ಕೋವಿಡ್ 3ನೇ ಅಲೆ ಆತಂಕದ ನಡುವೆ ಸಿಹಿಸುದ್ದಿ; ಜೂನ್ ನಲ್ಲಿ ನೇಮಕಾತಿ ಚಟುವಟಿಕೆಯಲ್ಲಿ ಶೇ.15ರಷ್ಟು ಏರಿಕೆ!

ಕೋವಿಡ್ 3ನೇ ಅಲೆ ಆತಂಕದ ನಡುವೆಯೇ ಕೊಂಚ ಸಮಾಧಾನಕರ ಸುದ್ದಿ ಬಂದಿದ್ದು, ಜೂನ್ ತಿಂಗಳಲ್ಲಿ ದೇಶದ ನೇಮಕಾತಿ ಚಟುವಟಿಕೆಯಲ್ಲಿ ಶೇ.15ರಷ್ಟು ಏರಿಕೆ ಕಂಡುಬಂದಿದೆ ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೋವಿಡ್ 3ನೇ ಅಲೆ ಆತಂಕದ ನಡುವೆಯೇ ಕೊಂಚ ಸಮಾಧಾನಕರ ಸುದ್ದಿ ಬಂದಿದ್ದು, ಜೂನ್ ತಿಂಗಳಲ್ಲಿ ದೇಶದ ನೇಮಕಾತಿ ಚಟುವಟಿಕೆಯಲ್ಲಿ ಶೇ.15ರಷ್ಟು ಏರಿಕೆ ಕಂಡುಬಂದಿದೆ ಎಂದು ಹೇಳಲಾಗಿದೆ.

ಈ ಕುರಿತಂತೆ ಖ್ಯಾತ ಔದೋಗಿಕ ಶೋಧ ತಾಲತಾಣ ನೌಕ್ರಿ.ಡಾಮ್ 'ನೌಕ್ರಿ ಜಾಬ್‌ಸ್ಪೀಕ್' ವರದಿ ಬಿಡುಗಡೆ ಮಾಡಿದ್ದು, ಭಾರತದ ನೇಮಕಾತಿ ಪ್ರವೃತ್ತಿಗಳು ಜೂನ್‌ನಲ್ಲಿ ಶೇಕಡಾ 15 ರಷ್ಟು ಏರಿಕೆಯಾಗಿದ್ದು, 2,359 ಪೋಸ್ಟಿಂಗ್ ಗಳಿಗೆ ಏರಿಕೆಯಾಗಿದೆ. ಈ ಪ್ರಮಾಣ ಮೇ ತಿಂಗಳಿನಲ್ಲಿ 2,047ರಷ್ಟಿತ್ತು  ಎಂದು ವರದಿಯಲ್ಲಿ ಹೇಳಲಾಗಿದೆ.

ಇದು ದೇಶಾದ್ಯಂತ ನೇಮಕಾತಿ ಚಟುವಟಿಕೆಯ ಸ್ಥಿತಿಸ್ಥಾಪಕತ್ವ ಮತ್ತು ಚೇತರಿಕೆಯ ಸೂಚನೆಯಾಗಿದ್ದು, ವಿಶೇಷವಾಗಿ ಏಪ್ರಿಲ್‌ನಲ್ಲಿ ಶೇಕಡಾ 15 ರಷ್ಟು ಕುಸಿದ ನಂತರ ಮತ್ತು ಸಾಂಕ್ರಾಮಿಕದ ಹೊರತಾಗಿಯೂ ಮೇ ತಿಂಗಳಲ್ಲಿ ಸ್ಥಿರತೆ ಕಾಯ್ದುಕೊಂಡಿತ್ತು.   

ನೌಕ್ರಿ ಜಾಬ್‌ಸ್ಪೀಕ್ ಮಾಸಿಕ ಸೂಚ್ಯಂಕವಾಗಿದ್ದು, ನೌಕ್ರಿ.ಕಾಮ್ ವೆಬ್‌ಸೈಟ್‌ನಲ್ಲಿನ ಉದ್ಯೋಗ ಪಟ್ಟಿಗಳ ಆಧಾರದ ಮೇಲೆ ನೇಮಕ ಚಟುವಟಿಕೆಯನ್ನು ಲೆಕ್ಕಹಾಕುತ್ತದೆ ಮತ್ತು ದಾಖಲಿಸುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com