• Tag results for ಚೆನ್ನೈ

ಐಪಿಎಲ್ 2021: ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನು ಆರು ರನ್ ಗಳಿಂದ ಸೋಲಿಸಿದ ಆರ್ ಸಿಬಿ

ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 14ನೇ ಆವೃತ್ತಿಯ ಆರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನು ಆರು ರನ್ ಗಳಿಂದ ಆರ್ ಸಿಬಿ ಸೋಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 

published on : 14th April 2021

ಮದುವೆಗೆ ಪೋಷಕರ ವಿರೋಧ: ವಿಷ ಸೇವಿಸಿ ಪ್ರೇಮಿಗಳ ಆತ್ಮಹತ್ಯೆ

ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನೊಂದ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

published on : 14th April 2021

ಐಪಿಎಲ್ 2021: ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆ 10 ರನ್ ಗಳ ರೋಚಕ ಗೆಲುವು

ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ 14ನೇ ಆವೃತ್ತಿಯ ಐದನೇ ಪಂದ್ಯದಲ್ಲಿ  ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 10 ರನ್ ಗಳ ಅಂತರದಿಂದ  ಮುಂಬೈ ಇಂಡಿಯನ್ಸ್  ಗೆಲುವು ಸಾಧಿಸಿದೆ.

published on : 14th April 2021

ಐಪಿಎಲ್ 2021: ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಕೆಕೆಆರ್ ಗೆ 10 ರನ್ ಗಳ ಗೆಲುವು

ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ 14ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 10 ರನ್ ಗಳ ಅಂತರದಿಂದ ಗೆಲುವು ಸಾಧಿಸಿದೆ.

published on : 11th April 2021

ಸತ್ಯಮಂಗಲಂ ಅರಣ್ಯದಲ್ಲಿ "ನಮ್ಮಪ್ಪ" ಭಾರಿ ನಿಧಿ ಅಡಗಿಸಿಟ್ಟಿದ್ದಾನೆ; ಕಾಡುಗಳ್ಳ ವೀರಪ್ಪನ್ ಪುತ್ರಿ ಸಂಚಲನ ಹೇಳಿಕೆ

ಸತ್ಯಮಂಗಲಂ ಅರಣ್ಯದಲ್ಲಿ ನಮ್ಮ ತಂದೆ ವೀರಪ್ಪನ್ ಭಾರಿ ಪ್ರಮಾಣದ ನಿಧಿ ಅಡಗಿಸಿಟ್ಟಿದ್ದಾರೆ ಎಂದು ಕಾಡುಗಳ್ಳ ವೀರಪ್ಪನ್ ಪುತ್ರಿ ವಿಜಯಲಕ್ಷ್ಮಿ ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ.

published on : 11th April 2021

ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆಯುವುದು ನನ್ನ ಕನಸು: ಆರ್ ಸಿಬಿ ಬೌಲರ್ ಮೊಹಮ್ಮದ್ ಸಿರಾಜ್

ಟೀಂ ಇಂಡಿಯಾ ಅತಿ ಹೆಚ್ಚಿನ ವಿಕೆಟ್ ಪಡೆಯುವುದು ತನ್ನ ಕನಸಾಗಿದೆ ಎಂದು ಉದಯೋನ್ಮುಖ ವೇಗಿ ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.

published on : 8th April 2021

ಮತಗಟ್ಟೆಯಲ್ಲಿ ಅಭಿಮಾನಿಯ ಫೋನ್ ಕಿತ್ತುಕೊಂಡು ಟ್ರೋಲ್ ಗೆ ಗುರಿಯಾದ ತಮಿಳು ಸ್ಟಾರ್ ಅಜಿತ್!ವಿಡಿಯೋ

ಮತಗಟ್ಟೆ ಬಳಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದ ಮಾಸ್ಕ್ ಧರಿಸದ ಅಭಿಮಾನಿಯೊಬ್ಬರ ಫೋನ್ ನ್ನು ಕಾಲಿವುಡ್ ಸೂಪರ್ ಸ್ಟಾರ್ ಅಜಿತ್ ಕಸಿದುಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

published on : 6th April 2021

ಸೈಕಲ್ ನಲ್ಲಿ ಬಂದು ಮತದಾನ ಮಾಡಿದ ನಟ ವಿಜಯ್; ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ 'ಮಾಸ್ಟರ್' ನಡೆ?

ತಮಿಳುನಾಡು ವಿಧಾನಸಭೆ ಚುನಾವಣೆಯ ಮತದಾನ ಹಲವು ಪ್ರಮುಖ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದ್ದು, ಸೈಕಲ್ ನಲ್ಲಿ ಬಂದು ಮತದಾನ ಮಾಡುವ ಮೂಲಕ ನಟ ವಿಜಯ್ ಹಲವು ಪ್ರಶ್ನೆಗಳು ಏಳುವಂತೆ ಮಾಡಿದ್ದಾರೆ.

published on : 6th April 2021

ತಮಿಳುನಾಡು ಚುನಾವಣೆ: ಮತದಾರರ ಪಟ್ಟಿಯಲ್ಲಿ ಶಶಿಕಲಾ ಹೆಸರು ನಾಪತ್ತೆ, ಆಯೋಗಕ್ಕೆ ದೂರು

ತಮಿಳುನಾಡು ವಿಧಾನಸಭೆ ಚುನಾವಣೆ ಮತದಾನ ಚಾಲ್ತಿಯಲ್ಲಿರುವಂತೆಯೇ ಮಾಜಿ ಸಿಎಂ ದಿ. ಜಯಲಲಿತಾ ಅವರ ಆಪ್ತೆ, ವಿ.ಕೆ.ಶಶಿಕಲಾ ಅವರು ಚುನಾವಣಾ ಆಯೋಗದ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

published on : 6th April 2021

ಆರ್ ಸಿಬಿ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಗೆ ಕೋವಿಡ್-19 ಪಾಸಿಟಿವ್ ದೃಢ!

