ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಹೆಚ್ಚಳ: ಇಂದಿನ ದರ ಹೀಗಿದೆ 

ಎರಡು ದಿನಗಳ ಸ್ಥಿರತೆ ಬಳಿಕ ಶನಿವಾರ ತಿಂಗಳಾಂತ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಎರಡು ದಿನಗಳ ಸ್ಥಿರತೆ ಬಳಿಕ ಶನಿವಾರ ತಿಂಗಳಾಂತ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ. 

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಇಂದಿನ ದರವೆಷ್ಟು?: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ ಮತ್ತು ಲೀಟರ್ ಡೀಸೆಲ್ ದರದಲ್ಲಿ ಕ್ರಮವಾಗಿ 35 ಪೈಸೆ ಹೆಚ್ಚಳವಾಗಿದೆ. ಇದರಂತೆ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ ದರ 108 ರೂಪಾಯಿ 99 ಪೈಸೆಗೆ ಏರಿಕೆಯಾಗಿದ್ದು,  ಡೀಸೆಲ್​ ದರ ಸಹ 100ರ ಗಡಿ ತಲುಪಿ 97 ರೂಪಾಯಿ 72 ಪೈಸೆಯಾಗಿದೆ. ಇಂಧನ ದರ ಗರಿಷ್ಠ ಮಟ್ಟ ತಲುಪಿದೆ.

ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 114 ರೂಪಾಯಿ 81 ಪೈಸೆಯಾಗಿದ್ದು, ಡೀಸೆಲ್ ದರ 105 ರೂಪಾಯಿ 86 ಪೈಸೆಯಾಗಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 109 ರೂಪಾಯಿ 46 ಪೈಸೆಯಾಗಿದ್ದು, ಡೀಸೆಲ್ ದರ 100 ರೂಪಾಯಿ 84 ಪೈಸೆಯಾಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 105 ರೂಪಾಯಿ 74 ಪೈಸೆಯಾಗಿದ್ದು, ಡೀಸೆಲ್ ಬೆಲೆ 101 ರೂಪಾಯಿ 92 ಪೈಸೆಯಾಗಿದೆ.

ಇನ್ನು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ 112 ರೂಪಾಯಿ 43 ಪೈಸೆಯಾಗಿದ್ದು, ಡೀಸೆಲ್ ಬೆಲೆ 103 ರೂಪಾಯಿ 35 ಪೈಸೆಯಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com