಾಂಪ್ಲೆಕ್ಸ್ ವಿಶ್ವದಲ್ಲಿಯೇ ನವೀಕರಿಸಬಹುದಾದ ಇಂಧನ  ಉತ್ಪಾದನಾ ಸೌಲಭ್ಯಗಳಲ್ಲಿ ಒಂದಾಗಲಿದೆ. ರಿಲಯನ್ಸ್ ತನ್ನ ಹೊಸ ಉದ್ಯಮಕ್ಕಾಗಿ ಮೂರು ಹಂತದ ಯೋಜನೆಯನ್ನು ಬೆಂಬಲಿಸುತ್ತದೆ ಎಂದು ಅವರು ತಿಳಿಸಿದರು.

ತನ್ನ ಕಾರ್ಯತಂತ್ರದ ಭಾಗವಾಗಿ, ಸೌರ ಉತ್ಪಾದನಾ ಘಟಕಗಳು, ಇಂಧನ ಕೋಶ ಉತ್ಪಾದನಾ ಸೌಲಭ್ಯ ಶಕ್ತಿ ಸಂಗ್ರಹಣೆಯನ್ನು ಹೆಚ್ಚಿಸಲು ಬ್ಯಾಟರಿ ಕಾರ್ಖಾನೆ ಮತ್ತು ಹಸಿರು ಹೈಡ್ರೋಜನ್ ಉತ್ಪಾದಿಸಲು ಎಲೆಕ್ಟ್ರೋಲೈಜರ್ ಘಟಕ ಸೇರಿದಂತೆ ನಾಲ್ಕು ಗಿಗಾ ಕಾರ್ಖಾನೆಗಳನ್ನು ನಿರ್ಮಿಸಲು ರಿಲಯನ್ಸ್ ಯೋಜಿಸುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಈ ಸೌಕರ್ಯಕ್ಕಾಗಿ 60 ಸಾವಿರ ಕೋಟಿಯನ್ನು ರಿಲಯನ್ಸ್ ವೆಚ್ಚ ಮಾಡಲಿದೆ ಎಂದು ಅಂಬಾನಿ ಹೇಳಿದರು.

2030 ರ ವೇಳೆಗೆ 100 ಜಿವ್ಯಾಟ್ ಸೌರಶಕ್ತಿ ಸಾಮರ್ಥ್ಯವನ್ನು ಸ್ಥಾಪಿಸಲು ಕಂಪನಿ ಯೋಜಿಸುತ್ತಿದೆ. 2035ರೊಳಗೆ ನಿವ್ವಳ ಶೂನ್ಯ ಇಂಧನ ಮಾಡಲು ರಿಲಯನ್ಸ್ ಬದ್ಧವಾಗಿರುವುದಾಗಿ ಅಂಬಾನಿ ಕಳೆದ ವರ್ಷ ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com