ಭಾರತದಲ್ಲಿನ ಸುದ್ದಿ ತಾಣಗಳನ್ನು ಮುಚ್ಚಿದ ಯಾಹೂ
ನವದೆಹಲಿ: ಇಂಟರ್ನೆಟ್ ದಿಗ್ಗಜ ಸಂಸ್ಥೆ ಯಾಹೂ ಭಾರತದಲ್ಲಿನ ತನ್ನ ಸುದ್ದಿ ತಾಣವನ್ನು ಮುಚ್ಚಿದೆ. ನೂತನ ನೇರ ವಿದೇಶಿ ಹೂಡಿಕೆ(ಎಫ್ ಡಿ ಐ) ನಿಯಮಾವಳಿಯಿಂದಾಗಿ ಸಂಸ್ಥೆಯ ಮೇಲೆ ವಿದೇಶಿ ಮಾಲಕತ್ವಕ್ಕೆ ನಿರ್ಬಂಧ ವಿಧಿಸಲಾಗಿರುವುದರಿಂದ ಸಂಸ್ಥೆಯನ್ನು ನಡೆಸುವುದು ಕಷ್ಟವಾಗಿದೆ ಎಂದು ಯಾಹೂ ತಿಳಿಸಿದೆ.
ಯಾಹೂ ನ್ಯೂಸ್, ಯಾಹೂ ಕ್ರಿಕೆಟ್, ಫೈನಾನ್ಸ್, ಎಂಟರ್ಟೈನ್ಮಂಟ್ ಮುಚ್ಚಲ್ಪಟ್ಟಿರುವ ಯಾಹೂ ಅಂಗಸಂಸ್ಥೆಗಳಾಗಿವೆ. ಯಾಹೂ ಇ-ಮೇಲ್ ಮತ್ತು ಯಾಹೂ ಸರ್ಚ್ ಅನ್ನು ಮುಚ್ಚಲಾಗುವುದಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಯಾಹೂ ಸಂಸ್ಥೆಯನ್ನು ಅಮೆರಿಕದ ವೆರಿಜಾನ್ ಸಂಸ್ಥೆ 2017ರಲ್ಲಿ ಖರೀದಿ ಮಾಡಿತ್ತು. ಭಾರತದಲ್ಲಿ ಸುದ್ದಿ ಪ್ರಕಟಣೆಯಲ್ಲಿ ತೊಡಗಿರುವ ವಿದೇಶಿ ಸಂಸ್ಥೆಗಳು ಭಾರತದಲ್ಲಿನ ಕಚೇರಿ ನಿರ್ವಹಣೆಯಲ್ಲಿ ಕಡಿಮೆ ಅಧಿಕಾರ ಹೊಂದಿರುವಂತೆ ನೂತನ ಎಫ್ ಡಿ ಐ ನಿಯಮಾವಳಿಯಲ್ಲಿ ಹೇಳಲಾಗಿದೆ. ಇದು ಯಾಹೂ ಸಂಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಹೀಗಾಗಿ ಎಲ್ಲಾ ಸಾಧ್ಯತೆ ಬಾಧ್ಯತೆಗಳನ್ನು ಪರಿಗಣನೆಗೆ ತೆಗೆದುಕೊಂಡು ತಾನು ಈ ನಿರ್ಧಾರಕ್ಕೆ ಬಂದಿರುವುದಾಗಿ ಸಂಸ್ಥೆ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