ಸತತ ಮೂರನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ: ಇಂದಿನ ಬೆಲೆ ಇಂತಿದೆ...

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತ ಮೂರನೇ ದಿನವೂ ಏರಿಕೆಯಾಗಿದೆ. ಇಂದು ಪೆಟ್ರೋಲ್ ದರ ಲೀಟರ್ ಗೆ 25 ಪೈಸೆ ಮತ್ತು ಡೀಸೆಲ್ ದರ ಲೀಟರ್ ಗೆ 30 ಪೈಸೆ ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತ ಮೂರನೇ ದಿನವೂ ಏರಿಕೆಯಾಗಿದೆ. ಇಂದು ಪೆಟ್ರೋಲ್ ದರ ಲೀಟರ್ ಗೆ 25 ಪೈಸೆ ಮತ್ತು ಡೀಸೆಲ್ ದರ ಲೀಟರ್ ಗೆ 30 ಪೈಸೆ ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳವಾಗುತ್ತಿದ್ದಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಭಾರತದಲ್ಲಿ ತೈಲ ಬೆಲೆ ಹೆಚ್ಚಿಸಿ ಗ್ರಾಹಕರ ಮೇಲೆ ಹಾಕುತ್ತದೆ. 

ರಾಜಧಾನಿ ದೆಹಲಿಯಲ್ಲಿ ಇಂದು ಪೆಟ್ರೋಲ್ ದರ ಲೀಟರ್ ಗೆ 90 ರೂಪಾಯಿ 99 ಪೈಸೆಯಷ್ಟಾಗಿದ್ದರೆ, ಡೀಸೆಲ್ ದರ 81 ರೂಪಾಯಿ 42 ಪೈಸೆಯಷ್ಟಾಗಿದೆ. ಈ ದರ ರಾಜ್ಯದಿಂದ ರಾಜ್ಯಕ್ಕೆ ಸ್ಥಳೀಯ ವ್ಯಾಟ್ ಆಧರಿಸಿ ಬದಲಾಗುತ್ತಿರುತ್ತದೆ.

ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕಳೆದ 18 ದಿನಗಳ ಕಾಲ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ತಡೆಹಿಡಿಯಲಾಗಿತ್ತು. ಇದೀಗ ಸತತ ಮೂರು ದಿನಗಳಿಂದ ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳಲ್ಲಿ ಪೆಟ್ರೋಲ್ ದರ 59 ಪೈಸೆ ಮತ್ತು ಡೀಸೆಲ್ ಬೆಲೆ 69 ಪೈಸೆಯಷ್ಟು ಹೆಚ್ಚಾಗಿದೆ. 

ಪೆಟ್ರೋಲ್ ಚಿಲ್ಲರೆ ಮಾರಾಟದಲ್ಲಿ ಶೇಕಡಾ 60ರಷ್ಟು ತೆರಿಗೆ ರಾಜ್ಯಗಳು ಹೇರಿದರೆ ಡೀಸೆಲ್ ಮೇಲೆ ಶೇಕಡಾ 54ರಷ್ಟು ತೆರಿಗೆ ಹೇರುತ್ತದೆ. ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 32 ರೂಪಾಯಿ 90 ಪೈಸೆ ಸುಂಕ ತೆರಿಗೆ ಮತ್ತು ಡೀಸೆಲ್ ಮೇಲೆ 31 ರೂಪಾಯಿ 80 ಪೈಸೆ ಸುಂಕ ತೆರಿಗೆ ವಿಧಿಸಿದೆ.

ವಾಣಿಜ್ಯ ನಗರ ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಇಂದು 97 ರೂಪಾಯಿ 34 ಪೈಸೆಯಷ್ಟಾಗಿದ್ದು, ಡೀಸೆಲ್ ಬೆಲೆ 88 ರೂಪಾಯಿ 49 ಪೈಸೆಯಾಗಿದೆ. ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ 94 ರೂಪಾಯಿ 01 ಪೈಸೆ ಡೀಸೆಲ್ ಬೆಲೆ 86 ರೂಪಾಯಿ 31 ಪೈಸೆಯಷ್ಟಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com