'ಓಮಿಕ್ರಾನ್' ಎಫೆಕ್ಟ್: ಲಾಭದ ಹೊಳೆ ಹರಿಸುತ್ತಿದೆ; ಮೌಲ್ಯ ಹೆಚ್ಚಿಸಿಕೊಂಡ ಕ್ರಿಫ್ಟೋ ಕರೆನ್ಸಿ!

ಇಡೀ ಪ್ರಪಂಚವನ್ನು ತಲ್ಲಣಗೊಳಿಸುತ್ತಿರುವ ಹೊಸ ರೂಪಾಂತರಿ. ಕೊರೊನಾ ವೈರಸ್ ರೂಪಾಂತರಿ 'ಓಮಿಕ್ರಾನ್' ವೇಗವಾಗಿ ವ್ಯಾಪಿಸುವ ಮೂಲಕ ಇನ್ನೂ ಎಂತಹ ದುರಂತಕ್ಕೆ ಹಾದಿಮಾಡಿಕೊಡಲಿದೆಯೋ ಎಂಬ ಭಯ ಮೂಡಿಸಿದೆ. ಆದರೆ ಈ ಹೆಸರು ಅಲ್ಲಿ ಲಾಭದ ಹೊಳೆಯನ್ನೇ ಹರಿಸುತ್ತಿದೆ.
ಕ್ರಿಪ್ಟೋ ಕರೆನ್ಸಿ
ಕ್ರಿಪ್ಟೋ ಕರೆನ್ಸಿ

ನವದೆಹಲಿ: ಇಡೀ ಪ್ರಪಂಚವನ್ನು ತಲ್ಲಣಗೊಳಿಸುತ್ತಿರುವ ಹೊಸ ರೂಪಾಂತರಿ. ಕೊರೊನಾ ವೈರಸ್ ರೂಪಾಂತರಿ 'ಓಮಿಕ್ರಾನ್' ವೇಗವಾಗಿ ವ್ಯಾಪಿಸುವ ಮೂಲಕ ಇನ್ನೂ ಎಂತಹ ದುರಂತಕ್ಕೆ ಹಾದಿಮಾಡಿಕೊಡಲಿದೆಯೋ ಎಂಬ ಭಯ ಮೂಡಿಸಿದೆ. ಆದರೆ ಈ ಹೆಸರು ಅಲ್ಲಿ ಲಾಭದ ಹೊಳೆಯನ್ನೇ ಹರಿಸುತ್ತಿದೆ.

ಓಮಿಕ್ರಾನ್ ಹೆಸರಿನಲ್ಲಿ ಒಂದು ಕ್ರಿಪ್ಟೋ ನಾಣ್ಯವಿದೆ. ನವೆಂಬರ್ 27ರಂದು ಈ ಕ್ರಿಪ್ಟೋ ನಾಣ್ಯದ ಮೌಲ್ಯ 64 ಡಾಲರ್‌ ಆಗಿತ್ತು. ಆದರೆ 'Omicron' 'ಕಳವಳಕಾರಿ ರೂಪಾಂತರಿ' ಎಂದು WHO ಘೋಷಿಸಿದ ನಂತರ, ರೂಪಾಂತರಿಯ ಬಗ್ಗೆ ಜಗತ್ತಿನಾದ್ಯಂತ ವ್ಯಾಪಕ ಚರ್ಚೆ ನಡೆದ ನಂತರ ನಾಣ್ಯದ  ಮೌಲ್ಯವನ್ನು ಊಹಾತೀತವಾಗಿ ಹೆಚ್ಚಿಸಿಕೊಂಡಿದೆ.

ನವೆಂಬರ್ 29ರಂದು, Omicronನ ಮಾರುಕಟ್ಟೆ ಮೌಲ್ಯ 692 ಡಾಲರ್‌ ಗಳಿಗೆ ತಲುಪಿತ್ತು. ನವೆಂಬರ್ 30ರಂದು, ಆರಂಭಿಕ ಬೆಲೆ ಶೇ 900ರಷ್ಟು ಏರಿಕೆಯಾಗಿ 689 ಡಾಲರ್‌ ಗಳಿಗೆ ತಲುಪಿತ್ತು. ಅಂತಿಮವಾಗಿ, ಮಂಗಳವಾರ 420 ಡಾಲರ್‌ಗಳಿಗೆ ಕುಸಿದಿದೆ. ಈ ಮೂಲಕ ಕ್ರಿಪ್ಟೋ ಮಾರುಕಟ್ಟೆಯಲ್ಲಿ ನಾಣ್ಯ ತನ್ನದೇ ಹವಾ ಪ್ರದರ್ಶಿಸುತ್ತಿದೆ.   

ಓಮಿಕ್ರಾನ್ ಕರೆನ್ಸಿಗೆ ಯಾವುದೇ ಮಾನ್ಯತೆ, ಬೆಂಬಲವಿಲ್ಲ. ಡೋಜ್‌ ಕಾಯಿನ್‌ ನಂತೆ ಅಂದಾಜುಗಳ ನಡುವೆ ಮೌಲ್ಯದಲ್ಲಿ  ಏರಿಕೆ ಇಳಿಕೆ ಕಂಡುಕೊಳ್ಳುತ್ತದೆ. Omicron ಎಚ್ಚರಿಕೆಯ ನಂತರ ಡಿಜಿಟಲ್ ವಹಿವಾಟಿನಲ್ಲಿ ಬಿಟ್‌ಕಾಯಿನ್ ಹಾಗೂ ಇತರ ನಾಣ್ಯಗಳ ಮೌಲ್ಯ ಲಾಭದಲ್ಲಿಯೇ  ಮುಂದುವರಿದಿರುವುದು ವಿಶೇಷ.    

ಕೊರೊನಾ ವೈರಸ್‌ ಹೊಸ ವೇರಿಯಂಟ್‌ ಬಿ.1.1.529 ಗ್ರೀಕ್  24 ವರ್ಣಮಾಲೆಯ 15ನೇ ಅಕ್ಷರದ ಆಧಾರದ ಮೇಲೆ ಒಮಿಕ್ರಾನ್‌ ಹೆಸರನ್ನು ಫೈಲೋಜೆನೆಟಿಕ್ ಅಸೈನ್‌ಮೆಂಟ್‌ ಆಫ್‌ ನೇಮ್ಡ್‌ ಗ್ಲೋಬಲ್‌ ಔಟ್‌ ಬ್ರೇಕ್‌ ಎಂಬ   ಸಂಸ್ಥೆ ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com