Wellington Test: ಸಂಕಷ್ಟದಲ್ಲಿದ್ದ ನ್ಯೂಜಿಲೆಂಡ್ ಫಿಲಿಪ್ಸ್-ನಿಕೋಲ್ಸ್ ಆಸರೆ, ಮೊದಲ ದಿನದಾಟದ ಅಂತ್ಯಕ್ಕೆ NZ 243/5

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಹೆನ್ರಿ ನಿಕೋಲ್ಸ್ (113) ಶತಕ ಮತ್ತು ಗ್ಲೇನ್ ಫಿಲಿಪ್ಸ್ (94) ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 243ರನ್ ಕಲೆಹಾಕಿದೆ.
Bumrah picks 3rd wickets
ಜಸ್ ಪ್ರೀತ್ ಬುಮ್ರಾ ಮಾರಕ ಬೌಲಿಂಗ್
Updated on: 

ವೆಲ್ಲಿಂಗ್ಟನ್: ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ತೀವ್ರ ಸಂಕಷ್ಟದಲ್ಲಿದ್ದ ನ್ಯೂಜಿಲೆಂಡ್ ತಂಡ ದಿನದಾಟದ ಅಂತ್ಯಕ್ಕೆ ಚೇತರಿಸಿಕೊಂಡಿದ್ದು, ಗ್ಲೇನ್ ಫಿಲಿಪ್ಸ್ ಮತ್ತು ಹೆನ್ರಿ ನಿಕೋಲಸ್ ಆಸರೆಯಾಗಿದ್ದಾರೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಜಸ್ ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ಗೆ ತತ್ತರಿಸಿ ಕೇವಲ 70 ರನ್ ಗಳ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದ ನ್ಯೂಜಿಲೆಂಡ್ ಚೇತರಿಸಿಕೊಂಡಿದೆ.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಹೆನ್ರಿ ನಿಕೋಲ್ಸ್ (113) ಶತಕ ಮತ್ತು ಗ್ಲೇನ್ ಫಿಲಿಪ್ಸ್ (94) ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 243ರನ್ ಕಲೆಹಾಕಿದೆ.

113 ರನ್ ಗಳಿಸಿ ಶತಕ ಸಿಡಿಸಿರುವ ಹೆನ್ರಿ ನಿಕೋಲಸ್ ಮತ್ತು 94 ರನ್ ಗಳಿಸಿ ಶತಕದ ಅಂಚಿನಲ್ಲಿರುವ ಗ್ಲೇನ್ ಫಿಲಿಪ್ಸ್ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

Bumrah picks 3rd wickets
Wellington Test: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ, ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಕಿವೀಸ್ 99/5

ಬುಮ್ರಾ ಮಾರಕ ದಾಳಿ

ಇನ್ನು ಪಂದ್ಯದ ಆರಂಭದಿಂದಲೇ ಭಾರತೀಯ ಬೌಲರ್‌ಗಳು ನ್ಯೂಜಿಲೆಂಡ್ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿದ್ದಾರೆ. ನಾಯಕ ಟಾಮ್ ಲ್ಯಾಥಮ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಬುಮ್ರಾ ವಿಕೆಟ್ ಬೇಟೆ ಆರಂಭಿಸಿದ್ದರು. ಬಳಿಕ ಡ್ಯಾರಿಲ್ ಮಿಚೆಲ್ ಅವರನ್ನೂ ಪೆವಿಲಿಯನ್‌ಗೆ ಕಳುಹಿಸಿದ್ದರು.

ಇತ್ತ ಅನ್ಶುಲ್ ಕಾಂಬೋಜ್ ಅವರು ಡೆವೊನ್ ಕಾನ್ವೇ ಅವರನ್ನು ನಾಲ್ಕು ರನ್‌ಗಳಿಗೆ ಔಟ್ ಮಾಡಿದರೆ, ಆಕಾಶ್ ದೀಪ್ ಅವರು ರಚಿನ್ ರವೀಂದ್ರ ಅವರ ವಿಕೆಟ್ ಪಡೆದರು.

ಭಾರತ ತಂಡದ ನಾಯಕ ಶುಭಮನ್ ಗಿಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅವರ ನಿರ್ಧಾರಕ್ಕೆ ವೇಗಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಪಡೆಯನ್ನುಕಾಡಿದರು.

ಇಂದಿನ ಪಂದ್ಯದಲ್ಲಿ ಭಾರತದ ಜಸ್ ಪ್ರೀತ್ ಬುಮ್ರಾ 3 ವಿಕೆಟ್ ಪಡೆದರೆ, ಅನ್ಶುಲ್ ಕಂಬೋಜ್ ಮತ್ತು ಆಕಾಶ್ ದೀಪ್ ತಲಾ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X