ಮಾರುಕಟ್ಟೆ ಪ್ರವೇಶಿಸಿದ 15 ನಿಮಿಷಗಳಲ್ಲಿ ಪೇಟಿಎಂ ಷೇರುಗಳು ಪಾತಾಳಕ್ಕೆ!

ಪೇಟಿಎಂ ಸಂಸ್ಥೆ ಷೇರು ಮಾರುಕಟ್ಟೆಗೆ ಪ್ರವೇಶಿಸಿದ ಮೊದಲ 15 ನಿಮಿಷಗಳಲ್ಲಿ ಶೇ.20 ರಷ್ಟು ಕುಸಿತ ಕಂಡಿದೆ. 
ಪೇಟಿಎಂ ಕಂಪೆನಿಯ ಚಿಹ್ನೆ
ಪೇಟಿಎಂ ಕಂಪೆನಿಯ ಚಿಹ್ನೆ

ಮುಂಬೈ: ಪೇಟಿಎಂ ಸಂಸ್ಥೆ ಷೇರು ಮಾರುಕಟ್ಟೆಗೆ ಪ್ರವೇಶಿಸಿದ ಮೊದಲ 15 ನಿಮಿಷಗಳಲ್ಲಿ ಶೇ.20 ರಷ್ಟು ಕುಸಿತ ಕಂಡಿದೆ. ಶೇ.9 ರಷ್ಟು ರಿಯಾಯಿತಿಯನ್ನು ಪೇಟಿಎಂ ಸಂಸ್ಥೆ ನೀಡಿತ್ತು. ಇತ್ತ ಪೇಟಿಎಂ ಷೇರುಗಳ ಮೌಲ್ಯ ಕುಸಿದಿದ್ದರೆ, ಜೊಮಾಟೊ ಮತ್ತು ನೈಕಾ ಷೇರುಗಳು ಏರಿಕೆ ಕಂಡಿವೆ. 

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ)ದಲ್ಲಿ 1,950 ರೂಪಾಯಿಗಳ ಮೂಲಕ ಷೇರು ವಹಿವಾಟು ಪ್ರಾರಂಭವಾಯಿತು. ಬಾಂಬೇ ಷೇರು ವಿನಿಮಯ ಕೇಂದ್ರದಲ್ಲಿ ಇದರ ಬೆಲೆ 1,955 ಇದ್ದು ಮೂಲ ಬೆಲೆ 2,150 ರೂಪಾಯಿಗಳಷ್ಟಿತ್ತು. ಬೆಳಿಗ್ಗೆ 10.25 ಕ್ಕೆ ಷೇರು ವಹಿವಾಟು 1701 ಕ್ಕೆ ಅಂದರೆ ಶೇ.20 ಕ್ಕಿಂತಲೂ ಹೆಚ್ಚು ಕುಸಿತ ಕಂಡಿತ್ತು.

ಇದನ್ನೂ ಓದಿ: ಬ್ಲಾಕ್ ಚೈನ್ ಆಧಾರಿತ ಬಿಟ್ ಕಾಯಿನ್ ಹ್ಯಾಕ್ ಮಾಡುವುದು ಟ್ವೀಟ್ ಮಾಡಿದಷ್ಟು ಸುಲಭವೇ?
 
ಭಾರತದಲ್ಲೇ ಅತಿ ಹೆಚ್ಚು ಅಂದರೆ 18,300 ಕೋಟಿ ರೂಪಾಯಿಗಳಷ್ಟು ಇನಿಷಿಯಲ್ ಪಬ್ಲಿಕ್ ಆಫರಿಂಗ್ ಗೆ ಪೂರ್ಣ ಚಂದಾದಾರತ್ವ ಪಡೆಯುವುದಕ್ಕೆ ಹರಸಾಹಸ ಪಟ್ಟ ಪೇಟಿಎಂ ಕುರಿತು ಹೂಡಿಕೆದಾರರು ಆತಂಕ ಹೊಂದಿದ್ದು, ನಷ್ಟ ಎದುರಿಸುತ್ತಿರುವ ಸಂಸ್ಥೆ ಕೇಳುತ್ತಿರುವ ಮೌಲ್ಯವನ್ನು (ಸುಮಾರು 1.40 ಲಕ್ಷ ಕೋಟಿ ರೂ)  ಖರೀದಿಸಲು ಹಿಂದೇಟು ಹಾಕಿದ್ದಾರೆ. 

ಪೇಟಿಎಂ ನ ಮಾತೃ ಸಂಸ್ಥೆ ಒನ್ 97 ಕಮ್ಯುನಿಕೇಷನ್ಸ್ ಗೆ ರಿಸರ್ಚ್ ಹೌಸ್ ಮ್ಯಾಕ್ವಾರಿ ಕಡಿಮೆ ರೇಟಿಂಗ್ ನೀಡಿದ್ದು, ಈ ಉದ್ಯಮ ಮಾಡಲ್ ಗಮನ ಮತ್ತು ನಿರ್ದೇಶನದ ಕೊರತೆಯನ್ನು ಕಾರಣವಾಗಿ ನೀಡಿತ್ತು. ವಿತರಣೆ ಬೆಲೆಗಿಂತಲೂ ಶೇ.40 ರಷ್ಟು ಕಡಿಮೆ ಅಂದರೆ 1,200 ರೂಪಾಯಿಗಳನ್ನು ಟಾರ್ಗೆಟ್ ಬೆಲೆಯನ್ನಾಗಿ ರಿಸರ್ಚ್ ಹೌಸ್ ಮ್ಯಾಕ್ವಾರಿ ನಿಗದಿಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com