ಭಾರತದಲ್ಲಿ ಸೇವೆ ಪ್ರಾರಂಭಿಸುವುದಕ್ಕಾಗಿ 72 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಖರೀದಿಗೆ ಮುಂದಾದ ಆಕಾಸ ಏರ್‌' ಬ್ರ್ಯಾಂಡ್‌

ದೇಶದ ಖ್ಯಾತ ಷೇರು ಮಾರುಕಟ್ಟೆ ಹೂಡಿಕೆದಾರ ರಾಕೇಶ್ ಝುಂಝುನ್ ವಾಲಾ'ರ "ಆಕಾಶ್ ಏರ್" ಸಂಸ್ಥೆ ಅಮೆರಿಕ ಮೂಲದ ಬೋಯೀಂಗ್ ಸಂಸ್ಥೆಯ 737 ಮ್ಯಾಕ್ಸ್ ನ 72 ವಿಮಾನಗಳನ್ನು ಖರೀದಿಸುತ್ತಿದೆ.
ಬೋಯಿಂಗ್ 737 ಮ್ಯಾಕ್ಸ್ (ಸಂಗ್ರಹ ಚಿತ್ರ)
ಬೋಯಿಂಗ್ 737 ಮ್ಯಾಕ್ಸ್ (ಸಂಗ್ರಹ ಚಿತ್ರ)

ನವದೆಹಲಿ: ದೇಶದ ಖ್ಯಾತ ಷೇರು ಮಾರುಕಟ್ಟೆ ಹೂಡಿಕೆದಾರ ರಾಕೇಶ್ ಝುಂಝುನ್ ವಾಲಾ'ರ "ಆಕಾಸ ಏರ್" ಸಂಸ್ಥೆ ಅಮೆರಿಕ ಮೂಲದ ಬೋಯೀಂಗ್ ಸಂಸ್ಥೆಯ 737 ಮ್ಯಾಕ್ಸ್ ನ 72 ವಿಮಾನಗಳನ್ನು ಖರೀದಿಸುತ್ತಿದೆ.
 
ಭಾರತದಲ್ಲಿ ಸೇವೆಯನ್ನು ಪ್ರಾರಂಭಿಸುವ ಉದ್ದೇಶದಿಂದ ವಿಮಾನಗಳನ್ನು ಖರೀದಿಸುತ್ತಿರುವುದಾಗಿ ಸಂಸ್ಥೆ ನ.16 ರಂದು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. 

737 ಮ್ಯಾಕ್ಸ್ ವಿಭಾಗದ 737-8 ಹಾಗೂ ಗರಿಷ್ಠ ಸಾಮರ್ಥ್ಯದ 737-8-200 ಎಂಬ ಎರಡು ಆವೃತ್ತಿಗಳನ್ನು ಆಕಾಸ ಏರ್ ಆರ್ಡರ್ ಮಾಡಲಾಗಿದೆ ಎಂದು ಬೋಯಿಂಗ್ ಹಾಗೂ ಆಕಾಶ ಏರ್ ಬ್ರಾಂಡ್ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಆಕಾಸ ಏರ್ ಬ್ರ್ಯಾಂಡ್ ನ ವಿಮಾನಗಳ ಕಾರ್ಯನಿರ್ವಹಣೆಗೆ ಕಳೆದ ತಿಂಗಳು ಪ್ರಯಾಣಿಕ ವಿಮಾನಯಾನ ಸಚಿವಾಲಯ ನಿರಾಕ್ಷೇಪಣಾ ಪತ್ರವನ್ನು ನೀಡಿತ್ತು. ಕಡಿಮೆ ಪ್ರಯಾಣ ಬೆಲೆಯ ವಿಮಾನಯಾನ ಸೇವೆಗಳನ್ನು ನೀಡುವುದು ಸಂಸ್ಥೆಯ ಉದ್ದೇಶವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com