ಆರ್ ಸಿಬಿ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಗೆ ಭಾನುವಾರ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.  ಆರ್ ಸಿಬಿ ಆರಂಭಿಕ ಆಟಗಾರನನ್ನು ಉಳಿದ ಆಟಗಾರರಿಂದ ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

published on : 4th April 2021

ತಮಿಳುನಾಡು ಚುನಾವಣೆಗೆ ದಿನಗಣನೆ: ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಪುತ್ರಿಯ ಮನೆ ಮೇಲೆ ಐಟಿ ದಾಳಿ

ತಮಿಳುನಾಡು ಚುನಾವಣೆಗೆ ದಿನಗನಣೆ ಆರಂಭವಾಗಿರುವಂತೆಯೇ ಇತ್ತ ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳು ಡಿಎಂಕೆ ಪಕ್ಷಕ್ಕೆ ಶಾಕ್ ನೀಡಿದ್ದು, ಸ್ಟಾಲಿನ್ ಅವರ ಅಳಿಯ ಸಬರಿಸನ್ ಮತ್ತು ಅವರ ಸ್ನೇಹಿತರ ಮನೆಗಳು ಸೇರಿದಂತೆ 8 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ,

published on : 2nd April 2021

ಆರ್ ಎಸ್ಎಸ್, ಬಿಜೆಪಿ ವಿಷವಿದ್ದಂತೆ: ಮಲ್ಲಿಕಾರ್ಜುನ ಖರ್ಗೆ

ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿ ವಿರುದ್ಧ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

published on : 2nd April 2021

ಐಪಿಎಲ್ 2021: ಆರ್ ಸಿಬಿ ತಂಡ ಸೇರಲು ಚೆನ್ನೈ ತಲುಪಿದ ಕೊಹ್ಲಿ, ಏಳು ದಿನಗಳ ಕ್ವಾರಂಟೈನ್!

ಟೀಂ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ತನ್ನ ಐಪಿಎಲ್ ತಂಡವನ್ನು ಸೇರಲು ಗುರುವಾರ ಇಲ್ಲಿಗೆ ಆಗಮಿಸಿದ್ದಾರೆ. ಐಪಿಎಲ್  ಆರಂಭಕ್ಕೂ ಮುನ್ನ ಏಳು ದಿನ ಕ್ವಾರಂಟೈನ್ ನಲ್ಲಿ ಅವರು ಇರಬೇಕಾಗುತ್ತದೆ.

published on : 1st April 2021

ಪುದುಚೇರಿಯಲ್ಲಿ ಮತದಾನ ಮುಂದೂಡಬಹುದೇ? ಬಿಜೆಪಿ ವಿರುದ್ಧದ ದೂರುಗಳ ಕುರಿತು ಆಯೋಗವನ್ನು ಕೇಳಿದ ಹೈಕೋರ್ಟ್ 

ಪುದುಚೇರಿ ಬಿಜೆಪಿ ಘಟಕ ಮತದಾರರ ಆಧಾರ್ ಮಾಹಿತಿ ಹೊಂದಿದೆ ಎಂಬ ಆರೋಪದ ಬಗ್ಗೆ ಗಂಭೀರ ತನಿಖೆಯ ಅಗತ್ಯವಿದೆ ಎಂದು ಶುಕ್ರವಾರ ಹೇಳಿರುವ ಮದ್ರಾಸ್ ಹೈಕೋರ್ಟ್, ಕೇಂದ್ರಾಡಳಿತ ಪ್ರದೇಶದಲ್ಲಿ ಏಪ್ರಿಲ್ 6 ರಂದು ನಡೆಯಲಿರುವ ಚುನಾವಣೆಯನ್ನು ಮುಂದೂಡಬಹುದೇ ಎಂದು ಚುನಾವಣಾ ಆಯೋಗವನ್ನು ಕೇಳಿದೆ.

published on : 26th March 2021

ರಾಷ್ಟ್ರಧ್ವಜ ಹೋಲುವ ಕೇಕ್ ಕತ್ತರಿಸುವುದು ಅಪರಾಧವಲ್ಲ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

ಅಶೋಕ ಚಕ್ರ ಸಹಿತ ತ್ರಿವರ್ಣವಿರುವ ಕೇಕ್ ಕತ್ತರಿಸುವುದು ರಾಷ್ಟ್ರಧ್ವಜಕ್ಕೆ ಹಾಗೂ ದೇಶಭಕ್ತಿಗೆ ತೋರುವ ಅಗೌರವ ಅಲ್ಲ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

published on : 23rd March 2021
1 2 3 4 5 6 >