ಭತ್ತದ ಪ್ರತಿ ಕ್ವಿಂಟಲ್ ಕನಿಷ್ಠ ಬೆಂಬಲ ಬೆಲೆ 1,940 ರೂಪಾಯಿಗೆ ಏರಿಸಿದ ಕೇಂದ್ರ ಸರ್ಕಾರ!

2021-22ರ ಬೆಳೆ ವರ್ಷಕ್ಕೆ ಭತ್ತದ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯನ್ನು ಪ್ರತಿ ಕ್ವಿಂಟಲ್‌ಗೆ 72 ರೂಪಾಯಿ ಏರಿಕೆ ಮಾಡಿದ್ದು ಒಟ್ಟಾರೆ ಕ್ವಿಂಟಲ್‌ ಬೆಲೆ 1,940 ರೂ.ಗೆ ಏರಿಕೆಯಾಗಿದೆ. 
ರೈತರು
ರೈತರು

ನವದೆಹಲಿ: 2021-22ರ ಬೆಳೆ ವರ್ಷಕ್ಕೆ ಭತ್ತದ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯನ್ನು ಪ್ರತಿ ಕ್ವಿಂಟಲ್‌ಗೆ 72 ರೂಪಾಯಿ ಏರಿಕೆ ಮಾಡಿದ್ದು ಒಟ್ಟಾರೆ ಕ್ವಿಂಟಲ್‌ ಬೆಲೆ 1,940 ರೂ.ಗೆ ಏರಿಕೆಯಾಗಿದೆ. 

ರೈತರಿಗೆ ಸಹಾಯವಾಗಲೆಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಈ ನಿರ್ಧಾರಕೈಗೊಂಡಿದೆ. ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲಾಗಿದ್ದು ಭವಿಷ್ಯದಲ್ಲಿಯೂ ಇದು ಮುಂದುವರಿಯುತ್ತದೆ ಎಂದು ತಿಳಿಸಿದರು. 

2021-22 ಬೆಳೆ ವರ್ಷಕ್ಕೆ(ಜುಲೈ-ಜೂನ್) ಭತ್ತದ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 1,940 ರೂ.ಗೆ ಹೆಚ್ಚಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಹಿಂದಿನ ವರ್ಷದ ಅವಧಿಯಲ್ಲಿ ಪ್ರತಿ ಕ್ವಿಂಟಲ್‌ಗೆ 1,868 ರೂ. ಇತ್ತು. 

ಭತ್ತವು ಬೇಸಿಗೆಯ ಪ್ರಮುಖ ಬೆಳೆಯಾಗಿದ್ದು, ಇದರ ಬಿತ್ತನೆ ನೈರುತ್ಯ ಮುಂಗಾರು ಆರಂಭದಿಂದ ಪ್ರಾರಂಭವಾಗುತ್ತದೆ. ಜೂನ್ ನಿಂದ ಸೆಪ್ಟೆಂಬರ್ ನಡುವೆ ಸಾಮಾನ್ಯ ಮುಂಗಾರು ಅನ್ನು ಹವಾಮಾನ ಇಲಾಖೆ ನಿರೀಕ್ಷಿಸಿದೆ.

ಅಂತೆಯೇ, ಜೋಳದ ಎಂಎಸ್‌ಪಿಯನ್ನು ಕಳೆದ ವರ್ಷ ಕ್ವಿಂಟಲ್‌ಗೆ 2,150 ರೂ.ಗಳಿಂದ ಪ್ರಸಕ್ತ ವರ್ಷದಲ್ಲಿ ಕ್ವಿಂಟಲ್‌ಗೆ 2,250 ರೂ.ಗೆ ಹೆಚ್ಚಿಸಲಾಗಿದೆ ಎಂದು ತೋಮರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com