T20 World Cup 2026: ಟಿಮ್ ಸೈಫರ್ಟ್ ಭರ್ಜರಿ ಅರ್ಧಶತಕ, ಅಪ್ಗಾನಿಸ್ತಾನ ವಿರುದ್ಧ ನ್ಯೂಜಿಲೆಂಡ್‌ಗೆ ಗೆಲುವು!

ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ, ಜೇಕಬ್ ಡಫಿ ಮತ್ತು ರಚಿನ್ ರವೀಂದ್ರ ತಲಾ ಒಂದು ವಿಕೆಟ್ ಕಬಳಿಸಿದರೆ, ಲಾಕಿ ಫರ್ಗ್ಯೂಸನ್ 2 ವಿಕೆಟ್ ಪಡೆದುಕೊಂಡರು.
T20 WC: Seifert, Phillips help New Zealand move past Afghanistan in Group D opener
ಗ್ರೂಪ್ ಡಿ ಆರಂಭಿಕ ಪಂದ್ಯದಲ್ಲಿ ಅಫ್ಗಾನಿಸ್ತಾನವನ್ನು ಸೋಲಿಸಲು ನ್ಯೂಜಿಲೆಂಡ್‌ಗೆ ಸೈಫರ್ಟ್, ಫಿಲಿಪ್ಸ್ ನೆರವು
Updated on

ಚೆನ್ನೈ: ಟಿಮ್ ಸೈಫರ್ಟ್ ಅವರ ವಿಶಿಷ್ಟ ಆಕ್ರಮಣಕಾರಿ ಅರ್ಧಶತಕವು ಭಾನುವಾರ ಇಲ್ಲಿ ನಡೆದ ಟಿ20 ವಿಶ್ವಕಪ್‌ನ ಡಿ ಗುಂಪಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ ಐದು ವಿಕೆಟ್‌ಗಳ ಜಯ ಸಾಧಿಸಲು ನೆರವಾಯಿತು.

42 ಎಸೆತಗಳಲ್ಲಿ 65 ರನ್ ಗಳಿಸಿದ ಸೈಫರ್ಟ್ ಅವರ ಇನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಈ ಮೂಲಕ ಕಿವೀಸ್‌ನ ವಲಯಗಳಲ್ಲಿ ಏಕೆ 'ಬಾಮ್ ಬಾಮ್' ಎಂದು ಅಡ್ಡಹೆಸರು ಹೊಂದಿದ್ದಾರೆಂದು ತೋರಿಸಿದರು.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಗಾನಿಸ್ತಾನ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಆರಂಭಿಸಿದ ರಹಮಾನುಲ್ಲಾ ಗುರ್ಬಾಜ್ 27, ಇಬ್ರಾಹಿಂ ಜರ್ದಾನ್ 10, ಗುಲ್ಬಾಡಿನ್ ನಯೀಬ್ 63 ರನ್‌ಗಳೊಂದಿಗೆ ಆರು ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿತು.

ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ, ಜೇಕಬ್ ಡಫಿ ಮತ್ತು ರಚಿನ್ ರವೀಂದ್ರ ತಲಾ ಒಂದು ವಿಕೆಟ್ ಕಬಳಿಸಿದರೆ, ಲಾಕಿ ಫರ್ಗ್ಯೂಸನ್ 2 ವಿಕೆಟ್ ಪಡೆದುಕೊಂಡರು.

T20 WC: Seifert, Phillips help New Zealand move past Afghanistan in Group D opener
T20 ವಿಶ್ವಕಪ್ 2026: ಮಕಾಡೆ ಮಲಗಿದ USA ಬ್ಯಾಟಿಂಗ್; ಭಾರತಕ್ಕೆ ಭರ್ಜರಿ ಜಯ, ಶುಭಾರಂಭ!

ಅಪ್ಗಾನಿಸ್ತಾನ ನೀಡಿದ 183 ರನ್ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಆರಂಭಿಕರಾದ ಟಿಮ್ ಸೈಫರ್ಟ್ 42 ಎಸೆತಗಳಲ್ಲಿ 65 ರನ್ ಗಳಿಸುವ ಮೂಲಕ ಮೊಹಮ್ಮದ್ ನಬಿಗೆ ವಿಕೆಟ್ ಒಪ್ಪಿಸಿದರು. ಫಿನ್ ಅಲೆನ್ ಮತ್ತು ರಚಿನ್ ರವೀಂದ್ರ ಯಾವುದೇ ಮೋಡಿ ಮಾಡಲು ಸಾಧ್ಯವಾಗಲಿಲ್ಲ. ಗ್ಲೆನ್ ಫಿಲಿಪ್ಸ್ 25 ಎಸೆತಗಳಲ್ಲಿ 42 ರನ್, ಮಾರ್ಕ್ ಚಾಪ್ಮನ್ 28, ಡೆಲಿರ್ ಮಿಚೆಲ್ 25 ಮತ್ತು ನಾಯಕ ಮಿಚೆಲ್ ಸ್ಯಾಂಟ್ನರ್ ಅವರ 17 ರನ್‌ಗಳ ನೆರವಿನಿಂದ ನ್ಯೂಜಿಲೆಂಡ್ 17.5 ಓವರ್‌ಗಳಲ್ಲಿಯೇ ಗೆಲುವಿನ ನಗೆ ಬೀರಿತು.

ಅಫ್ಗಾನಿಸ್ತಾನದ ಪರ ಮುಜೀಬ್ ಉರ್ ರೆಹಮಾನ್ 2, ಅಜ್ಮತುಲ್ಲಾ ಒಮರ್ಜಾಯ್ 1, ನಾಯಕ ರಶೀದ್ ಖಾನ್ 1 ಮತ್ತು ಮೊಹಮ್ಮದ್ ನಬಿ 1 ವಿಕೆಟ್ ಕಿತ್ತುಹಾಕಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com