Wellington Test: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ, ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಕಿವೀಸ್ 99/5

ಮೊದಲ ಓವರ್ ನಲ್ಲೇ ಜಸ್ ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದರು. ಖಾತೆಯೇ ತೆರೆಯದೇ ಕಿವೀಸ್ ನಾಯಕ ಟಾಮ್ ಲಾಥಮ್ ಕ್ಲೀನ್ ಬೌಲ್ಡ್ ಆದರು. ಬಳಿಕ ತಮ್ಮ ಎರಡನೇ ಓವರ್ ನಲ್ಲಿಯೂ ಮ್ಯಾಜಿಕ್ ಮಾಡಿದ ಬುಮ್ರಾ..
Bumrah picks 3rd wickets
ಜಸ್ ಪ್ರೀತ್ ಬುಮ್ರಾ ಮಾರಕ ಬೌಲಿಂಗ್
Updated on: 

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಬ್ಯಾಟಿಂಗ್ ಆರಂಭಿಸಿರುವ ನ್ಯೂಜಿಲೆಂಡ್ ತಂಡಕ್ಕೆ ಮರ್ಮಾಘಾತ ನೀಡಿದೆ.

ವೆಲ್ಲಿಂಗ್ಟನ್`ನ ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಪಂದ್ಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭ್ ಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡಕ್ಕೆ ಭಾರತದ ವೇಗಿಗಳು ಆಘಾತ ನೀಡಿದರು.

ಮೊದಲ ಓವರ್ ನಲ್ಲೇ ಜಸ್ ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದರು. ಖಾತೆಯೇ ತೆರೆಯದೇ ಕಿವೀಸ್ ನಾಯಕ ಟಾಮ್ ಲಾಥಮ್ ಕ್ಲೀನ್ ಬೌಲ್ಡ್ ಆದರು. ಬಳಿಕ ತಮ್ಮ ಎರಡನೇ ಓವರ್ ನಲ್ಲಿಯೂ ಮ್ಯಾಜಿಕ್ ಮಾಡಿದ ಬುಮ್ರಾ ಡೆವಾನ್ ಕಾನ್ವೆ ಅವರ ವಿಕೆಟ್ ಉರುಳಿಸಿದರು.

ಭೋಜನ ವಿರಾಮದ ವೇಳೆಗೆ ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ಮೂರನೇ ವಿಕೆಟ್ ಕಬಳಿಸುವ ಮೂಲಕ ಆತಿಥೇಯ ನ್ಯೂಜಿಲೆಂಡ್ ತಂಡಕ್ಕೆ ಮತ್ತೊಂದು ಮರ್ಮಾಘಾತ ನೀಡಿದ್ದಾರೆ. ಇದರೊಂದಿಗೆ ಕಿವೀಸ್ ತಂಡ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

Bumrah picks 3rd wickets
ಟೀಂ ಇಂಡಿಯಾ ವಿರುದ್ಧ ICC ಕಠಿಣ ಕ್ರಮ: ಆಟಗಾರರ ಪಂದ್ಯ ಶುಲ್ಕ ಶೇ. 35ರಷ್ಟು ಕಟ್; ಇಲ್ಲಿದೆ ಕಾರಣ...

ಭಾರತದ ವೇಗಿಗಳ ಮಾರಕ ದಾಳಿ

ಪಂದ್ಯದ ಆರಂಭದಿಂದಲೇ ಭಾರತೀಯ ಬೌಲರ್‌ಗಳು ನ್ಯೂಜಿಲೆಂಡ್ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿದ್ದಾರೆ. ನಾಯಕ ಟಾಮ್ ಲ್ಯಾಥಮ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಬುಮ್ರಾ ವಿಕೆಟ್ ಬೇಟೆ ಆರಂಭಿಸಿದ್ದರು. ಬಳಿಕ ಡ್ಯಾರಿಲ್ ಮಿಚೆಲ್ ಅವರನ್ನೂ ಪೆವಿಲಿಯನ್‌ಗೆ ಕಳುಹಿಸಿದ್ದರು.

ಇತ್ತ ಅನ್ಶುಲ್ ಕಾಂಬೋಜ್ ಅವರು ಡೆವೊನ್ ಕಾನ್ವೇ ಅವರನ್ನು ನಾಲ್ಕು ರನ್‌ಗಳಿಗೆ ಔಟ್ ಮಾಡಿದರೆ, ಆಕಾಶ್ ದೀಪ್ ಅವರು ರಚಿನ್ ರವೀಂದ್ರ ಅವರ ವಿಕೆಟ್ ಪಡೆದರು. ಭಾರತ ತಂಡದ ನಾಯಕ ಶುಭಮನ್ ಗಿಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅವರ ನಿರ್ಧಾರಕ್ಕೆ ವೇಗಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಪಡೆಯನ್ನು ಕಾಡುತ್ತಿದ್ದಾರೆ.

ಆರಂಭಿಕ ವಿಕೆಟ್‌ಗಳ ಪತನದ ಬಳಿಕ ನ್ಯೂಜಿಲೆಂಡ್ ತಂಡ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಭಾರತದ ಬೌಲರ್‌ಗಳು ಒತ್ತಡ ಮುಂದುವರಿಸಿದ್ದಾರೆ.

ಪ್ರಸ್ತುತ ಇತ್ತೀಚಿನ ವರದಿಗಳು ಬಂದಾಗ 36.4 ಓವರ್ ನಲ್ಲಿ ನ್ಯೂಜಿಲೆಂಡ್ 5 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದೆ. 53 ರನ್ ಗಳಿಸಿ ಕಿವೀಸ್ ಬ್ಯಾಟಿಂಗ್ ಗೆ ಆಸರೆಯಾಗಿರುವ ಹೆನ್ರಿ ನಿಕೋಲಸ್ ಮತ್ತು ಗ್ಲೇನ್ ಫಿಲಿಪ್ಸ್ 21 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ನ್ಯೂಜಿಲೆಂಡ್ ಪರ ನಾಯಕ ಟಾಮ್ ಲಾಥಮ್ (0), ಡೆವಾನ್ ಕಾನ್ವೆ (4), ರಚಿನ್ ರವೀಂದ್ರ (15), ಡರಿಲ್ ಮಿಚೆಲ್ (1), ಟಾಮ್ ಬ್ಲಂಡಲ್ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದು, ಹೆನ್ರಿ ನಿಕೋಲಸ್ (53) ಮತ್ತು ಗ್ಲೇನ್ ಫಿಲಿಪ್ಸ್ (23) ಕ್ರೀಸ್ ಕಾಯ್ದುಕೊಂಡಿದ್ದಾರೆ.

X